ಮರಳಿದ ನೇಮರ್ ಬ್ರಝಿಲ್ ಸೂಪರ್; ವಿಶ್ವಕಪ್ ಕ್ವಾರ್ಟರ್ ಫೈನಲ್‌ಗೆ ಲಗ್ಗೆ
Team Udayavani, Dec 6, 2022, 11:18 PM IST
ದೋಹಾ: “ಸೇಮ್ ಓಲ್ಡ್ ನೇಮರ್’ ಮರಳಿ ತಂಡ ಸೇರಿಕೊಂಡು ತನ್ನ ಎಂದಿನ ತಾಕತ್ತು ತೋರಿಸುವ ಮೂಲಕ ಬ್ರಝಿಲ್ ಖುಷಿ ಖುಷಿಯಾಗಿ ವಿಶ್ವಕಪ್ ಕ್ವಾರ್ಟರ್ ಫೈನಲ್‌ಗೆ ಲಗ್ಗೆ ಇರಿಸಿದೆ. ಪ್ರಿ ಕ್ವಾರ್ಟರ್ ಫೈನಲ್ ಮುಖಾಮುಖೀಯಲ್ಲಿ ಅದು ಏಷ್ಯಾದ ಬಲಿಷ್ಠ ತಂಡವಾದ ದಕ್ಷಿಣ ಕೊರಿಯಾವನ್ನು 4-1 ಗೋಲುಗಳಿಂದ ಮಣಿಸಿ ಮೆರೆಯಿತು.
ಬ್ರಝಿಲ್ ತನ್ನ ಈ ಗೆಲುವನ್ನು ಹಾಸಿಗೆ ಹಿಡಿದಿರುವ ಲೆಜೆಂಡ್ರಿ ಆಟಗಾರ ಪೀಲೆಗೆ ಅರ್ಪಿಸಿತು. ಪೀಲೆ ಕೂಡ ಚೇತರಿಸಿಕೊಳ್ಳುತ್ತಿರುವ ಸುದ್ದಿ ಬಂದಿರುವುದು ಬ್ರಝಿಲ್ ಸಂತಸವನ್ನು ಇಮ್ಮಡಿಗೊಳಿಸಿದೆ.
ಇದಕ್ಕೂ ಹಿಂದಿನ ಪ್ರಿ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ರನ್ನರ್ ಅಪ್ ಕ್ರೊವೇಶಿಯ ಶೂಟೌಟ್‌ನಲ್ಲಿ ಜಪಾನ್‌ಗೆ 3-1 ಅಂತರದ ಸೋಲುಣಿಸಿತ್ತು. ಇದರೊಂದಿಗೆ ಏಷ್ಯಾದ ತಂಡಗಳಿಗೆ ವಿಶ್ವಕಪ್ ಬಾಗಿಲು ಮುಚ್ಚಿ ದಂತಾಯಿತು. ಶುಕ್ರವಾರದ ಕ್ವಾರ್ಟರ್ ಫೈನಲ್‌ನಲ್ಲಿ ಬ್ರಝಿಲ್-ಕ್ರೊವೇಶಿಯ ಮುಖಾಮುಖೀ ಆಗಲಿವೆ.
ಇನ್ನೊಂದೆಡೆ ದಕ್ಷಿಣ ಕೊರಿಯಾ ಸೋತ ಬೆನ್ನಲೇ ಕೋಚ್ ಪಾವ್ಲೊ ಬೆಂಟೊ ಹುದ್ದೆಯಿಂದ ಕೆಳಗಿಳಿಯು ವುದಾಗಿ ಘೋಷಿಸಿದರು. ಮೂಲತಃ ಪೋರ್ಚುಗಲ್‌ನವರಾದ ಬೆಂಟೊ ಕಳೆದ ವಿಶ್ವಕಪ್ ಬಳಿಕ ದಕ್ಷಿಣ ಕೊರಿಯಾ ಕೋಚ್ ಆಗಿ ಅಧಿಕಾರ ಸ್ವೀಕರಿಸಿದ್ದರು. ಈ ವಿಶ್ವಕಪ್ ಕೊನೆಗೆ ಇವರ ಅವಧಿ ಮುಗಿಯುತ್ತಿತ್ತು.ಇದು “ಸ್ಟೇಡಿಯಂ 974’ನಲ್ಲಿ ನಡೆದ ಕೊನೆಯ ವಿಶ್ವಕಪ್ ಪಂದ್ಯ.
