ಲ್ಯಾಥಂ 252; ಬಾಂಗ್ಲಾ ಇದರ ಅರ್ಧ ಮೊತ್ತ!
Team Udayavani, Jan 10, 2022, 10:45 PM IST
ಕ್ರೈಸ್ಟ್‌ಚರ್ಚ್: ನ್ಯೂಜಿ ಲ್ಯಾಂಡಿನ ನಾಯಕ ಟಾಮ್ ಲ್ಯಾಥಂ ಒಬ್ಬರೇ 252 ರನ್ ಪೇರಿಸಿದರೆ, ಬಾಂಗ್ಲಾದೇಶ ಸರಿಯಾಗಿ ಇದರ ಅರ್ಧದಷ್ಟು ಮೊತ್ತಕ್ಕೆ ಆಲೌಟಾಗಿದೆ.
ಇದರೊಂದಿಗೆ ಕ್ರೈಸ್ಟ್‌ಚರ್ಚ್ ಟೆಸ್ಟ್ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ದೊಡ್ಡ ಗೆಲುವಿನತ್ತ ಮುಖ ಮಾಡಿದ್ದು, ಸರಣಿ ಸಮಬಲ ಖಾತ್ರಿಗೊಂಡಿದೆ.
ನ್ಯೂಜಿಲ್ಯಾಂಡ್ ಮೊದಲ ಇನ್ನಿಂಗ್ಸ್ ನಲ್ಲಿ 6 ವಿಕೆಟಿಗೆ 521 ರನ್ ಪೇರಿಸಿ ಡಿಕ್ಲೇರ್ ಮಾಡಿದರೆ, ಬಾಂಗ್ಲಾದೇಶ 126ಕ್ಕೆ ಸರ್ವಪತನ ಕಂಡಿತು.
ಬೌಲ್ಟ್ 300 ವಿಕೆಟ್
ಟ್ರೆಂಟ್ ಬೌಲ್ಟ್ ಘಾತಕ ಬೌಲಿಂಗ್ ನಡೆಸಿ 5 ವಿಕೆಟ್ ಉಡಾಯಿಸಿದರು. ಅವರು ಇನ್ನಿಂಗ್ಸ್ ಒಂದರಲ್ಲಿ 5 ಪ್ಲಸ್ ವಿಕೆಟ್ ಉರುಳಿಸಿದ 9ನೇ ನಿದರ್ಶನ ಇದಾಗಿದೆ. ಇದರೊಂದಿಗೆ ಟೆಸ್ಟ್ ಕ್ರಿಕೆಟ್‌ನಲ್ಲಿ 300 ವಿಕೆಟ್ ಬೇಟೆಯನ್ನು ಪೂರ್ತಿಗೊಳಿಸಿದರು. ಅವರು ಈ ಸಾಧನೆಗೈದ ನ್ಯೂಜಿಲ್ಯಾಂಡಿನ 4ನೇ ಬೌಲರ್. ರಿಚರ್ಡ್ ಹ್ಯಾಡ್ಲಿ, ಡೇನಿಯಲ್ ವೆಟರಿ ಮತ್ತು ಟಿಮ್ ಸೌಥಿ ಉಳಿದ ಮೂವರು.
395 ರನ್ನುಗಳ ಭಾರೀ ಹಿನ್ನಡೆಗೆ ಸಿಲುಕಿದ ಬಾಂಗ್ಲಾದೇಶದ ಮೇಲೆ ನ್ಯೂಜಿಲ್ಯಾಂಡ್ ಫಾಲೋಆನ್ ಹೇರುವ ಸಾಧ್ಯತೆ ಇಲ್ಲ. ಇದು ಕಿವೀಸ್‌ನ ಖ್ಯಾತ ಬ್ಯಾಟ್ಸ್‌ಮನ್ ರಾಸ್ ಟೇಲರ್ ಪಾಲಿನ ಅಂತಿಮ ಟೆಸ್ಟ್ ಆಗಿದ್ದು, ಅವರಿಗೆ ಬ್ಯಾಟಿಂಗ್ ಅವಕಾಶವೊಂದನ್ನು ನೀಡಿ ಗೌರವಯುತ ವಿದಾಯ ಹೇಳುವ ಯೋಜನೆ ನ್ಯೂಜಿಲ್ಯಾಂಡಿನದ್ದಾಗಿದೆ ಎನ್ನಲಾಗಿದೆ.
