ತ್ರಿಕೋನ ಟಿ20 ಸರಣಿ: ನ್ಯೂಜಿಲೆಂಡಿಗೆ ಭರ್ಜರಿ ಗೆಲುವು
Team Udayavani, Oct 11, 2022, 10:14 PM IST
ಕ್ರೈಸ್ಟ್‌ಚರ್ಚ್: ಫಿನ್ ಅಲೆನ್ ಮತ್ತು ಡೆವೋನ್ ಕಾನ್ವೆ ಅವರ ಉತ್ತಮ ಆಟದಿಂದಾಗಿ ನ್ಯೂಜಿಲೆಂಡ್ ತಂಡವು ತ್ರಿಕೋನ ಟಿ20 ಸರಣಿಯ ಪಂದ್ಯದಲ್ಲಿ ಪಾಕಿಸ್ತಾನವನ್ನು 9 ವಿಕೆಟ್‌ಗಳಿಂದ ಭರ್ಜರಿಯಾಗಿ ಸೋಲಿಸಿದೆ.
ಅಲೆನ್ ಮತ್ತು ಕಾನ್ವೆ ಮೊದಲ ವಿಕೆಟಿಗೆ ಶತಕದ ಜೊತೆಯಾಟದಲ್ಲಿ ಪಾಲ್ಗೊಂಡು ತಂಡಕ್ಕೆ ಸುಲಭ ಜಯ ತಂದುಕೊಟ್ಟರು. ಕೇವಲ 16.1 ಓವರ್‌ಗಳಲ್ಲಿ ಕೇವಲ 1 ವಿಕೆಟಿಗೆ 131 ರನ್ ಪೇರಿಸಿದ ಆತಿಥೇಯ ತಂಡ ಜಯಭೇರಿ ಬಾರಿಸಿತು.
ಈ ಮೊದಲು ಪಾಕಿಸ್ತಾನ 7 ವಿಕೆಟಿಗೆ 130 ರನ್ ಗಳಿಸಲಷ್ಟೇ ಶಕ್ತವಾಗಿತ್ತು. ಮೈಕಲ್ ಬ್ರೇಸ್‌ವೆಲ್ ದಾಳಿಗೆ ಪಾಕಿಸ್ತಾನದ ಅಗ್ರ ಕ್ರಮಾಂಕ ತತ್ತರಿಸಿ ಹೋಗಿತ್ತು. ಅವರು ತನ್ನ 4 ಓವರ್‌ಗಳ ದಾಳಿಯಲ್ಲಿ ಕೇವಲ 11 ರನ್ ನೀಡಿ ಎರಡು ವಿಕೆಟ್ ಹಾರಿಸಿದ್ದರು.
ಅಲೆನ್ ಮತ್ತು ಕಾನ್ವೆ ಈ ಸರಣಿಯಲ್ಲಿ ಅಮೋಘವಾಗಿ ಆಡುತ್ತಿದ್ದಾರೆ. 32 ಎಸೆತಗಳಿಂದ ಅರ್ಧಶತಕ ಪೂರ್ತಿಗೊಳಿಸಿದ್ದ ಅಲೆನ್ 62 ರನ್ ಗಳಿಸಿ ಔಟಾಗಿದ್ದರು. ಒಂದು ಬೌಂಡರಿ ಮತ್ತು 6 ಸಿಕ್ಸರ್ ಬಾರಿಸಿದ್ದರು. ಬಾಂಗ್ಲಾ ವಿರುದ್ಧ 70 ರನ್ ಸಿಡಿಸಿದ್ದ ಕಾನ್ವೆ ಇಲ್ಲಿ ಅಜೇಯ 49 ರನ್ ಬಾರಿಸಿ ತಂಡದ ಗೆಲುವನ್ನು ಸಾರಿದರು.
ಎರಡೂ ಪಂದ್ಯಗಳಲ್ಲಿ ಅಜೇಯ ಸಾಧನೆಗೈದ ಕಾನ್ವೆ ಟಿ20 ವಿಶ್ವಕಪ್‌ಗೆ ಮುಂಚಿತವಾಗಿ ತನ್ನ ಸಾಮರ್ಥ್ಯವನ್ನು ಬಹಿರಂಗಪಡಿಸಿದ್ದಾರೆ.
ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ಈ ಸರಣಿಯಲ್ಲಿ ತಲಾ ಮೂರು ಪಂದ್ಯಗಳನ್ನಾಡಿದ್ದು ತಲಾ ಎರಡರಲ್ಲಿ ಜಯ ಸಾಧಿಸಿ ಸಮಬಲದಲ್ಲಿದೆ. ಸರಣಿಯಲ್ಲಿರುವ ಇನ್ನೊಂದು ತಂಡವಾದ ಬಾಂಗ್ಲಾ ಇನ್ನೂ ಗೆಲುವು ಕಂಡಿಲ್ಲ. ಮುಂದಿನ ಪಂದ್ಯ ಗುರುವಾರ ನ್ಯೂಜಿಲೆಂಡ್ ಮತ್ತು ಬಾಂಗ್ಲಾದೇಶ ನಡುವೆ ನಡೆಯಲಿದೆ.
ಸಂಕ್ಷಿಪ್ತ ಸ್ಕೋರು: ಪಾಕಿಸ್ತಾನ 7 ವಿಕೆಟಿಗೆ 130 (ಇಫ್ತಿಕಾರ್ ಅಹ್ಮದ್ 27, ಆಸಿಫ್ ಅಲಿ 25 ಔಟಾಗದೆ, ಸೌದಿ 31ಕ್ಕೆ 2, ಸ್ಯಾಂಟ್ನರ್ 27ಕ್ಕೆ 2, ಬ್ರೇಸ್‌ವೆಲ್ 11ಕ್ಕೆ 2); ನ್ಯೂಜಿಲೆಂಡ್ 16.1 ಓವರ್‌ಗಳಲ್ಲಿ 1 ವಿಕೆಟಿಗೆ 131 (ಫಿನ್ ಅಲೆನ್ 62, ಡೆವೋನ್ ಕಾನ್ವೆ 49 ಔಟಾಗದೆ).
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಹೊಸ ಟ್ರೆಂಡ್ ನ ಪ್ಯಾಂಟ್ ಧರಿಸಿದ ಯುವಕ;ಸ್ನೇಹಿತರಿಂದ ಅವಮಾನ, ನೊಂದ ಯುವಕ ಆತ್ಮಹತ್ಯೆಗೆ ಯತ್ನ
Perth Test: ಟೀಂ ಇಂಡಿಯಾಗಿಲ್ಲ ಶುಭಾರಂಭ: ಮೊದಲ ಸೆಶನ್ ನಲ್ಲೇ ಪರದಾಡಿದ ಬ್ಯಾಟರ್ ಗಳು
Siruguppa: ಜೋಡೆತ್ತಿನ ಬಂಡಿಗೆ ಡಿಕ್ಕಿ ಹೊಡೆದ ಬಸ್; ಎತ್ತು ಸಾವು
Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
Yellapur: ಕಣ್ಣಿಗೆ ಖಾರಾಪುಡಿ ಎರಚಿ ಹಣ, ಸ್ಕೂಟಿ ದರೋಡೆ; ಆರೋಪಿಗಳ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.