T20 World Cup: ಭಾರತ-ಪಾಕ್ ಪಂದ್ಯಕ್ಕೆ ಬೆದರಿಕೆ: ನ್ಯೂಯಾರ್ಕ್‌ನಲ್ಲಿ ಭಾರೀ ಭದ್ರತೆ
Team Udayavani, May 31, 2024, 7:00 AM IST
ನ್ಯೂಯಾರ್ಕ್: ಜೂ. 9ರಂದು ನ್ಯೂಯಾರ್ಕ್‌ನಲ್ಲಿ ನಡೆಯ ಲಿರುವ ಭಾರತ-ಪಾಕಿಸ್ಥಾನ ನಡುವಿನ ಹೈವೋಲ್ಟೆàಜ್ ಪಂದ್ಯಕ್ಕೆ ಬೆದರಿಕೆ ಕರೆ ಬಂದಿದೆ ಎಂದು ವರದಿಗಳು ಹೇಳಿವೆ. ಹೀಗಾಗಿ, ಇಲ್ಲಿನ ನಸೌÕ ಕೌಂಟಿಯಲ್ಲಿ ಬಿಗಿ ಭದ್ರತೆ ಕಲ್ಪಿಸಲಾಗಿದೆ. ನಸ್ಸೌ ಕೌಂಟಿಯಲ್ಲಿರುವ ಐಸೆನ್‌ಹೋವರ್ ಪಾರ್ಕ್ ಮೈದಾನದಲ್ಲಿ ಒಟ್ಟು 8 ಟಿ20 ವಿಶ್ವಕಪ್ ಪಂದ್ಯಗಳು ನಡೆಯಲಿರು ವುದರಿಂದ ಈ ಕ್ರಮ ಕೈಗೊಳ್ಳಲಾಗಿದೆ.
ಈ ಬಗ್ಗೆ ಮಾತನಾಡಿರುವ ನ್ಯೂಯಾರ್ಕಿನ ಗವರ್ನರ್ ಕ್ಯಾಥಿ ಹೋಚುಲ್, ಟಿ20 ವಿಶ್ವಕಪ್ ತಯಾರಿ ನಿಟ್ಟಿನಲ್ಲಿ ಭಾಗವಹಿಸುವ ತಂಡ ಗಳಿಗೆ ಸುರಕ್ಷತೆ ನೀಡುವುದಕ್ಕಾಗಿ ನಾನು ನನ್ನ ಫೆಡರಲ್ ಮತ್ತು ಸ್ಥಳೀಯ ಕಾನೂನು ತಂಡದೊಂದಿಗೆ ಕಾರ್ಯನಿರ್ವಹಿಸುತ್ತಿದ್ದೇನೆ. ಈ ಕ್ಷಣದಲ್ಲಿ ಯಾವುದೇ ವಿಶ್ವಾಸಾರ್ಹ ಬೆದರಿಕೆ ಇಲ್ಲದಿದ್ದರೂ ಭದ್ರತೆ ಕಲ್ಪಿಸಲು ನಾನು ಎನ್‌ವೈಪಿಡಿಗೆ ನಿರ್ದೇಶಿಸಿದ್ದೇನೆ ಎಂದು ಮಾಹಿತಿ ನೀಡಿದ್ದಾರೆ. ಮೂಲಗಳ ಪ್ರಕಾರ, ಉಗ್ರ ಸಂಘಟನೆಯಾದ ಐಸಿಸ್-ಕೆ ಜತೆಗೆ ನಂಟು ಹೊಂದಿರುವ ಉಗ್ರರಿಂದ ಕರೆ ಬಂದಿದೆ ಎನ್ನಲಾಗಿದೆ.
ನಸೌÕ ಕೌಂಟಿಯಲ್ಲಿರುವ ಐಸೆನ್‌ಹೋವರ್ ಪಾರ್ಕ್ ಮೈದಾನದಲ್ಲಿ ಭಾರತವು ಮೂರು ಟಿ20 ಪಂದ್ಯಗ ಳಲ್ಲದೆ, ಜೂ. 1ರಂದು ಬಾಂಗ್ಲಾದೇಶ ವಿರುದ್ಧ ಒಂದು ಅಭ್ಯಾಸ ಪಂದ್ಯವನ್ನೂ ಆಡಲಿದೆ. ಜೂ. 5ರಿಂದ ಭಾರತದ ಸ್ಪರ್ಧೆ ಆರಂಭಗೊಳ್ಳಲಿದ್ದು, ಅಂದು ರೋಹಿತ್ ಶರ್ಮ ಪಡೆ ಐರ್ಲೆಂಡ್ ಸವಾಲು ಸ್ವೀಕರಿಸಲಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.