ಬೌಲರ್‌ಗಳ ಮೆರೆದಾಟ; ನಿಕೋಲ್ಸ್ ಶತಕದಾಟ
Team Udayavani, Mar 17, 2017, 10:38 AM IST
ವೆಲ್ಲಿಂಗ್ಟನ್: ಗುರುವಾರ ಮೊದಲ್ಗೊಂಡ ನ್ಯೂಜಿಲ್ಯಾಂಡ್-ದಕ್ಷಿಣ ಆಫ್ರಿಕಾ ನಡುವಿನ ವೆಲ್ಲಿಂಗ್ಟನ್ ಟೆಸ್ಟ್ ಪಂದ್ಯದಲ್ಲಿ ಬೌಲರ್‌ಗಳು ಮೇಲುಗೈ ಸಾಧಿಸಿದ್ದಾರೆ. ಮೊದಲ ದಿನವೇ ಒಟ್ಟು 14 ವಿಕೆಟ್ ಉರುಳಿದ್ದು, ಇದರ ನಡುವೆ ಕಿವೀಸ್ ಮಧ್ಯಮ ಕ್ರಮಾಂಕದ ಬ್ಯಾಟ್ಸ್ ಮನ್ ಹೆನ್ರಿ ನಿಕೋಲ್ಸ್ ಚೊಚ್ಚಲ ಶತಕ ಬಾರಿಸಿ ಮೆರೆದಿದ್ದಾರೆ.
ಬ್ಯಾಟಿಂಗಿಗೆ ಇಳಿಸಲ್ಪಟ್ಟ ನ್ಯೂಜಿ ಲ್ಯಾಂಡ್ 268 ರನ್ನಿಗೆ ಆಲೌಟಾಗಿದ್ದು, ದಕ್ಷಿಣ ಆಫ್ರಿಕಾ 24 ರನ್ ಮಾಡುವಷ್ಟರಲ್ಲಿ ಆರಂಭಿಕರಿಬ್ಬರನ್ನೂ ಕಳೆದುಕೊಂಡು ಸಂಕಟಕ್ಕೆ ಸಿಲುಕಿದೆ. 47ಕ್ಕೆ 4 ವಿಕೆಟ್ ಕಿತ್ತು ಜೀವನಶ್ರೇಷ್ಠ ಬೌಲಿಂಗ್ ಪ್ರದರ್ಶಿಸಿದ ಜೆಪಿ ಡ್ಯುಮಿನಿ, ಪ್ರವಾಸಿಗರ ಬೌಲಿಂಗ್ ದಾಳಿಯನ್ನು ಮೆಟ್ಟಿನಿಂತು 118 ರನ್ ಬಾರಿಸಿದ ನಿಕೋಲ್ಸ್ ದಿನದ ಹೀರೋಗಳಾಗಿ ಮೂಡಿಬಂದರು.
ದಾಖಲೆ ಜತೆಯಾಟ
ಲ್ಯಾಥಂ (8), ವಿಲಿಯಮ್ಸನ್ (2) ಮತ್ತು ಬ್ರೂಮ್ (0) ಅವರನ್ನು 21 ರನ್ ಆಗುವಷ್ಟರಲ್ಲಿ ಕಳೆದುಕೊಂಡು ತೀವ್ರ ಸಂಕಟಕ್ಕೆ ಸಿಲುಕಿದ ನ್ಯೂಜಿಲ್ಯಾಂಡ್ ಪಾಲಿಗೆ ಆಪದ್ಭಾಂಧವರಾದವರು ಹೆನ್ರಿನಿಕೋಲ್ಸ್. ಅವರಿಗೆ ಕೀಪರ್ ಬ್ರಾಡ್ಲಿ ವಾಟಿÉಂಗ್ (34) ಉತ್ತಮ ಬೆಂಬಲ ವಿತ್ತರು. 101ಕ್ಕೆ 5 ವಿಕೆಟ್ ಬಿದ್ದ ವೇಳೆ ಜತೆಗೂಡಿದ ಇವರು 6ನೇ ವಿಕೆಟಿಗೆ 116 ರನ್ ಪೇರಿಸಿ ತಂಡವನ್ನು ಮೇಲೆತ್ತಿದರು. ಇದು ದಕ್ಷಿಣ ಆಫ್ರಿಕಾ ವಿರುದ್ಧ ನ್ಯೂಜಿಲ್ಯಾಂಡ್ 6ನೇ ವಿಕೆಟಿಗೆ ದಾಖ ಲಿಸಿದ ಅತ್ಯುತ್ತಮ ಜತೆಯಾಟ ವಾಗಿದೆ. ಇದರೊಂದಿಗೆ ಟೆಡ್ ಬ್ಯಾಡ್‌ಕಾಕ್-ಜಿಫ್ ವಿವಿಯನ್ 1932ರಷ್ಟು ಹಿಂದೆ ಪೇರಿಸಿದ 100 ರನ್ ದಾಖಲೆ ಮುರಿಯಲ್ಪಟ್ಟಿತು.
