ನ್ಯೂಜಿಲ್ಯಾಂಡ್ 2-0 ಸರಣಿ ಸಂಭ್ರಮ
Team Udayavani, Dec 13, 2017, 12:03 PM IST
ಹ್ಯಾಮಿಲ್ಟನ್: ನಿರೀಕ್ಷೆಯಂತೆ ಪ್ರವಾಸಿ ವೆಸ್ಟ್ ಇಂಡೀಸ್ ಎದುರಿನ 2 ಪಂದ್ಯಗಳ ಟೆಸ್ಟ್ ಸರಣಿಯನ್ನು ನ್ಯೂಜಿಲ್ಯಾಂಡ್ ಕ್ಲೀನ್‌ಸ್ವೀಪ್ ಆಗಿ ವಶಪಡಿಸಿಕೊಂಡಿದೆ. ಹ್ಯಾಮಿಲ್ಟನ್ ಟೆಸ್ಟ್ ಪಂದ್ಯವನ್ನು ಕಿವೀಸ್ ನಾಲ್ಕೇ ದಿನಗಳ ಒಳಗೆ 240 ರನ್ನುಗಳ ಭಾರೀ ಅಂತರದಿಂದ ಗೆದ್ದು ಈ ಸಾಧನೆ ಮಾಡಿತು.
ಗೆಲುವಿಗಾಗಿ 444 ರನ್ನುಗಳ ಕಠಿನ ಗುರಿ ಪಡೆದಿದ್ದ ವೆಸ್ಟ್ ಇಂಡೀಸ್ 3ನೇ ದಿನದಾಟದ ಅಂತ್ಯಕ್ಕೆ 2 ವಿಕೆಟಿಗೆ 30 ರನ್ ಮಾಡಿ ಸೋಲನ್ನು ಖಚಿತಪಡಿಸಿತ್ತು. 4ನೇ ದಿನವಾದ ಮಂಗಳವಾರ ಸ್ವಲ್ಪವೂ ಪ್ರತಿಹೋರಾಟ ತೋರ್ಪಡಿಸದೆ 203 ರನ್ನುಗಳಿಗೆ ಸರ್ವಪತನ ಕಂಡಿತು. ವೆಲ್ಲಿಂಗ್ಟನ್‌ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯವನ್ನು ನ್ಯೂಜಿಲ್ಯಾಂಡ್ ಇನ್ನಿಂಗ್ಸ್ ಹಾಗೂ 67 ರನ್ನುಗಳಿಂದ ಗೆದ್ದಿತ್ತು. ಇತ್ತಂಡಗಳಿನ್ನು 3 ಪಂದ್ಯಗಳ ಏಕದಿನ ಸರಣಿಯಲ್ಲಿ ಮುಖಾಮುಖೀಯಾಗಲಿದ್ದು, ಇದು ಡಿ. 20ರಿಂದ ಮೊದಲ್ಗೊಳ್ಳಲಿದೆ.
80 ರನ್ನಿಗೆ ಬಿತ್ತು 5 ವಿಕೆಟ್
ವೆಸ್ಟ್ ಇಂಡೀಸ್ ಲಂಚ್ ಒಳಗಾಗಿ 80 ರನ್ನಿಗೆ 5 ವಿಕೆಟ್ ಉರುಳಿಸಿಕೊಂಡು ತೀವ್ರ ಸಂಕಟಕ್ಕೆ ಸಿಲುಕಿತ್ತು. ಉಳಿವಿನ ಯಾವ ಮಾರ್ಗವೂ ಕೆರಿಬಿಯನ್ನರ ಮುಂದಿರಲಿಲ್ಲ. ರೋಸ್ಟನ್ ಚೇಸ್ ಮತ್ತು ರೇಮನ್ ರೀಫರ್ 6ನೇ ವಿಕೆಟಿಗೆ 78 ರನ್ ಒಟ್ಟುಗೂಡಿಸಿದರೂ ಇದರಿಂದ ಯಾವುದೇ ಪ್ರಯೋಜನವಾಗಲಿಲ್ಲ. ಕೊನೆಯಲ್ಲಿ ಕೆಮರ್ ರೋಶ್ ಪ್ರಯತ್ನದಿಂದ ಸ್ಕೋರ್ ಇನ್ನೂರರ ಗಡಿ ದಾಟಿತು, ಅಷ್ಟೇ.
64 ರನ್ ಮಾಡಿದ ಚೇಸ್ ವಿಂಡೀಸ್ ಸರದಿಯ ಟಾಪ್ ಸ್ಕೋರರ್ ಎನಿಸಿದರು (98 ಎಸೆತ, 8 ಬೌಂಡರಿ). ರೀಫರ್ 29, ರೋಶ್ 32 ರನ್ ಹೊಡೆದರು. ನ್ಯೂಜಿಲ್ಯಾಂಡ್ ಪರ ವ್ಯಾಗ್ನರ್ 3 ವಿಕೆಟ್ ಉರುಳಿಸಿದರೆ, ಸೌಥಿ, ಬೌಲ್ಟ್ ಮತ್ತು ಸ್ಯಾಂಟ್ನರ್ ತಲಾ 2 ವಿಕೆಟ್ ಕಿತ್ತರು. 17ನೇ ಶತಕ ಬಾರಿಸಿದ ರಾಸ್ ಟಯ್ಲರ್ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು.
ಸಂಕ್ಷಿಪ್ತ ಸ್ಕೋರ್: ನ್ಯೂಜಿಲ್ಯಾಂಡ್-373 ಮತ್ತು 8 ವಿಕೆಟಿಗೆ 291 ಡಿಕ್ಲೇರ್. ವಿಂಡೀಸ್-221 ಮತ್ತು 203 (ಚೇಸ್ 64, ರೋಶ್ 32, ರೀಫರ್ 29, ವ್ಯಾಗ್ನರ್ 42ಕ್ಕೆ 3, ಸೌಥಿ 71ಕ್ಕೆ 2, ಬೌಲ್ಟ್ 52ಕ್ಕೆ 2, ಸ್ಯಾಂಟ್ನರ್ 13ಕ್ಕೆ 2). ಪಂದ್ಯಶ್ರೇಷ್ಠ: ರಾಸ್ ಟಯ್ಲರ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
T20: ಗೆಲ್ಲುವ ಹಂತದಲ್ಲಿದ್ದ ಶ್ರೀಲಂಕಾವನ್ನು ಹಿಡಿದು ನಿಲ್ಲಿಸಿದ ಕಿವೀಸ್…
Vijay Hazare Trophy; ಮಯಾಂಕ್ ಅಗರ್ವಾಲ್ ಭರ್ಜರಿ ಶತಕ; ಸುಲಭ ಜಯ ಸಾಧಿಸಿದ ಕರ್ನಾಟಕ
TeamIndia; ಮುಗಿಯಿತಾ ರೋಹಿತ್ ವೃತ್ತಿಜೀವನ? ಮೆಲ್ಬೋರ್ನ್ ಗೆ ಬಂದ ಅಗರ್ಕರ್ ಹೇಳಿದ್ದೇನು?
INDvAUS: ನಿತೀಶ್ ಕುಮಾರ್ ಆಕರ್ಷಕ ಶತಕ; ಫಾಲೋಆನ್ ಅವಮಾನದಿಂದ ಪಾರು
INDvsAUS: ವಿಚಿತ್ರ ರೀತಿಯಲ್ಲಿ ಔಟಾದ ರಿಷಭ್ ಪಂತ್ ವಿರುದ್ದ ಕಿಡಿಕಾರಿದ ಗಾವಸ್ಕರ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.