ವನಿತೆಯರ ಟಿ-ಟ್ವೆಂಟಿ: ಕಿವೀಸ್ ವಿರುದ್ಧ ಸರಣಿ ಸೋತ ಭಾರತ
Team Udayavani, Feb 8, 2019, 6:36 AM IST
ಆಕ್ಲಂಡ್: ಆತಿಥೇಯ ನ್ಯೂಜಿಲ್ಯಾಂಡ್ ವಿರುದ್ಧದ ಎರಡನೇ ಚುಟುಕು ಪಂದ್ಯವನ್ನು ಸೋತ ಭಾರತೀಯ ಮಹಿಳೆಯರು ಇನ್ನೂ ಒಂದು ಪಂದ್ಯ ಬಾಕಿ ಇರುವಂತೆಯೇ ಸರಣಿಯನ್ನು ಸೋತಿದ್ದಾರೆ. ಶುಕ್ರವಾರ ನಡೆದ ಪಂದ್ಯದಲ್ಲಿ ಹರ್ಮನ್ ಪ್ರೀತ್ ಕೌರ್ ಪಡೆ ಕೊನೆಯ ಎಸೆತದಲ್ಲಿ ಸೊತಿದೆ.
ಈಡನ್ ಪಾರ್ಕ್ನಲ್ಲಿ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿದ ನ್ಯೂಜಿಲ್ಯಾಂಡ್ ಭಾರತವನ್ನು 135 ರನ್ ಗಳಿಗೆ ಕಟ್ಟಿಹಾಕುವಲ್ಲಿ ಯಶಸ್ವಿಯಾಗಿದರು. ಸ್ಟಾರ್ ಆಟಗಾರ್ತಿ ಸ್ನೃತಿ ಮಂಧನಾ (36) ಮತ್ತು ಜೆಮಿಮಾ ರೋಡ್ರಿಗಸ್ ( 72) ದ್ವಿತೀಯ ವಿಕೆಟ್ ಗೆ ಉತ್ತಮ ಜೊತೆಯಾಟ ನಡೆಸಿದರು. ವೇಗವಾಗಿ ರನ್ ಪೇರಿಸಿದ ಈ ಜೋಡಿ 63 ರನ್ ಜೊತೆಯಾಟ ನಡೆಸಿದಾಗ ಮಂದನಾ ಔಟ್ ಆದರು. ನಂತರ ಬಂದ ಯಾವ ಆಟಗಾರರು ಕೂಡಾ ಕ್ರೀಸ್ ಕಚ್ಚಿ ಆಡುವಲ್ಲಿ ವಿಪಲರಾದರು. ರೋಡ್ರಿಗಸ್ ಅರ್ಧಶತಕ ಬಾರಿಸಿದರೂ ಕೂಡಾ ಯಾವುದೇ ಜೊತೆಯಾಟ ನಡೆಯದ ಕಾರಣ ಭಾರತ 20 ಓವರ್ ನಲ್ಲಿ ಕೇವಲ 135 ರನ್ ಗಳಿಸಲಷ್ಟೇ ಶಕ್ತವಾಯಿತು.
ಗುರಿ ಬೆನ್ನತ್ತಿದ ಕಿವೀಸ್ ವನಿತೆಯರು ಉತ್ತಮ ಆರಂಭ ಪಡೆದರೂ ಕೊನೆಯಲ್ಲಿ ಸ್ವಲ್ಪ ಎಡವಿದರು. ಅಂತಿಮ ಎಸೆತದಲ್ಲಿ ವಿಜಯದ ರನ್ ಗಳಿಸಿದರು. ನುಭವಿ ಸೂಜಿ ಬೇಟ್ಸ್ 62 ರನ್ ಗಳಿಸಿದರೆ ನಾಯಕಿ ಆಮಿ ಸ್ಯಾಟರ್ ವೈಟ್ 23 ರನ್ ಗಲಿಸಿದರು. ಭಾರತದ ಪರ ರಾಧ ಯಾದವ್ ಮತ್ತು ಅರುಂಧತಿ ರೆಡ್ಡಿ ತಲಾ ಎರಡು ವಿಕೆಟ್ ಪಡೆದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Waqf: ಮುಸ್ಲಿಮರ ಗುರಿ ಮಾಡುವುದು ಬಿಟ್ಟರೆ ಬಿಜೆಪಿಗೆ ಬೇರೇನೂ ಇಲ್ಲ: ಸಚಿವ ದಿನೇಶ್
Maharashtra: ಸ್ತ್ರೀಯರಿಗೆ ಮಾಸಿಕ 3000, ರೈತರ ಸಾಲ ಮನ್ನಾ: ಎಂವಿಎ
Jet Airways ಆಸ್ತಿ ಮಾರಾಟಕ್ಕೆ ಸುಪ್ರೀಂ ಕೋರ್ಟ್ ಅನುಮತಿ
Bengaluru; ಒಂದೇ ದಿನ ಚಿನ್ನದ ಬೆಲೆ 10 ಗ್ರಾಂಗೆ 1,790 ರೂ. ಇಳಿಕೆ
Delhi Pollution: ಕೃಷಿ ತ್ಯಾಜ್ಯ ಸುಟ್ಟರೆ ರೈತರಿಗೆ ಇನ್ನು ದುಪ್ಪಟ್ಟು ದಂಡ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.