New Delhi: ವನಿತಾ ಹಾಕಿ ಮಾಜಿ ನಾಯಕಿ ರಾಣಿ ರಾಂಪಾಲ್ ನಿವೃತ್ತಿ
Team Udayavani, Oct 25, 2024, 9:16 AM IST
ಹೊಸದಿಲ್ಲಿ: ಭಾರತೀಯ ವನಿತಾ ಹಾಕಿ ತಂಡ ಮಾಜಿ ನಾಯಕಿ ರಾಣಿ ರಾಂಪಾಲ್ ಗುರುವಾರ ನಿವೃತ್ತಿ ಘೋಷಿಸುವ ಮೂಲಕ ತನ್ನ 16 ವರ್ಷಗಳ ವರ್ಣಮಯ ಹಾಕಿ ಬಾಳ್ವೆಗೆ ಅಂತ್ಯ ಹಾಡಿದ್ದಾರೆ.
29ರ ಹರೆಯದ ರಾಂಪಾಲ್ ವನಿತಾ ಹಾಕಿಯ ಅತ್ಯಂತ ಯಶಸ್ವಿ ಆಟ ಗಾರ್ತಿಯರಲ್ಲಿ ಒಬ್ಬರಾಗಿದ್ದರು. 2021ರ ಟೋಕಿಯೋ ಒಲಿಂಪಿಕ್ಸ್ ನಲ್ಲಿ ಭಾರತೀಯ ತಂಡ ನಾಲ್ಕನೇ ಸ್ಥಾನ ಪಡೆದಿರುವುದು ಅವರ ನಾಯಕತ್ವದಲ್ಲಿ ಭಾರತೀಯ ತಂಡದ ಉತ್ಕೃಷ್ಟ ನಿರ್ವಹಣೆಯಾಗಿದೆ. ಪದ್ಮಶ್ರೀ ಪ್ರಶಸ್ತಿ ಪಡೆದಿರುವ ಅವರು 2020ರಲ್ಲಿ ಮೇಜರ್ ಧ್ಯಾನ್‌ಚಂದರ್ ಖೇಲ್ ರತ್ನ ಪ್ರಶಸ್ತಿ ಪಡೆದಿದ್ದರು.
ಹದಿನಾಲ್ಕರ ಹರೆಯದ ವೇಳೆ ಒಲಿಂಪಿಕ್ ಅರ್ಹತಾ ಕೂಟವೊಂದರಲ್ಲಿ ಆಡುವ ಮೂಲಕ ಅಂತಾರಾಷ್ಟ್ರೀಯ ಪಂದ್ಯಕ್ಕೆ ಪಾದಾರ್ಪಣೆಗೈದಿದ್ದ ರಾಂಪಾಲ್ ಅವರು ಭಾರತ ಪರ 254 ಪಂದ್ಯಗಳಲ್ಲಿ ಆಡಿದ ಅನುಭವ ಹೊಂದಿದ್ದಾರೆ. ಫಾರ್ವರ್ಡ್ ಆಟಗಾರ್ತಿ ಆಗಿದ್ದ ಅವರು 205 ಗೋಲು ಹೊಡೆದ ಸಾಧನೆ ಮಾಡಿದ್ದಾರೆ. ಅವರನ್ನು ಇದೀಗ ಸಬ್ ಜೂನಿಯರ್ ವನಿತಾ ತಂಡದ ರಾಷ್ಟ್ರೀಯ ಕೋಚ್ ಆಗಿ ನೇಮಕ ಮಾಡಲಾಗಿದೆ.
