Nigar Sultana: ಬಾಂಗ್ಲಾದಿಂದ ವಿಶ್ವಕಪ್ ಸ್ಥಳಾಂತರ: ನಾಯಕಿ ನಿಗಾರ್ ಸುಲ್ತಾನಾ ಬೇಸರ
Team Udayavani, Aug 24, 2024, 10:13 PM IST
ಢಾಕಾ: ತವರಲ್ಲಿ ಟಿ20 ವನಿತಾ ವಿಶ್ವಕಪ್ ಪಂದ್ಯವನ್ನು ಆಡಲು ಸಾಧ್ಯವಾಗದೇ ಇದ್ದುದಕ್ಕೆ ಬಾಂಗ್ಲಾದೇಶ ತಂಡದ ನಾಯಕಿ ನಿಗಾರ್ ಸುಲ್ತಾನಾ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.
ಇತ್ತೀಚೆಗೆ ಬಾಂಗ್ಲಾದೇಶದಲ್ಲಿ ಸಂಭವಿಸಿದ ದಂಗೆಯಿಂದಾಗಿ ಈ ಪಂದ್ಯಾವಳಿ ಯುಎಇಗೆ ಸ್ಥಳಾಂತರಗೊಂಡಿತ್ತು. ಕಳೆದ ಎರಡು ದಿನಗಳಿಂದ ನಾನು ತೀವ್ರ ಬೇಸರದಲ್ಲಿದ್ದೆ. ಕೇವಲ ನನಗಷ್ಟೇ ಅಲ್ಲ, ತಂಡದ ಎಲ್ಲರಿಗೂ ತವರಲ್ಲಿ ವಿಶ್ವಕಪ್ ಆಡಬೇಕೆಂಬ ಮಹೋನ್ನತ ಕನಸಿತ್ತು. ನಮ್ಮ ಕುಟುಂಬದವರೂ ಇದಕ್ಕಾಗಿ ಕಾದಿದ್ದರು. ಅಭಿಮಾನಿಗಳು, ಸ್ನೇಹಿತರು ತುದಿಗಾಲಲ್ಲಿ ನಿಂತಿದ್ದರು. ಎಲ್ಲರೂ ನಾನಾ ರೀತಿಯ ಸಿದ್ಧತೆಯಲ್ಲಿ ತೊಡಗಿದ್ದರು. ಇದೊಂದು ಪ್ರತಿಷ್ಠೆಯ ಸಂಗತಿ. ಆದರೆ ಎಲ್ಲವೂ ತಲೆಕೆಳಗಾಯಿತು’ ಎಂದು ನಿಗಾರ್ ಸುಲ್ತಾನಾ ಹೇಳಿದರು.
ಆದರೀಗ ನಾನು ತುಸು ನಿರಾಳಗೊಂಡಿದ್ದೇನೆ. ಅನೇಕರು ನಾನಾ ರೀತಿಯಲ್ಲಿ ಪರಿಸ್ಥಿತಿಯನ್ನು ಮನದಟ್ಟು ಮಾಡಿದರು. ಒಂದಿಷ್ಟು ಸಮಾಧಾನವಾಗಿದೆ’ ಎಂದು ಶೇರ್ ಎ ಬಾಂಗ್ಲಾ ನ್ಯಾಶನಲ್ ಸ್ಟೇಡಿಯಂ’ನಲ್ಲಿ ಅಭ್ಯಾಸ ಮಾಡುತ್ತಿದ್ದ ನಿಗಾರ್ ಸುಲ್ತಾನಾ ಮಾಧ್ಯಮದವರಲ್ಲಿ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.