ಶ್ರೀಲಂಕಾ ಕ್ರಿಕೆಟ್ ಸತ್ತಿದೆ ಎಂಬ ಮರಣ ವಾರ್ತೆ!
Team Udayavani, Mar 23, 2017, 12:24 PM IST
ಕೊಲಂಬೊ: “ಶ್ರೀಲಂಕಾ ಕ್ರಿಕೆಟ್ ಸತ್ತಿದೆ, ಶವವನ್ನು ದಹನ ಮಾಡಲಾಗುತ್ತದೆ. ಬೂದಿಯನ್ನು ಬಾಂಗ್ಲಾಕ್ಕೊಯ್ಯಲಾಗುತ್ತದೆ…’ ಹೀಗೊಂದು ಮರಣವಾರ್ತೆ ಶ್ರೀಲಂಕಾದ “ದಿ ಐಲ್ಯಾಂಡ್’ ಪತ್ರಿಕೆಯಲ್ಲಿ ಪ್ರಕಟವಾಗಿದೆ. ಜತೆಗೆ ಶವಪೆಟ್ಟಿಗೆಯನ್ನು ಶ್ರೀಲಂಕಾ ಕ್ರಿಕೆಟ್ ಸಂಸ್ಥೆ ಹೊತ್ತು ಸಾಗುತ್ತಿರುವ ಚಿತ್ರವನ್ನೂ ಪ್ರಕಟಿಸಿದೆ. ಇದಕ್ಕೆ ಕಾರಣ, ಮಾ. 19ರಂದು ಮುಗಿದ 2ನೇ ಟೆಸ್ಟ್ ನಲ್ಲಿ ಪ್ರವಾಸಿ ಬಾಂಗ್ಲಾ ವಿರುದ್ಧ ಲಂಕಾ ಸೋತದ್ದು!
ಇದು ಬಾಂಗ್ಲಾದ 100ನೇ ಟೆಸ್ಟ್ ಎನ್ನುವುದು ಗಮನಾರ್ಹ. ಈ ಸೋಲು ಶ್ರೀಲಂಕಾದ ಕ್ರಿಕೆಟ್ ಅಭಿಮಾನಿಗಳನ್ನು ಕಂಗೆಡಿಸಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಈಗಷ್ಟೇ ಬಲಿಷ್ಠವಾಗುತ್ತಿರುವ ಬಾಂಗ್ಲಾ ವಿರುದ್ಧ ತನ್ನದೇ ನೆಲದಲ್ಲಿ ಮಂಡಿಯೂರಿದ್ದನ್ನು “ದಿ ಐಲ್ಯಾಂಡ್’ ಪತ್ರಿಕೆ ಗಂಭೀರವಾಗಿ ಪರಿಗಣಿಸಿ ಮರಣವಾರ್ತೆ ಪ್ರಕಟಿಸುವ ಮಟ್ಟಕ್ಕೆ ಹೋಗಿದೆ.
ಇಂಥ ಘಟನೆ 135 ವರ್ಷಗಳ ಹಿಂದೊಮ್ಮೆ ನಡೆದಿತ್ತು. 1882ರಲ್ಲಿ ಆ್ಯಶಸ್ ಸರಣಿಯಲ್ಲಿ ಆಸ್ಟ್ರೇಲಿಯ ವಿರುದ್ಧ ಇಂಗ್ಲೆಂಡ್ ತಂಡ ಸೋತಿತ್ತು. ಆಗ ರೊಚ್ಚಿಗೆದ್ದಿದ್ದ ಬ್ರಿಟನ್‌ನ “ನ್ಪೋರ್ಟಿಂಗ್ ಟೈಮ್ಸ್’ ಪತ್ರಿಕೆ ಇಂಗ್ಲೆಂಡ್ ಕ್ರಿಕೆಟ್ ಸತ್ತಿದೆ ಎಂದು ಮರಣವಾರ್ತೆ ಹಾಕಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Beguru Colony Movie: ಟೀಸರ್‌ನಲ್ಲಿ ಬೇಗೂರು ಕಾಲೋನಿ
ಸಾಕಿದ ನಾಯಿಗಾಗಿ ಬಾಯ್ ಫ್ರೆಂಡ್ ಜತೆ ಬ್ರೇಕಪ್ ಮಾಡಿಕೊಂಡ ಬಿಗ್ ಬಾಸ್ ಮಾಜಿ ಸ್ಪರ್ಧಿ
Udupi: ಅಂಬಲಪಾಡಿ ಓವರ್‌ಪಾಸ್ ಕಾಮಗಾರಿ ಆರಂಭ
Nita Ambani: ಬೆಂಗಳೂರಿನ ಪ್ರತಿಷ್ಠಿತ ಕೈಮಗ್ಗ ಮಳಿಗೆಗೆ ಭೇಟಿ ನೀಡಿದ ನೀತಾ ಅಂಬಾನಿ
Wedding: ಚಳಿಗೆ ಮದುವೆ ಮಂಟಪದಲ್ಲೇ ಪ್ರಜ್ಞೆ ತಪ್ಪಿದ ವರ… ನನಗೆ ಈ ಹುಡುಗ ಬೇಡವೆಂದ ವಧು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.