ನಿಕೋಲ್ಸ್ ಅವರ 118 ರನ್ 161 ಎಸೆತಗಳಲ್ಲಿ ದಾಖಲಾಯಿತು. ಇದರಲ್ಲಿ 15 ಬೌಂಡರಿ ಒಳಗೊಂಡಿತ್ತು. ಕೊನೆಯ ಹಂತದಲ್ಲಿ ಸೌಥಿ (27) ಮತ್ತು ಪಟೇಲ್ (ಔಟಾಗದೆ 17) ತಂಡದ ಮೊತ್ತವನ್ನು 260ರ ಗಡಿ ದಾಟಿಸಿದರು. ದಕ್ಷಿಣ ಆಫ್ರಿಕಾಕ್ಕೂ ಬೌಲಿಂಗ್ ಬಿಸಿ ತಟ್ಟಿದ್ದು, ಆರಂಭಿಕರಾದ ಸ್ಟೀಫನ್ ಕುಕ್ (3) ಮತ್ತು ಡೀನ್ ಎಲ್ಗರ್ (9) 12 ರನ್ ಆಗಿದ್ದಾಗ ಒಟ್ಟೊಟ್ಟಿಗೆ ಪೆವಿಲಿಯನ್ ಸೇರಿಕೊಂಡಿದ್ದಾರೆ.
ಸಂಕ್ಷಿಪ್ತ ಸ್ಕೋರ್: ನ್ಯೂಜಿಲ್ಯಾಂಡ್-268 (ನಿಕೋಲ್ಸ್ 118, ರಾವಲ್ 36, ವಾಟಿÉಂಗ್ 34, ಡ್ಯುಮಿನಿ 47ಕ್ಕೆ 4, ಮಹಾರಾಜ್ 47ಕ್ಕೆ 2, ರಬಾಡ 59ಕ್ಕೆ 2, ಮಾರ್ಕೆಲ್ 82ಕ್ಕೆ 2). ದಕ್ಷಿಣ ಆಫ್ರಿಕಾ-2 ವಿಕೆಟಿಗೆ 24.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Australian Open: ಹಿಂದೆ ಸರಿದ ಸಿಮೋನಾ ಹಾಲೆಪ್
South Africa vs Pakistan 2nd Test: ಬಾಶ್ ದಾಖಲೆ: ದ. ಆಫ್ರಿಕಾ ಮುನ್ನಡೆ
Melbourne Cricket Club; ಸಚಿನ್ ತೆಂಡುಲ್ಕರ್ಗೆ ಗೌರವ ಸದಸ್ಯತ್ವ
Boxing: ವಿಶ್ವ ಬಾಕ್ಸಿಂಗ್ ಸಂಸ್ಥೆಯಿಂದ ಮಧ್ಯಂತರ ಏಷ್ಯನ್ ಮಂಡಳಿ
INDWvWIW: ದೀಪ್ತಿ ಶರ್ಮಾ ಆಲ್ ರೌಂಡ್ ಶೋ; ಸರಣಿ ಕ್ಲೀನ್ಸ್ವೀಪ್ ಮಾಡಿದ ವನಿತೆಯರು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.