ನ್ಯೂಜಿಲ್ಯಾಂಡ್ ಓಪನ್ ಬ್ಯಾಡ್ಮಿಂಟನ್ ಪ್ರಣಯ್, ಕಶ್ಯಪ್ ಮುನ್ನಡೆ
Team Udayavani, Aug 2, 2017, 8:20 AM IST
ಆಕ್ಲೆಂಡ್: ನ್ಯೂಜಿಲ್ಯಾಂಡ್ ಓಪನ್ ಗ್ರ್ಯಾನ್‌ಪ್ರಿ ಬ್ಯಾಡ್ಮಿಂಟನ್ ಪಂದ್ಯಾವಳಿಯ ಪುರುಷರ ಸಿಂಗಲ್ಸ್ ನಲ್ಲಿ ಭಾರತದ ಎಚ್.ಎಸ್. ಪ್ರಣಯ್ ಮತ್ತು ಪಾರುಪಳ್ಳಿ ಕಶ್ಯಪ್ ಗೆಲುವಿನ ಆರಂಭ ಕಂಡುಕೊಂಡಿದ್ದಾರೆ. ಆದರೆ ಅಜಯ್ ಜಯರಾಮ್ ಮೊದಲ ಸುತ್ತಿನಲ್ಲೇ ಪರಾಭವಗೊಂಡಿದ್ದಾರೆ.
ಇತ್ತೀಚೆಗಷ್ಟೇ ಯುಎಸ್ ಓಪನ್ ಬ್ಯಾಡ್ಮಿಂಟನ್ ಪ್ರಶಸ್ತಿ ಜಯಿಸಿದ್ದ 4ನೇ ಶ್ರೇಯಾಂಕದ ಪ್ರಣಯ್ ಇಂಡೋನೇಶ್ಯದ ಶೆಸರ್ ಹಿರೆನ್ ರುಸ್ಟಾವಿಟೊ ಅವರನ್ನು 21-14, 21-16 ಅಂತರದಿಂದ ಸೋಲಿಸಿದರು. ಕಾಮನ್ವೆಲ್ತ್ ಗೇಮ್ಸ್ ಚಾಂಪಿಯನ್, 15ನೇ ಶ್ರೇಯಾಂಕಿತ ಕಶ್ಯಪ್ ಕೂಡ ಇಂಡೋನೇಶ್ಯ ಆಟಗಾರನನ್ನೇ ಮಣಿಸಿ ಮುನ್ನಡೆದರು. ಕಶ್ಯಪ್‌ಗೆ ಶರಣಾದವರು ದಿಯೊನಿಸಿಯುಸ್ ಹಯೋಮ್ ರುಂಬಾಕ. ಗೆಲುವಿನ ಅಂತರ 21-5, 21-10.
ಬುಧವಾರದ ದ್ವಿತೀಯ ಸುತ್ತಿನ ಸ್ಪರ್ಧೆಯಲ್ಲಿ ಪ್ರಣಯ್ ಇಂಡೋ ನೇಶ್ಯದ ಫಿರ್ಮಾನ್ ಅಬ್ದುಲ್ ಖೋಲಿಕ್ ವಿರುದ್ಧ ಹಾಗೂ ಕಶ್ಯಪ್ ನ್ಯೂಜಿಲ್ಯಾಂಡಿನ ಆಸ್ಕರ್ ಗುವೊ ವಿರುದ್ಧ ಸೆಣಸಲಿದ್ದಾರೆ.
ಭಾರತದ ಯುವ ಆಟಗಾರರಾದ ಸಿರಿಲ್ ವರ್ಮ, ಪ್ರತುಲ್ ಜೋಶಿ, ಸೌರಭ್ ವರ್ಮ, ನೀರಜ್ ವಶಿಷ್ಠ ಮತ್ತು ಸಾಹಿಲ್ ಸಿಪಾನಿ ಕೂಡ ಗೆಲುವಿನ ಆರಂಭ ಕಂಡು ಕೊಂಡಿದ್ದಾರೆ.
