ಸೌರವ್ ಗಂಗೂಲಿ ನಟನೆಯ ಹೊಸ ಇನ್ನಿಂಗ್ಸ್
ಬಂಗಾಲಿ ಧಾರಾವಾಹಿಯಲ್ಲಿ ಅಭಿನಯ
Team Udayavani, Aug 19, 2019, 5:32 AM IST
ಕೋಲ್ಕತಾ: ಸೌರವ್ ಗಂಗೂಲಿ ಕ್ರಿಕೆಟಿನಿಂದ ನಿವೃತ್ತಿಯಾಗಿ 10 ವರ್ಷಗಳೇ ಆಗಿದ್ದರೂ ಈಗಲೂ ಅವರು ಪರಿಚಿತ ಮುಖವಾಗಿಯೇ ಉಳಿದಿದ್ದಾರೆ. ಇದಕ್ಕೆ ಕಾರಣ, ಅವರು ಕಿರುತೆರೆ ಪ್ರಸ್ತುತಿ. ವೀಕ್ಷಕ ವಿವರಣಕಾರನಾಗಿ ಆಗಾಗ ಕಾಣಿಸಿಕೊಳ್ಳುವ ಗಂಗೂಲಿ ಇದೀಗ ಅಭಿನಯಕ್ಕೂ ಇಳಿದಿದ್ದಾರೆ.
“ಝೀ ಬಾಂಗ್ಲಾ’ ಚಾನೆಲ್ನಲ್ಲಿ ಪ್ರಸಾರ ವಾಗುತ್ತಿರುವ “ಬೊಕುಲ್ ಕೊಥಾ’ ಎನ್ನುವ ಬಂಗಾಲಿ ಭಾಷೆಯ ಧಾರಾವಾಹಿಯಲ್ಲಿ ನಟನಾಗಿ ಹೊಸ ಇನ್ನಿಂಗ್ಸ್ ಶುರು ಮಾಡಿದ್ದಾರೆ ಕ್ರಿಕೆಟ್ ಅಭಿಮಾನಿಗಳ ನೆಚ್ಚಿನ ದಾದಾ.
ಹಾಗೆಂದು ಗಂಗೂಲಿ ಟಿವಿಯಲ್ಲಿ ಕಾಣಿಸಿ ಕೊಳ್ಳುತ್ತಿರುವುದು ಇದೇ ಮೊದಲೇನಲ್ಲ. “ದಾದಾಗಿರಿ ಅನ್ಲಿಮಿಟೆಡ್’ ಎಂಬ ಕ್ವಿಜ್ ಕಾರ್ಯಕ್ರಮವನ್ನು ಅವರು ನಡೆಸಿಕೊಡುತ್ತಿದ್ದಾರೆ. ಇದರಲ್ಲಿ ಸಚಿನ್ ತೆಂಡುಲ್ಕರ್, ಶಾರುಕ್ ಖಾನ್, ವಿದ್ಯಾ ಬಾಲನ್, ಮಿಥುನ್ ಚಕ್ರವರ್ತಿ ಮುಂತಾದ ದಿಗ್ಗಜರು ಭಾಗವಹಿಸಿದ್ದಾರೆ.
ಆದರೆ ಗಂಗೂಲಿ ಅಭಿನಯಕ್ಕಿಳಿದಿರು ವುದು ಮಾತ್ರ ಇದೇ ಮೊದಲು. ಈ ಕಾರಣಕ್ಕೆ ಬಂಗಾಲದ ಜನರು ಮಾತ್ರವಲ್ಲ, ಧಾರಾ ವಾಹಿಯ ನಾಯಕಿ ಉಷಾಸಿ ರಾಯ್ ಸೇರಿದಂತೆ ತಂಡದವರೆಲ್ಲ ಪುಳಕಿತರಾಗಿ ದ್ದಾರೆ. ಜನಪ್ರಿಯ ನಟಿ ಉಷಾಸಿ ಅವರಂತೂ ದಾದಾ ಜತೆಗೆ ನಟಿಸಲು ಅವಕಾಶ ಸಿಕ್ಕಿರುವುದು ತನ್ನ ಮಹಾ ಭಾಗ್ಯ ಎಂದು ಸಂಭ್ರಮಿಸುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
3rd ODI ವನಿತಾ ಏಕದಿನ: ವಿಂಡೀಸ್ ವಿರುದ್ಧ ಸರಣಿ ಕ್ಲೀನ್ ಸ್ವೀಪ್ಗೆ ಭಾರತ ಸಜ್ಜು
PAK Vs SA: ಸೆಂಚುರಿಯನ್ ಟೆಸ್ಟ್ ಪಾಕಿಸ್ಥಾನ 211ಕ್ಕೆ ಆಲೌಟ್
Test cricket: ಮ್ಯಾಚ್ ರೆಫರಿಯಾಗಿ ನೂರು ಟೆಸ್ಟ್ ಪೂರ್ತಿಗೊಳಿಸಿದ ಆ್ಯಂಡಿ ಪೈಕ್ರಾಫ್ಟ್
Pro Kabaddi League: ಯುಪಿ ಯೋಧಾಸ್,ಪಾಟ್ನಾ ಪೈರೇಟ್ಸ್ ಸೆಮಿಫೈನಲಿಗೆ
IND Vs AUS ಬಾಕ್ಸಿಂಗ್ ಡೇ ಟೆಸ್ಟ್: ಆಸ್ಟ್ರೇಲಿಯ ರನ್ ಓಟಕ್ಕೆ ಬುಮ್ರಾ ಬ್ರೇಕ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Patna: “ರಘುಪತಿ ರಾಘವ’ ಭಜನೆ ಹಾಡಿದ ಗಾಯಕಿ ವಿರುದ್ಧ ಪ್ರತಿಭಟನೆ: ಹಾಡುಗಾರ್ತಿ ಕ್ಷಮೆ
Canada: ಮಾನವ ಕಳ್ಳಸಾಗಣೆಯಲ್ಲಿ ಕೆನಡಾದ 260 ಕಾಲೇಜು! ವಿದ್ಯಾರ್ಥಿ ವೀಸಾ ಮೂಲಕ ಆಮಿಷ
KMF: ಸಂಕ್ರಾಂತಿ ಬಳಿಕ ಹಾಲಿನ ದರ ಪರಿಷ್ಕರಣೆ ಸರಕಾರದಿಂದ ನಿರ್ಧಾರ: ಭೀಮಾ ನಾಯ್ಕ
Accidental Prime Minister: ದ ಮೇಕಿಂಗ್ ಆ್ಯಂಡ್ ಅನ್ಮೇಕಿಂಗ್ ಆಫ್ ಡಾ.ಸಿಂಗ್
Mangaluru: ವಿಚ್ಛೇದಿತ ಮಹಿಳೆಯನ್ನು ಹಿಂಬಾಲಿಸಿದ ಇಬ್ಬರು ವಶಕ್ಕೆ; ಪ್ರಕರಣ ದಾಖಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.