ಹರಿಯಾಣದ ಸಣ್ಣ ಪಟ್ಟಣದಲ್ಲಿ ಕಡು ಬಡತನದ ಕುಟುಂಬದಿಂದ ಬಂದ ರಾಂಪಾಲ್ ಹಾಕಿ ಕ್ರೀಡೆಯಲ್ಲಿ ಉನ್ನತ ಸಾಧನೆ ಮಾಡುತ್ತ ರಾಷ್ಟ್ರೀಯ ತಂಡಕ್ಕೆ ನೇಮಕಗೊಂಡಿದ್ದರು. ಅವರ ತಂದೆ ಎತ್ತಿನ ಗಾಡಿ ಎಳೆಯುವ ವೃತ್ತಿ ಮಾಡುತ್ತಿದ್ದರು. ‘ಇದೊಂದು ಮಹೋನ್ನತ ಪ್ರಯಾಣವಾಗಿದೆ. ನಾನು ಭಾರತಕ್ಕಾಗಿ ಇಷ್ಟು ದಿನ ಆಡುತ್ತೇನೆ ಎಂದು ಭಾವಿಸಿರಲಿಲ್ಲ. ನಾನು ಬಾಲ್ಯದಿಂದಲೂ ಸಾಕಷ್ಟು ಬಡತನವನ್ನು ಕಂಡಿದ್ದ ನಾನು ಯಾವಾಗಲೂ ಏನನ್ನಾದರೂ ಸಾಧನೆ ಮಾಡಲು ದೇಶವನ್ನು ಪ್ರತಿನಿಧಿಸುವತ್ತ ಗಮನ ಹರಿಸಿದೆ ಎಂದು ರಾಂಪಾಲ್ ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
T20 Ranking: ಬರೋಬ್ಬರಿ 69 ಸ್ಥಾನ ಮೇಲಕ್ಕೇರಿದ ಭಾರತೀಯ ಬ್ಯಾಟರ್
BGT 2024: ಮೊದಲ ಪಂದ್ಯಕ್ಕೆ ನಮ್ಮ ಆಡುವ ಬಳಗ ಅಂತಿಮವಾಗಿದೆ ಎಂದ ನಾಯಕ ಬುಮ್ರಾ
BGT 2025: ಶುಕ್ರವಾರದಿಂದ ಟೆಸ್ಟ್ ಸರಣಿ ಆರಂಭ: ಇಲ್ಲಿದೆ ಎಲ್ಲಾ ಪಂದ್ಯಗಳ ವೇಳಾಪಟ್ಟಿ, ಸಮಯ
Hardik Pandya: ಟಿ20 ಆಲ್‌ರೌಂಡರ್… ಹಾರ್ದಿಕ್ ಪಾಂಡ್ಯ ನಂ.1
China Masters 2024: ಥಾಯ್ಲೆಂಡ್‌ನ ಬುಸಾನನ್ ವಿರುದ್ಧ 20ನೇ ಗೆಲುವು ಸಾಧಿಸಿದ ಸಿಂಧು
MUST WATCH
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ
ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು
ಶರಣಾಗತಿಗೆ ಸೂಚಿಸಿದರೂ ಸ್ಪಂದಿಸಿಲ್ಲ, ಗುಂಡಿನ ಚಕಮಕಿಯಲ್ಲಿ ಮೋಸ್ಟ್ ವಾಂಟೆಡ್ ನಕ್ಸಲ್ ಸಾವು
ಹೊಸ ಸೇರ್ಪಡೆ
Thailand ನಲ್ಲಿ ಜೇನಿನ ಆಯುರ್ವೇದ ಔಷಧ ಕಥೆ ಹೇಳಿದ ಅಪ್ಪ,ಮಗಳು
Karnataka;ಕಾರ್ಪೊರೇಟ್ ಸಂಸ್ಥೆಗಳಿಂದ 100 ಇಂಜಿನಿಯರಿಂಗ್ ಕಾಲೇಜುಗಳ ದತ್ತು
Politics: ಬೆಳಗಾವಿ ಅಧಿವೇಶನವೇ ಸಿಎಂ ಸಿದ್ದರಾಮಯ್ಯರ ಕೊನೆಯ ಅಧಿವೇಶನ: ವಿಜಯೇಂದ್ರ
Belagavi: ಪೂರ್ಣಾವಧಿ ಅಧಿವೇಶನದಲ್ಲಿ ಸಮಸ್ಯೆಗಳ ಪೂರ್ಣ ಚರ್ಚೆಯಾಗಲಿ: ಡಾ.ಪ್ರಭಾಕರ್ ಕೋರೆ
Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 38 ಬ*ಲಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.