ಇದನ್ನೂ ಓದಿ:ಸ್ಕೋಡಾ ಕೋಡಿಯಾಕ್ ಫೇಸ್ ಲಿಫ್ಟ್ ; ಹಳೆ ಕಾರಿಗೆ ಹೊಸ ಲುಕ್
ನ್ಯೂಜಿಲ್ಯಾಂಡ್ ಮೊದಲ ದಿನ ಒಂದು ವಿಕೆಟಿಗೆ 349 ರನ್ ಮಾಡಿತ್ತು. 186ರಲ್ಲಿದ್ದ ಲ್ಯಾಥಂ 252ರ ತನಕ ಸಾಗಿದರು. ಇದು ಅವರ ಎರಡನೇ ದ್ವಿಶತಕ. 373 ಎಸೆತ ನಿಭಾಯಿಸಿದ ಲ್ಯಾಥಂ 34 ಬೌಂಡರಿ ಹಾಗೂ 2 ಸಿಕ್ಸರ್ ಸಿಡಿಸಿದರು. 99ರಲ್ಲಿದ್ದ ಡೆವೋನ್ ಕಾನ್ವೆ 109 ರನ್ ಬಾರಿಸಿದರು (166 ಎಸೆತ, 12 ಬೌಂಡರಿ, 1 ಸಿಕ್ಸರ್).
ಬಾಂಗ್ಲಾದೇಶ ಸರದಿಯಲ್ಲಿ ಮಿಂಚಿದ್ದು ಇಬ್ಬರು ಮಾತ್ರ. ಯಾಸಿರ್ ಅಲಿ 55, ನುರುಲ್ ಹಸನ್ 41 ರನ್ ಹೊಡೆದರು.
ಸಂಕ್ಷಿಪ್ತ ಸ್ಕೋರ್: ನ್ಯೂಜಿಲ್ಯಾಂಡ್-6 ವಿಕೆಟಿಗೆ 521 ಡಿಕ್ಲೇರ್ (ಲ್ಯಾಥಂ 252, ಕಾನ್ವೆ 109, ಬ್ಲಿಂಡೆಲ್ ಔಟಾಗದೆ 57, ಯಂಗ್ 54, ಶೊರಿಫುಲ್ 79ಕ್ಕೆ 2, ಇಬಾದತ್ 143ಕ್ಕೆ 2). ಬಾಂಗ್ಲಾದೇಶ-126 (ಯಾಸಿರ್ ಅಲಿ 55, ನುರುಲ್ 41, ಬೌಲ್ಟ್ 43ಕ್ಕೆ 5, ಸೌಥಿ 28ಕ್ಕೆ 3, ಜೇಮಿಸನ್ 32ಕ್ಕೆ 2).
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mangaluru: ಕೇರಳ ಏಜೆನ್ಸಿಯಿಂದ ಇಸ್ರೇಲ್‌ನಲ್ಲಿ ಉದ್ಯೋಗದ ಆಮಿಷ
Kyiv: ಉಕ್ರೇನ್ ವಿದ್ಯುತ್ ಸ್ಥಾವರ ಮೇಲೆ ರಷ್ಯಾ 120 ಕ್ಷಿಪಣಿ ದಾಳಿ
Army Wepon: ಭಾರತದ ಬತ್ತಳಿಕೆಗೆ ದೇಸಿ ಹೈಪರ್‌ಸಾನಿಕ್ ಅಸ್ತ್ರ !
Mobs Storm: ಮಣಿಪುರದಲ್ಲಿ ಭುಗಿಲೆದ್ದ ಹಿಂಸಾಚಾರ!, ಮೈತೇಯಿ ಸಮುದಾಯದಿಂದ ಭಾರೀ ಪ್ರತಿಭಟನೆ
Puttur: ಮಹಿಳೆಯ ಮಾನಭಂಗಕ್ಕೆ ಯತ್ನ; ಆರೋಪಿಗೆ ಜೈಲು ಶಿಕ್ಷೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.