ನೈಲ್ ವಾಗ್ನರ್ ಮಿಂಚಿನ ಬೌಲಿಂಗ್, ಕಿವೀಸ್‌ಗೆ ಸರಣಿ
Team Udayavani, Mar 13, 2019, 12:30 AM IST
ವೆಲ್ಲಿಂಗ್ಟನ್: ಬಾಂಗ್ಲಾದೇಶ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ಇನ್ನಿಂಗ್ಸ್ ಮತ್ತು 12 ರನ್‌ಗಳ ಗೆಲುವು ಸಾಧಿಸಿ 2-0 ಅಂತರದಿಂದ ಸರಣಿ ಕೈವಶ ಮಾಡಿಕೊಂಡಿದೆ.
ಬಾಂಗ್ಲಾದೇಶದ 211 ರನ್‌ಗಳಿಗೆ ಉತ್ತರವಾಗಿ ನ್ಯೂಜಿಲ್ಯಾಂಡ್ 6 ವಿಕೆಟಿಗೆ 432 ರನ್ ಪೇರಿಸಿ ಇನ್ನಿಂಗ್ಸ್ ಡಿಕ್ಲೇರ್ ಮಾಡಿತ್ತು. ರಾಸ್ ಟಯ್ಲರ್ 200, ಹೆನ್ರಿ ನಿಕೋಲಾಸ್ 107 ರನ್ ಬಾರಿಸಿ ಮಿಂಚಿದ್ದರು. ಪಂದ್ಯದ ಅಂತಿಮ ದಿನವಾದ ಮಂಗಳವಾರ ಬಾಂಗ್ಲಾ ತನ್ನ ದ್ವಿತೀಯ ಇನ್ನಿಂಗ್ಸ್‌ನಲ್ಲಿ 3 ವಿಕೆಟಿಗೆ 80 ರನ್‌ಗಳಿಂದ ಆಟ ಆರಂಭಿಸಿತ್ತು. ಆದರೆ ಕಿವೀಸ್ ಬೌಲಿಂಗ್ ದಾಳಿಗೆ ತತ್ತರಿಸಿ 209 ರನ್‌ಗಳಿಗೆ ಆಲೌಟಾಗುವ ಮೂಲಕ ಇನ್ನಿಂಗ್ಸ್ ಮತ್ತು 12 ರನ್‌ಗಳ ಹೀನಾಯ ಸೋಲು ಕಂಡಿತು.
ನೈಲ್ ವಾಗ್ನರ್ ಬಾಂಗ್ಲಾ ಬ್ಯಾಟ್ಸ್‌ಮನ್‌ಗಳನ್ನು ಕಾಡುವಲ್ಲಿ ಯಶಸ್ವಿಯಾದರು. ಅವರು 5 ವಿಕೆಟ್ ಕಿತ್ತು ತಂಡದ ಗೆಲುವಿನ ರೂವಾರಿಯಾದರು. ಉಳಿದಂತೆ ಟ್ರೆಂಟ್ ಬೌಲ್ಟ್ 52ಕ್ಕೆ 4 ವಿಕೆಟ್ ಕಬಳಿಸಿ ಮೆರೆದರು. ಬಾಂಗ್ಲಾ ಪರ ನಾಯಕ ಮೊಹಮ್ಮದುಲ್ಲ 67, ಮೊಹಮ್ಮದ್ ಮಿಥುನ್ 47 ರನ್ ಗಳಿಸಿದರು.
ಸಂಕ್ಷಿಪ್ತ ಸ್ಕೋರ್: ಬಾಂಗ್ಲಾದೇಶ-211 ಮತ್ತು 209 (ಮೊಹಮ್ಮದುಲ್ಲ 67, ಮೊಹಮ್ಮದ್ ಮಿಥುನ್ 47, ನೈಲ್ ವಾಗ್ನರ್ 45ಕ್ಕೆ 5, ಟ್ರೆಂಟ್ ಬೌಲ್ಟ್ 52ಕ್ಕೆ 4), ನ್ಯೂಜಿಲ್ಯಾಂಡ್-432ಕ್ಕೆ 6 ಡಿಕ್ಲೇರ್ (ರಾಸ್ ಟೇಲರ್ 200, ಹೆನ್ರಿ ನಿಕೋಲಾಸ್ 107, ಕೇನ್ ವಿಲಿಯಮ್ಸನ್ 74, ಅಬು ಜಯಿದ್ 94ಕ್ಕೆ 3, ತೈಜುಲ್ ಇಸ್ಲಾಮ್ 99ಕ್ಕೆ 2).
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Test: ಇಂಗ್ಲೆಂಡ್ ಸರಣಿಯ ಬಳಿಕ ಟೆಸ್ಟ್ ಕ್ರಿಕೆಟ್ ನಿಂದ ದೂರವಾಗಲಿದ್ದಾರೆ ಕಿವೀಸ್ ಆಟಗಾರ
Ranji Trophy: ಇನ್ನಿಂಗ್ಸ್ ನ ಎಲ್ಲಾ 10 ವಿಕೆಟ್ ಕಿತ್ತು ಅನ್ಶುಲ್ ಕಾಂಬೋಜ್ ದಾಖಲೆ
India Vs India A ಅಭ್ಯಾಸ ಪಂದ್ಯ: ಅಗ್ಗಕ್ಕೆ ಔಟಾದ ಕೊಹ್ಲಿ, ಪಂತ್; ಗಾಯಗೊಂಡ ರಾಹುಲ್
India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
K.L. Rahul; ಕುಡ್ಲದ ಜನರ ಬೆಂಬಲವೇ ಸಾಧನೆಗೆ ಕಾರಣ
MUST WATCH
ಹೊಸ ಸೇರ್ಪಡೆ
Davanagere: ಕಾಂತರಾಜ್ ವರದಿ ಸ್ವೀಕರಿಸಿ ಬಹಿರಂಗಪಡಿಸಿ: ಸಿಎಂಗೆ ಆಂಜನೇಯ ಮನವಿ
ಬೆಳಗಾವಿ: ಮಾನವ ಕಳ್ಳ ಸಾಗಾಣಿಕೆ-ಜೀತ ಪದ್ಧತಿ ದೊಡ್ಡ ಸಮಸ್ಯೆ
Belagavi: ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡುವ ಸ್ಥಿತಿ ಬರಲಿದೆ: ಈರಣ್ಣ ಕಡಾಡಿ
Shimoga; ವಿಜಯೇಂದ್ರರನ್ನು ಕಟ್ಟಿ ಹಾಕಲು ಕಾಂಗ್ರೆಸ್ ನಿಂದ ಸುಳ್ಳು ಆರೋಪ: ರಾಘವೇಂದ್ರ
Anandapura: ಸಾಲ ಬಾಧೆ ತಾಳಲಾರದೆ ರೈತ ಆತ್ಮಹ*ತ್ಯೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.