ರಾಸ್ ಟೇಲರ್ ಅಜೇಯ ಶತಕ, ಟಾಮ್ ಲಾಥಮ್ ಬಿರುಸಿನ ಬ್ಯಾಟಿಂಗ್; ಕಿವೀಸ್ ಗೆ 4 ವಿಕೆಟ್ ಜಯ
ವ್ಯರ್ಥವಾದ ಅಯ್ಯರ್ ಶತಕದಾಟ, ರಾಹುಲ್, ಕೊಹ್ಲಿ ಅರ್ಧಶತಕ
Team Udayavani, Feb 5, 2020, 3:46 PM IST
ಹ್ಯಾಮಿಲ್ಟನ್: ಇಲ್ಲಿನ ಸೆಡಾನ್ ಪಾರ್ಕ್ ಅಂಗಳದಲ್ಲಿ ನಡೆದ ಭಾರತ ಮತ್ತು ನ್ಯೂಜಿಲ್ಯಾಂಡ್ ನಡುವಿನ ಪ್ರಥಮ ಏಕದಿನ ಪಂದ್ಯವನ್ನು ನ್ಯೂಜಿಲ್ಯಾಂಡ್ 4 ವಿಕೆಟ್ ಗಳಿಂದ ಗೆದ್ದುಕೊಂಡಿದೆ. ಈ ಮೂಲಕ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ನ್ಯೂಝಿಲ್ಯಾಂಡ್ 1-0 ಮುನ್ನಡೆ ಸಾಧಿಸಿದೆ.
ಭಾರತ ನೀಡಿದ 347 ರನ್ ಗಳ ಗುರಿಯನ್ನು ಬೆನ್ನಟ್ಟಿದ ಅತಿಥೇಯರಿಗೆ ಓಪನರ್ ಗಳಾದ ಮಾರ್ಟಿನ್ ಗಪ್ಟಿಲ್ (32) ಮತ್ತು ಹೆನ್ರಿ ನಿಕೊಲಸ್ (78) ಅವರು ಉತ್ತಮ ಆರಂಭ ಒದಗಿಸಿದರು. ಇವರ ಪ್ರಥಮ ವಿಕೆಟ್ ಜೊತೆಯಾಟದಲ್ಲಿ 85 ರನ್ ಹರಿದು ಬಂತು. ಈ ಸಂದರ್ಭದಲ್ಲಿ 32 ರನ್ ಗಳಿಸಿದ್ದ ಗಪ್ಟಿಲ್ ಔಟಾದರು. ಬಳಿಕ ಬಂದ ಟಾಮ್ ಬ್ಲಂಡೆಲ್ ಅವರು ಕೇವಲ 09 ರನ್ ಗಳಿಸಿ ಕುಲದೀಪ್ ಯಾದವ್ ಗೆ ವಿಕೆಟ್ ಒಪ್ಪಿಸಿದರು.
ಈ ಹಂತದಲ್ಲಿ ನಿಕೊಲಸ್ ಜೊತೆ ಸೇರಿದ ಅನುಭವಿ ಆಟಗಾರ ರಾಸ್ ಟೇಲರ್ (ಅಜೇಯ 109) ಉತ್ತಮವಾಗಿ ಆಡುತ್ತಾ ಗೆಲುವಿನ ಗುರಿಯನ್ನು ಬೆನ್ನತ್ತಲಾರಂಭಿಸಿದರು. ಇವರಿಬ್ಬರು ಮೂರನೇ ವಿಕೆಟ್ ಗೆ 62 ರನ್ ಗಳ ಅಮೂಲ್ಯ ಭಾಗೀದಾರಿಕೆಯನ್ನು ನೀಡಿದರು. ಈ ಸಂದರ್ಭದಲ್ಲಿ 78 ರನ್ ಗಳಿಸಿ ಶತಕದತ್ತ ಮುನ್ನುಗ್ಗುತ್ತಿದ್ದ ಹೆನ್ರಿ ನಿಕೊಲಸ್ (78) ರನೌಟ್ ಆಗುವುದರೊಂದಿಗೆ ಭಾರತದ ಗೆಲುವಿನ ಆಸೆ ಮತ್ತೆ ಚಿಗುರಿತ್ತು.
ಆದರೆ ನಾಲ್ಕನೇ ವಿಕೆಟ್ ಗೆ ಬ್ಯಾಟಿಂಗ್ ಮಾಡಲು ಆಗಮಿಸಿದ ಹಂಗಾಮಿ ನಾಯಕ ಮತ್ತು ವಿಕೆಟ್ ಕೀಪರ್ ಟಾಮ್ ಲಾಥಮ್ (69) ಪಂದ್ಯದ ಗತಿಯನ್ನೇ ಬದಲಿಸಿದರು. ಬಿರುಸಿನ ಆಟಕ್ಕಿಳಿದ ಲಾಥಮ್ ಭಾರತೀಯ ಬೌಲರ್ ಗಳನ್ನು ಬೆಂಡೆತ್ತಿದರು. ಕೇವಲ 48 ಎಸೆತಗಳಲ್ಲಿ 08 ಬೌಂಡರಿ ಮತ್ತು 02 ಸಿಕ್ಸರ್ ಸಹಿತ 69 ರನ್ ಬಾರಿಸಿದ ಲಾಥಮ್ ತನ್ನ ತಂಡದ ಗೆಲುವನ್ನು ಸರಾಗಗೊಳಿಸಿದರು. ಟೇಲರ್ ಮತ್ತು ಲಾಥಂ ನಡುವೆ ದಾಖಲಾದ 138 ರನ್ ಗಳ ಭರ್ಜರಿ ಜೊತೆಯಾಟ ತಂಡದ ಗೆಲುವಿನ ಹಾದಿಯನ್ನು ಸುಗಮಗೊಳಿಸಿತು.
