ಸ್ಟಾರ್ಕ್ ದಾಳಿಗೆ ನ್ಯೂಜಿಲ್ಯಾಂಡ್ ತತ್ತರ
ಪರ್ತ್ ಡೇ-ನೈಟ್ ಟೆಸ್ಟ್: ಆಸೀಸ್-416, ಕಿವೀಸ್-109/5
Team Udayavani, Dec 13, 2019, 11:38 PM IST
ಪರ್ತ್: ಎಡಗೈ ವೇಗಿ ಮಿಚೆಲ್ ಸ್ಟಾರ್ಕ್ ಅವರ ಮಿಂಚಿನ ದಾಳಿಗೆ ತತ್ತರಿಸಿದ ಪ್ರವಾಸಿ ನ್ಯೂಜಿಲ್ಯಾಂಡ್, ಪರ್ತ್ ಡೇ-ನೈಟ್ ಟೆಸ್ಟ್ ಪಂದ್ಯದಲ್ಲಿ ತೀವ್ರ ಕುಸಿತಕ್ಕೆ ಸಿಲುಕಿದೆ. ಆಸ್ಟ್ರೇಲಿಯದ 416 ರನ್ನು ಗಳ ಮೊದಲ ಇನ್ನಿಂಗ್ಸಿಗೆ ಜವಾಬಾಗಿ ದ್ವಿತೀಯ ದಿನದಾಟದ ಅಂತ್ಯಕ್ಕೆ 5 ವಿಕೆಟ್ ಉರುಳಿಸಿಕೊಂಡು 109 ರನ್ ಮಾಡಿದೆ. ಸ್ಟಾರ್ಕ್ ಸಾಧನೆ 31ಕ್ಕೆ 4.
ನ್ಯೂಜಿಲ್ಯಾಂಡ್ 2 ರನ್ ಮಾಡುವಷ್ಟರಲ್ಲಿ ಆರಂಭಿಕರಾದ ಟಾಮ್ ಲ್ಯಾಥಂ (0) ಮತ್ತು ಜೀತ್ ರಾವಲ್ (1) ಅವರ ವಿಕೆಟ್ ಕಳೆದುಕೊಂಡಿತು. ಆದರೆ 3ನೇ ವಿಕೆಟಿಗೆ ಜತೆಗೂಡಿದ ನಾಯಕ ಕೇನ್ ವಿಲಿಯಮ್ಸನ್ (34) ಮತ್ತು ರಾಸ್ ಟೇಲರ್ (ಬ್ಯಾಟಿಂಗ್ 66) 71 ರನ್ ಒಟ್ಟುಗೂಡಿಸಿ ಕುಸಿತಕ್ಕೆ ತಡೆಯಾಗಿ ನಿಂತರು.
ಆದರೆ ಈ ಜೋಡಿಯನ್ನು ಬೇರ್ಪಡಿಸಿದ ಸ್ಟಾರ್ಕ್, ಮತ್ತೆ ಕಿವೀಸ್ ಮೇಲೆ ಘಾತಕವಾಗಿ ಎರಗಿದರು. ಹೆನ್ರಿ ನಿಕೋಲ್ಸ್ (7), ನೀಲ್ ವ್ಯಾಗ್ನರ್ (0) ಅವರನ್ನು ಸತತ ಎಸೆತಗಳಲ್ಲಿ ಕೆಡವಿದರು. ಟೇಲರ್ ಜತೆ ಖಾತೆ ತೆರೆಯದ ಬ್ರಾಡ್ಲಿ ವಾಟಿÉಂಗ್ ಆಡುತ್ತಿದ್ದಾರೆ. ಟೇಲರ್ 86 ಎಸೆತ ಎದುರಿಸಿದ್ದು, 8 ಬೌಂಡರಿ ಸಿಡಿಸಿದ್ದಾರೆ.