7ನೇ ಶ್ರೇಯಾಂಕದ ಸೌರಭ್ ಆಸ್ಟ್ರೇಲಿಯದ ನಥನ್ ಟಾಂಗ್ ಅವರನ್ನು 21-17, 21-15ರಿಂದ, 16ನೇ ಶ್ರೇಯಾಂಕದ ಸಿರಿಲ್ ಇಂಡೋನೇಶ್ಯದ ರಿಯಾಂತೊ ಸುಬಗj ಅವರನ್ನು 21-13, 21-12ರಿಂದ, ಪ್ರತುಲ್ ನ್ಯೂಜಿ ಲ್ಯಾಂಡಿನ ಡಾಕ್ಸನ್ ವೊಂಗ್ ಅವರನ್ನು 21-10, 21-13ರಿಂದ, ನೀರಜ್ ಇಂಡೋನೇಶ್ಯದ ಆಂಡ್ರೊ ಯುನಾಂಟೊ ಅವರನ್ನು 21-8, 21-9ರಿಂದ, ಸಾಹಿಲ್ ನ್ಯೂಜಿ ಲ್ಯಾಂಡಿನ ಮತ್ತೂಬ್ಬ ಶಟ್ಲರ್ ಜೋಶುವ ಫೆಂಗ್ ಅವರನ್ನು 21-10, 21-10 ಅಂತರದಿಂದ ಮಣಿಸಿದರು.
ಅಜಯ್ ಜಯರಾಮ್ ಪರಾಜಯ
ಅಜಯ್ ಜಯರಾಮ್ ಚೈನೀಸ್ ತೈಪೆಯ ಚಿಯ ಹುಂಗ್ ಲು ವಿರುದ್ಧ 19-21, 13-21 ಅಂತರದಿಂದ ಸೋಲನುಭವಿಸಬೇಕಾಯಿತು. ಪುರುಷರ ಸಿಂಗಲ್ಸ್‌ನಲ್ಲಿ ಭಾರತದ ಉಳಿದ ಸ್ಪರ್ಧಿಗಳಾದ ಸಿದ್ಧಾರ್ಥ ಠಾಕೂರ್, ಸಚಿನ್ ರಾವಲ್, ಅರುಣ್ ಕುಮಾರ್, ಅಶೋಕ್ ಕುಮಾರ್ ಕೂಡ ಪರಾಭವಗೊಂಡಿದ್ದಾರೆ.
ವನಿತಾ ಸಿಂಗಲ್ಸ್ ಅರ್ಹತಾ ಸುತ್ತಿನ ದ್ವಿತೀಯ ಸುತ್ತಿನಲ್ಲಿ ಸಂಯೋಗಿತಾ ಘೋರ್ಪಡೆ ನ್ಯೂಜಿಲ್ಯಾಂಡಿನ ಕ್ಸಿ ಯೋಂಗಿÏ ವಿರುದ್ಧ 3 ಗೇಮ್‌ಗಳ ಕಾದಾಟದ ಬಳಿಕ ಶರಣಾದರು. ಸಂಯೋಗಿತಾ ಮೊದಲ ಸುತ್ತಿನಲ್ಲಿ ನ್ಯೂಜಿಲ್ಯಾಂಡಿನ ಜವಾಯಾ ವೆಕಿ ವಿರುದ್ಧ ಜಯ ಸಾಧಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Minister Sudhakar: ಸೀಟ್ ಬ್ಲಾಕಿಂಗ್ ದಂಧೆ ವಿರುದ್ಧ ಕ್ರಿಮಿನಲ್ ಕೇಸ್ ಅಸ್ತ್ರ
Trump ಗೆಲ್ಲುತ್ತಿದ್ದಂತೆ ಅಮೆರಿಕ ತೊರೆಯಲು ಜನರಿಂದ ಭರದ ಸಿದ್ಧತೆ
Yogi ‘ಬಟೇಂಗೆ’ಹೇಳಿಕೆ ಒಪ್ಪಲ್ಲ ಎಂದ ಅಜಿತ್: ಮಹಾಯುತೀಲಿ ಬಿರುಕು?
Canada; ನಮ್ಮಲ್ಲಿರುವ ಎಲ್ಲ ಹಿಂದೂಗಳು ಮೋದಿ ಬೆಂಬಲಿಗರಲ್ಲ: ಟ್ರಾಡೋ
State Govt: ಒಳಮೀಸಲು ನಿಗದಿ ಆಯೋಗಕ್ಕೆ ನ್ಯಾ| ಎಚ್.ಎನ್. ನಾಗಮೋಹನ್ ದಾಸ್ ಅಧ್ಯಕ್ಷ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.