ಕ್ರೀಡಾ ಪ್ರೋತ್ಸಾಹಕ್ಕೆ ನೂತನ ಪ್ರಾಯೋಜಕತ್ವ ಯೋಜನೆ
Team Udayavani, Mar 18, 2018, 6:45 AM IST
ಹೊಸದಿಲ್ಲಿ: ಎಳೆಯ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸುವುದಕ್ಕಾಗಿ ಮುಂದೆ ಹೊಸ ಪ್ರಾಯೋಜಕತ್ವ ಯೋಜನೆಯೊಂದು ಬರಲಿದೆ ಎಂದು ಕ್ರೀಡಾ ಸಚಿವ ರಾಜವರ್ಧನ್ ಸಿಂಗ್ ರಾಥೋಡ್ ಹೇಳಿದ್ದಾರೆ. ರವಿವಾರ ಹೊಸದಿಲ್ಲಿಯಲ್ಲಿ ಈ ವಿಚಾರ ತಿಳಿಸಿರುವ ರಾಥೋಡ್, ಭವಿಷ್ಯದ ಚಾಂಪಿಯನ್‌ಗಳನ್ನು ಸೃಷ್ಟಿಸಲು ಈ ಯೋಜನೆ ನೆರವಾಗಲಿದೆ ಎಂದಿದ್ದಾರೆ.
ಆರ್ಥಿಕ ಸಮಸ್ಯೆಯಿಂದ ಪ್ರತಿಭೆ ವ್ಯರ್ಥವಾಗುವುದನ್ನು ತಪ್ಪಿಸಲು ಸರಕಾರ ಮುಂದಾಗುತ್ತಿರುವುದಾಗಿ ತಿಳಿಸಿರುವ ಶೂಟಿಂಗ್ ದಂತಕತೆ ರಾಥೋಡ್, “ಪ್ರತಿಭಾನ್ವಿತ ಕ್ರೀಡಾಪಟುಗಳಿಗೆ ಆರ್ಥಿಸ ಸಮಸ್ಯೆ ಎದುರಾಗುತ್ತದೆ. ಇದನ್ನು ತಪ್ಪಿಸುವುದಕ್ಕಾಗಿ ಕ್ರೀಡಾಪಟುಗಳಿಗೆ ಆರ್ಥಿಕ ನೆರವು ನೀಡಲು ಸರಕಾರ ಮುಂದಾಗಿದೆ. ಹೀಗಾಗಿ ಆಯ್ದ ಸುಮಾರು 1000 ಮಕ್ಕಳಿಗೆ ಅವರ ಕ್ರೀಡಾ ಕೌಶಲ ಹೆಚ್ಚಿಸಲು ನೆರವಾಗುವಂತೆ ಪ್ರತಿಯೊಬ್ಬರಿಗೂ 8 ವರ್ಷಗಳ ವರೆಗೆ ಒಂದು ಲಕ್ಷ ರೂ.ಗಳ ಪ್ರಾಯೋಜಕತ್ವವನ್ನು ನೀಡಲಿದ್ದೇವೆ. ಇದು ಈವರೆಗಿನ ಯೋಜನೆಗಳಲ್ಲೇ ಮೊದಲ ಪ್ರಾಯೋಜಕತ್ವ ಯೋಜನೆಯಾಗಲಿದೆ’ ಎಂದರು.
“ಮುಂಬರುವ ತಿಂಗಳಿನಿಂದಲೇ ನಾವು 8-12ನೇ ವಯೋಮಾನದ ಕ್ರೀಡಾಳುಗಳನ್ನು ಯೋಜನೆಗಾಗಿ ಆರಿಸಲಿದ್ದೇವೆ. ವಿವಿಧ ವಿದ್ಯಾಭ್ಯಾಸ ಸಂಸ್ಥೆಗಳ ಮೂಲಕ ವಿದ್ಯಾರ್ಥಿಗಳು ಆಯ್ಕೆ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವುದು ಹೇಗೆಂಬುವುದನ್ನು ತಿಳಿಸಲಿದ್ದೇವೆ. ಆಯ್ಕೆ ಪ್ರಕ್ರಿಯೆಯಲ್ಲಿ ನಾವು ಆಧುನಿಕ ಡಿಎನ್‌ಎ ಪರೀಕ್ಷೆಯನ್ನೂ ನಡೆಸುತ್ತೇವೆ. ಅಂತಿಮವಾಗಿ ಆಯ್ಕೆಗೊಳ್ಳುವ ಮಕ್ಕಳಿಗೆ ಪ್ರಾಯೋಜಕತ್ವದ ಪ್ರಯೋಜನ ಸಿಗಲಿದೆ’ ಎಂದು 2014ರ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ವಿಜೇತ ರಾಥೋಡ್ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
PoK ಪ್ರದೇಶದಲ್ಲಿ ಚಾಂಪಿಯನ್ಸ್ ಟ್ರೋಫಿ ಪಂದ್ಯಗಳು: ಬಿಸಿಸಿಐ ನಿಂದ ತೀವ್ರ ಖಂಡನೆ
Test: ಇಂಗ್ಲೆಂಡ್ ಸರಣಿಯ ಬಳಿಕ ಟೆಸ್ಟ್ ಕ್ರಿಕೆಟ್ ನಿಂದ ದೂರವಾಗಲಿದ್ದಾರೆ ಕಿವೀಸ್ ಆಟಗಾರ
Ranji Trophy: ಇನ್ನಿಂಗ್ಸ್ ನ ಎಲ್ಲಾ 10 ವಿಕೆಟ್ ಕಿತ್ತು ಅನ್ಶುಲ್ ಕಾಂಬೋಜ್ ದಾಖಲೆ
India Vs India A ಅಭ್ಯಾಸ ಪಂದ್ಯ: ಅಗ್ಗಕ್ಕೆ ಔಟಾದ ಕೊಹ್ಲಿ, ಪಂತ್; ಗಾಯಗೊಂಡ ರಾಹುಲ್
India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
MUST WATCH
ಹೊಸ ಸೇರ್ಪಡೆ
Padubidri: ನವವಿವಾಹಿತೆಗೆ ಕಿರುಕುಳ; ಪತಿಯ ಮನೆಮಂದಿ ವಿರುದ್ಧ ದೂರು
Karkala: ಗೋವಾ ಮದ್ಯ ಅಕ್ರಮ ದಾಸ್ತಾನು ಪ್ರಕರಣ; ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚನೆ
Karkala: ದ್ವೇಷ ಭಾವನೆ ಕೆರಳಿಸುವ ಆರೋಪ; ದೂರು ದಾಖಲು
PoK ಪ್ರದೇಶದಲ್ಲಿ ಚಾಂಪಿಯನ್ಸ್ ಟ್ರೋಫಿ ಪಂದ್ಯಗಳು: ಬಿಸಿಸಿಐ ನಿಂದ ತೀವ್ರ ಖಂಡನೆ
Congress: ಸರ್ಕಾರದಲ್ಲಿ ಒಬ್ಬರು ಏತಿ ಅಂದರೆ ಮತ್ತೊಬ್ಬರು ಪ್ರೇತಿ ಅಂತಾರೆ: ಆರ್.ಅಶೋಕ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.