ಆಕ್ರಮಣಕಾರಿ ಆರಂಭ
ಅತ್ಯಂತ ಆಕ್ರಮಣಕಾರಿ ಪ್ರದ ರ್ಶನ ನೀಡಿದ ಬ್ರಝಿಲ್ ತನ್ನ ನಾಲ್ಕೂ ಗೋಲುಗಳನ್ನು ಬರೀ 36 ನಿಮಿಷಗಳಲ್ಲಿ ಸಿಡಿಸಿತು. 7ನೇ ನಿಮಿಷದಲ್ಲೇ ವಿನ್ಸಿಯಸ್ ಜೂನಿ ಯರ್ ಖಾತೆ ತೆರೆದರು. 10ನೇ ನಿಮಿಷದಲ್ಲಿ ನೇಮರ್ ಮ್ಯಾಜಿಕ್ ಮಾಡಿದರು. ನೇಮರ್ ಈ ವಿಶ್ವಕಪ್ ಕೂಟದಲ್ಲಿ ಹೊಡೆದ ಮೊದಲ ಗೋಲು ಇದಾಗಿದೆ. ಹಾಗೆಯೇ 3 ವಿಶ್ವಕಪ್‌ಗ್ಳಲ್ಲಿ ಗೋಲು ಹೊಡೆದ ಬ್ರಝಿಲ್‌ನ 3ನೇ ಆಟಗಾರನೆನಿಸಿದರು. ಉಳಿದಿಬ್ಬರೆಂದರೆ ಪೀಲೆ ಮತ್ತು ರೊನಾಲ್ಡೊ.
29ನೇ ನಿಮಿಷದಲ್ಲಿ ರಿಚಾರ್ಲಿಸನ್ ಈ ಮುನ್ನಡೆಯನ್ನು ಮೂರಕ್ಕೆ ಏರಿಸಿ ದರು. ಲುಕಾಸ್ ಪಕ್ವೇಟ 36ನೇ ನಿಮಿಷದಲ್ಲಿ 4ನೇ ಗೋಲು ಬಾರಿಸಿ ತಂಡವನ್ನು ಸುಸ್ಥಿತಿಗೆ ತಲುಪಿಸಿದರು.
ಎಲ್ಲ ಮುಗಿದ ಬಳಿಕ 76ನೇ ನಿಮಿಷದಲ್ಲಿ ದಕ್ಷಿಣ ಕೊರಿಯಾದ ಪೈಕ್ ಸೆಯುಂಗ್ ಗೋಲೊಂದನ್ನು ಹೊಡೆದು ಸೋಲಿನ ಅಂತರವನ್ನು ತಗ್ಗಿಸಿದರು.
ದ. ಕೊರಿಯಾ ಕ್ವಾರ್ಟರ್ ಫೈನಲ್ ಪ್ರವೇಶಿಸಬೇಕಾದರೆ ಪವಾಡವೇ ಸಂಭವಿಸಬೇಕಿತ್ತು. 2002ರಲ್ಲಿ ಅದು ಪ್ರಿ ಕ್ವಾರ್ಟರ್ ಫೈನಲ್ ದಾಟಿ ಸೆಮಿಫೈನಲ್ ತನಕ ಮುನ್ನುಗ್ಗಿತ್ತು. ಅಂದು ದಕ್ಷಿಣ ಕೊರಿಯಾ ಫಿಫಾ ವಿಶ್ವಕಪ್ ಪಂದ್ಯಾ ವಳಿಯ ಜಂಟಿ ಆತಿಥ್ಯ ವಹಿಸಿ ಸ್ಮರಣೀಯ ಸಾಧನೆಗೈದಿತ್ತು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.