ಸೇಡು ತೀರಿಸಿಕೊಂಡ ಕಿವೀಸ್
Team Udayavani, Aug 27, 2019, 5:30 AM IST
ಕೊಲಂಬೊ: ಕೊಲಂಬೊ ಟೆಸ್ಟ್ ಪಂದ್ಯವನ್ನು ಇನ್ನಿಂಗ್ಸ್ ಹಾಗೂ 65 ರನ್ನುಗಳಿಂದ ಗೆದ್ದ ನ್ಯೂಜಿಲ್ಯಾಂಡ್ ಗಾಲೆ ಸೋಲಿಗೆ ಸೇಡು ತೀರಿಸಿಕೊಂಡಿದೆ. ಸರಣಿಯನ್ನು 1-1 ಸಮಬಲದೊಂದಿಗೆ ಮುಗಿಸಿದೆ.
ಟಾಮ್ ಲ್ಯಾಥಂ ಅವರ 154 ರನ್ ಸಾಹಸದ ಬಳಿಕ ವಿಕೆಟ್ ಕೀಪರ್ ಬ್ರಾಡ್ಲಿ ವಾಟ್ಲಿಂಗ್ ಅಜೇಯ 105 ರನ್ ಬಾರಿಸಿ ನ್ಯೂಜಿಲ್ಯಾಂಡಿನ ದ್ವಿತೀಯ ಇನ್ನಿಂಗ್ಸ್ ಮೊತ್ತವನ್ನು 6ಕ್ಕೆ 431ರ ತನಕ ಬೆಳೆಸಿದರು. ವಾಟ್ಲಿಂಗ್ ಶತಕ ಪೂರ್ತಿಗೊಂಡ ಬಳಿಕ ಕೇನ್ ವಿಲಿಯಮ್ಸನ್ ಇನ್ನಿಂಗ್ಸ್ ಡಿಕ್ಲೇರ್ ಮಾಡಿದರು.
187 ರನ್ನುಗಳ ಹಿನ್ನಡೆಗೆ ಸಿಲುಕಿದ ಲಂಕಾ, ಅಂತಿಮ ದಿನವಾದ ಸೋಮವಾರ ನ್ಯೂಜಿಲ್ಯಾಂಡಿನ ಸಾಂ ಕ ಬೌಲಿಂಗಿಗೆ ತತ್ತರಿಸಿ 122ಕ್ಕೆ ಕುಸಿಯಿತು. ಆರಂಭಿಕರಾದ ಲಹಿರು ತಿರಿಮನ್ನೆ, ಕುಸಲ್ ಪೆರೆರ ಇಬ್ಬರೂ ಶೂನ್ಯಕ್ಕೆ ಔಟಾಗುವುದರೊಂದಿಗೆ ಲಂಕಾ ಸಂಕಟ ಬಿಗಡಾಯಿಸುತ್ತ ಹೋಯಿತು. 32 ರನ್ನಿಗೆ 5 ವಿಕೆಟ್ ಬಿತ್ತು. ಸೋಲು ಖಾತ್ರಿಯಾಯಿತು.
ಕೀಪರ್ ನಿರೋಷನ್ ಡಿಕ್ವೆಲ್ಲ 51 ರನ್ ಬಾರಿಸಿ ಹೋರಾಟ ಜಾರಿಯಲ್ಲಿರಿಸಿದರೂ ಅವರಿಗೆ ಇನ್ನೊಂದು ಕಡೆಯಿಂದ ಬೆಂಬಲ ಸಿಗಲಿಲ್ಲ.
ಸಂಕ್ಷಿಪ್ತ ಸ್ಕೋರ್:
ಶ್ರೀಲಂಕಾ-244 ಮತ್ತು 122 (ಡಿಕ್ವೆಲ್ಲ 51, ಕರುಣರತ್ನೆ 21, ಸೌಥಿ 15ಕ್ಕೆ 2, ಬೌಲ್ಟ್ 17ಕ್ಕೆ 2, ಪಟೇಲ್ 31ಕ್ಕೆ 2, ಸೋಮರ್‌ವಿಲ್ಲೆ 49ಕ್ಕೆ 2).
ಪಂದ್ಯಶ್ರೇಷ್ಠ: ಟಾಮ್ ಲ್ಯಾಥಂ.
ಸರಣಿಶ್ರೇಷ್ಠ: ಬ್ರಾಡ್ಲಿ ವಾಟ್ಲಿಂಗ್ .
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Karnataka: ಹೊಸ ಸಿಎಂ ನೇತೃತ್ವದಲ್ಲಿ ಬೆಳಗಾವಿ ಅಧಿವೇಶನ: ಸುನಿಲ್
Udupi: ಶತಚಂಡಿಕಾಯಾಗ, ಬ್ರಹ್ಮಮಂಡಲ ಸೇವೆ ಆಮಂತ್ರಣ ಪತ್ರಿಕೆ ಬಿಡುಗಡೆ
Children’s Day: ಶಿಕ್ಷಣವನ್ನು ಪ್ರೋತ್ಸಾಹಿಸಿ ಮೋದಿ ಕನಸಿನ ವಿಕಸಿತ ಭಾರತ ನಿರ್ಮಾಣ ಮಾಡೋಣ
Bantwal: ನಾಪತ್ತೆಯಾದವರ ಮೃತ*ದೇಹ ಉಳ್ಳಾಲ ರೈಲು ಹಳಿಯಲ್ಲಿ ಪತ್ತೆ
Dharmasthala; ಗ್ರಾಮಾಭಿವೃದ್ಧಿ ಯೋಜನೆ ಜನರ ನಾಡಿಮಿಡಿತ: ನಿರ್ಮಲಾ ಸೀತಾರಾಮನ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.