ತಂಡದ ಗೆಲುವಿಗೆ 39 ರನ್ ಅಗತ್ಯವಿದ್ದಾಗ ಬಿರುಸಿನ ಆಟವಾಡುತ್ತಿದ್ದ ಟಾಮ್ ಲಾಥಮ್ 69 ರನ್ ಗಳಿಸಿ ಔಟಾದರೂ ಇನ್ನೊಂದು ತುದಿಯಲ್ಲಿ ಶತಕ ದಾಖಲಿಸಿ ಭರ್ಜರಿಯಾಗಿ ಬ್ಯಾಟಿಂಗ್ ಮಾಡುತ್ತಿದ್ದ ಟೇಲರ್ ಅವರು ತಂಡದ ಗೆಲುವನ್ನು ಸರಾಗಗೊಳಿಸಿದರು. ಕೇವಲ 84 ಎಸೆತಗಳಲ್ಲಿ 109 ರನ್ ಗಳಿಸಿ ಔಟಾಗದೇ ಉಳಿದ ರಾಸ್ ಟೇಲರ್ ಅಜೇಯ ಆಟಕ್ಕೆ ಅವರಿಗೆ ಪಂದ್ಯಶ್ರೇಷ್ಠ ಪ್ರಶಸ್ತಿ ಒಲಿದುಬಂತು. ತಮ್ಮ ಈ ಅಜೇಯ ಇನ್ನಿಂಗ್ಸ್ ನಲ್ಲಿ ರಾಸ್ ಟೇಲರ್ 10 ಬೌಂಡರಿ ಹಾಗೂ 4 ಸಿಕ್ಸರ್ ಗಳನ್ನೂ ಸಿಡಿಸಿದ್ದರು.
ಅಂತಿಮವಾಗಿ ನ್ಯೂಜಿಲ್ಯಾಂಡ್ 48.1 ಓವರ್ ಗಳಲ್ಲಿ 6 ವಿಕೆಟ್ ಗಳನ್ನು ಕಳೆದುಕೊಂಡು 348 ರನ್ ಕಲೆಹಾಕುವ ಮೂಲಕ 4 ವಿಕೆಟ್ ಗಳ ಜಯವನ್ನು ದಾಖಲಿಸಿತು.
ರಾಸ್ ಟೇಲರ್ ಹಾಗೂ ಲಾಥಮ್ ಅವರನ್ನು ಕಟ್ಟಿಹಾಕುವಲ್ಲಿ ಭಾರತದ ಬೌಲರ್ ಗಳಿಗೆ ಇಂದು ಸಾಧ್ಯವಾಗಲೇ ಇಲ್ಲ. ವೇಗಿ ಜಸ್ಪ್ರೀತ್ ಬುಮ್ರಾ ಹೊರತುಪಡಿಸಿ ಉಳಿದ ಬೌಲರ್ ಗಳು ದುಬಾರಿಯಾದರು. ಕುಲದೀಪ್ ಯಾದವ್ 2 ವಿಕೆಟ್ ಪಡೆದರೆ, ಮಹಮ್ಮದ್ ಶಮಿ ಮತ್ತು ಶಾರ್ದೂಲ್ ಠಾಕೂರ್ ತಲಾ 1 ವಿಕೆಟ್ ಪಡೆದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Belagavi; ಬಹಳ ನೋವಾಗಿದೆ, ನೂರು ಸಿ.ಟಿ.ರವಿ ಬಂದರೂ ಹೆದರುವುದಿಲ್ಲ: ಲಕ್ಷ್ಮೀ ಹೆಬ್ಬಾಳಕರ
Cricket: ಚಾಂಪಿಯನ್ಸ್ ಟ್ರೋಫಿ ವೇಳಾಪಟ್ಟಿ ಅಂತಿಮ; ಭಾರತದ ಪಂದ್ಯಗಳಿಗೆ ಯುಎಇ ಆತಿಥ್ಯ
Arrested: ನಟ ಸುನಿಲ್ ಪಾಲ್, ಮುಸ್ತಾಕ್ ಅಪಹರಣ; ಎನ್‌ಕೌಂಟರ್ ಮೂಲಕ ಪ್ರಮುಖ ಆರೋಪಿ ಬಂಧನ
Belagavi: ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ದೇಶದ ಇತಿಹಾಸ ಸಂಭ್ರಮಿಸುವ ಕಾರ್ಯಕ್ರಮ: ಡಿಕೆಶಿ
Bengaluru: ಅನುಮತಿ ಇಲ್ಲದೇ ಅಲೋಪತಿ ಚಿಕಿತ್ಸೆ; 3 ಕ್ಲಿನಿಕ್‌ಗಳ ವಿರುದ್ಧ ಕೇಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.