ಲಬುಶೇನ್ 143
4ಕ್ಕೆ 248 ರನ್ ಗಳಿಸಿ ಮೊದಲ ದಿನದಾಟ ಮುಗಿಸಿದ್ದ ಆಸ್ಟ್ರೇಲಿಯ, ಶುಕ್ರವಾರ ಬ್ಯಾಟಿಂಗ್ ಮುಂದುವರಿಸಿ 416ರ ತನಕ ಸಾಗಿತು. 110 ರನ್ ಮಾಡಿ ಆಡುತ್ತಿದ್ದ “ಹ್ಯಾಟ್ರಿಕ್ ಶತಕ ವೀರ’ ಮಾರ್ನಸ್ ಲಬುಶೇನ್ 143 ರನ್ ಗಳಿಸಿ ವ್ಯಾಗ್ನರ್‌ಗೆ ಬೌಲ್ಡ್ ಆದರು. 240 ಎಸೆತಗಳ ಈ ಆಕರ್ಷಕ ಬ್ಯಾಟಿಂಗ್‌ನಲ್ಲಿ 18 ಬೌಂಡರಿ ಹಾಗೂ ಒಂದು ಸಿಕ್ಸರ್ ಸೇರಿತ್ತು.
ಇಪ್ಪತ್ತರಲ್ಲಿದ್ದ ಟ್ರ್ಯಾವಿಸ್ ಹೆಡ್ 56ರ ತನಕ ಸಾಗಿದರು (97 ಎಸೆತ, 10 ಬೌಂಡರಿ). ನಾಯಕ ಟಿಮ್ ಪೇನ್ 39, ನಥನ್ ಲಿಯೋನ್ 30 ರನ್ ಕೊಡುಗೆ ಸಲ್ಲಿಸಿದರು.
ತಲಾ 4 ವಿಕೆಟ್ ಕಿತ್ತ ಟಿಮ್ ಸೌಥಿ ಮತ್ತು ನೀಲ್ ವ್ಯಾಗ್ನರ್ ನ್ಯೂಜಿಲ್ಯಾಂಡಿನ ಯಶಸ್ವಿ ಬೌಲರ್‌ಗಳಾಗಿ ಮೂಡಿಬಂದರು.
ಸಂಕ್ಷಿಪ್ತಸ್ಕೋರ್: ಆಸ್ಟ್ರೇಲಿಯ-416 (ಲಬುಶೇನ್ 143, ಹೆಡ್ 56, ವ್ಯಾಗ್ನರ್ 92ಕ್ಕೆ 4, ಸೌಥಿ 93ಕ್ಕೆ 4). ನ್ಯೂಜಿಲ್ಯಾಂಡ್-5 ವಿಕೆಟಿಗೆ 109 (ಟೇಲರ್ ಬ್ಯಾಟಿಂಗ್ 66, ವಿಲಿಯಮ್ಸನ್ 34, ಸ್ಟಾರ್ಕ್ 31ಕ್ಕೆ 4).
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mudigere: ಹೊರನಾಡು ದೇವರ ದರ್ಶನಕ್ಕೆ ಬರುತ್ತಿದ್ದವರ ವಾಹನ ಪಲ್ಟಿ… ನಾಲ್ವರಿಗೆ ಗಂಭೀರ ಗಾಯ
Trasi: ನಾಪತ್ತೆಯಾಗಿದ್ದ ಬೋಟ್ ರೈಡರ್ ಶವ 36 ಗಂಟೆಗಳ ಬಳಿಕ ಪತ್ತೆ
Shivamogga: ತಡರಾತ್ರಿ ಭೀಕರ ರಸ್ತೆ ಅಪಘಾತ… ಬೈಕ್ ನಲ್ಲಿದ್ದ ಇಬ್ಬರು ಯುವಕರು ಮೃ*ತ್ಯು
Plane Mishap: ಲಘು ವಿಮಾನ ಪತನ… ಬ್ರೆಜಿಲ್ ನ ಉದ್ಯಮಿ ಸೇರಿ ಹತ್ತು ಮಂದಿ ಮೃತ್ಯು
BBK11: ಬಾಯಿ ಮುಚ್ಕೊಂಡು ಇರು.. ಫೈಯರ್ ಬ್ರ್ಯಾಂಡ್ ಚೈತ್ರಾ ಕೋಪಕ್ಕೆ ಮನೆಮಂದಿ ಶಾಕ್.!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.