ಕ್ರೋವೇಷಿಯಾ ಆಘಾತ… ಬ್ರೆಜಿಲ್ ಪರ ಆಡುವುದನ್ನೇ ನಿಲ್ಲಿಸುತ್ತಾರಾ ನೇಯ್ಮರ್
Team Udayavani, Dec 10, 2022, 12:40 PM IST
2022 ರ ಫಿಫಾ ವಿಶ್ವಕಪ್ ನ ಕ್ವಾರ್ಟರ್ ಫೈನಲ್ ನಲ್ಲಿ ಐದು ಬಾರಿಯ ಚಾಂಪಿಯನ್ ಬ್ರೆಜಿಲ್ ಹೊರಬಿದ್ದಿದೆ. ಕ್ರೊವೇಷಿಯಾ ವಿರುದ್ಧದ ನಾಕೌಟ್ ಪಂದ್ಯದಲ್ಲಿ ಪೆನಾಲ್ಟಿ ಶೂಟೌಟ್ ನಲ್ಲಿ ಸೋಲನುಭವಿಸಿದ ಬ್ರೆಜಿಲ್ ತನ್ನ ವಿಶ್ವಕಪ್ ಅಭಿಯಾನ ಅಂತ್ಯಗೊಳಿಸಿತು.
ಪೆನಾಲ್ಟಿಯಲ್ಲಿ 4-2 ಅಂತರದಿಂದ ಸೋಲನುಭವಿಸಿದ ಬ್ರೆಜಿಲ್ ಆಘಾತವನ್ನು ಎದುರಿಸಿತು. ಪಂದ್ಯ ಸೋತ ಬಳಿಕ ಸ್ಟಾರ್ ಆಟಗಾರ ನೇಯ್ಮರ್ ಬಿಕ್ಕಿಬಿಕ್ಕಿ ಅತ್ತರು.
ನೇಯ್ಮರ್ 2019 ರಲ್ಲಿ ರಿಯೊ ಒಲಿಂಪಿಕ್ ಚಿನ್ನದ ಪದಕ ಮತ್ತು ಕೋಪಾ ಅಮೇರಿಕಾ ಪ್ರಶಸ್ತಿಯನ್ನು ಗೆದ್ದರು ಆದರೆ ವಿಶ್ವಕಪ್ ಗೆಲುವಿನ ಅವಕಾಶ ಮತ್ತೆ ತಪ್ಪಿದೆ.
ಇದನ್ನೂ ಓದಿ:“ನಾನು ದೊಡ್ಡ ತಪ್ಪು ಮಾಡಿದೆ.. ಆಪ್ ಸೇರಿದ ಕೆಲವೇ ಗಂಟೆಗಳಲ್ಲಿ ʼಘರ್ ವಾಪಸ್ಸಿʼ ಆದ ಕಾಂಗ್ರೆಸ್ ಸದಸ್ಯರು
ಪಂದ್ಯದ ಬಳಿಕ ಮಾತನಾಡಿದ ಅವರು, ಮುಂದೆ ಬ್ರೆಜಿಲ್ ಆಡುವ ಖಚಿತ ಭರವಸೆ ನೀಡಿಲ್ಲ. ನನಗೀಗ 34 ವರ್ಷವಾಗಿದೆ. ಈಗಲೇ, ಈ ಕ್ಷಣದಲ್ಲೇ ಏನೂ ಹೇಳಲಾಗದು ಎಂದು ನೇಯ್ಮರ್ ಹೇಳಿದರು.
“ನಾನು ಅದರ ಬಗ್ಗೆ ಯೋಚಿಸಲು ಈ ಸಮಯವನ್ನು ತೆಗೆದುಕೊಳ್ಳಲು ಬಯಸುತ್ತೇನೆ. ನಾನು ಬ್ರೆಜಿಲ್ ಪರವಾಗಿ ಆಡುವುದೇ ಇಲ್ಲ ಅಥವಾ ನಾನು ತಂಡಕ್ಕೆ ಹಿಂತಿರುಗುತ್ತೇನೆ ಎಂದು 100% ಹೇಳುವುದಿಲ್ಲ” ಎಂದು ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ಮಾತನಾಡಿದ್ದಾರೆ.
ಬ್ರೆಜಿಲ್ ತಂಡದ ಸದಸ್ಯ ಡ್ಯಾನಿ ಅಲ್ವಿಸ್ ಅವರು ಅಂತಾರಾಷ್ಟ್ರೀಯ ಆಟದಿಂದ ವಿದಾಯ ಹೇಳುವುದಾಗಿ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
RCB ತಂಡಕ್ಕೆ ಸೇರಿದ ಫಿಲ್ ಸಾಲ್ಟ್, ಜಿತೇಶ್ ಶರ್ಮ, ಹ್ಯಾಜಲ್‌ವುಡ್
IPL Auction 2025: ಸೇಲ್ ಆದ – ಆಗದ ಪ್ರಮುಖರು.. 3ನೇ ಸುತ್ತಿನ ಸಂಪೂರ್ಣ ಪಟ್ಟಿ ಇಲ್ಲಿದೆ..
IPL Mega Auction: ಮೂರನೇ ಸೆಟ್ ನ ಆಟಗಾರರ ಹರಾಜು ಮಾಹಿತಿ ಇಲ್ಲಿದೆ
IPL 2025 Auction: ಮೊದಲ ಎರಡು ಸುತ್ತಿನಲ್ಲಿ ಮಾರಾಟವಾದ ಆಟಗಾರರ ಸಂಪೂರ್ಣ ಪಟ್ಟಿ..
IPL Auction: ಡೆಲ್ಲಿ ಕ್ಯಾಪಿಟಲ್ಸ್ ಪಾಲಾದ ಕೆಎಲ್ ರಾಹುಲ್; ಖರೀದಿ ಆರಂಭಿಸಿದ ಆರ್ ಸಿಬಿ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.