ಸ್ಪೇನ್ ದಾಳಿಗೆ ಬೆಚ್ಚಿದ ನೈಗರ್
Team Udayavani, Oct 11, 2017, 11:51 AM IST
ಕೊಚ್ಚಿ: ಯುರೋಪಿಯನ್ ಚಾಂಪಿಯನ್ ಸ್ಪೇನ್ ಅಂಡರ್-17 ವಿಶ್ವಕಪ್ ಫುಟ್‌ಬಾಲ್ ಪಂದ್ಯಾವಳಿಯಲ್ಲಿ ಗೆಲುವಿನ ಖಾತೆ ತೆರೆದಿದೆ. ಮಂಗಳವಾರ ಕೊಚ್ಚಿಯಲ್ಲಿ ನಡೆದ “ಡಿ’ ವಿಭಾಗದ ಪಂದ್ಯದಲ್ಲಿ ಸ್ಪೇನ್ 4-0 ಗೋಲುಗಳಿಂದ ನೈಗರ್‌ಗೆ ಸೋಲುಣಿಸಿತು. ಇದೇ ಮೊದಲ ಸಲ ಕಿರಿಯರ ಫುಟ್‌ಬಾಲ್ ಆಡಲಿಳಿದ ನೈಗರ್ ಮೊದಲ ಪಂದ್ಯದಲ್ಲಿ ಕೊರಿಯಾಕ್ಕೆ 1-0 ಅಂತರದ ಸೋಲುಣಿಸಿ ಸುದ್ದಿಯಾಗಿತ್ತು.
ಸ್ಪೇನ್ ತನ್ನ ಆರಂಭಿಕ ಪಂದ್ಯದಲ್ಲಿ ಬ್ರಝಿಲ್‌ಗೆ 1-2 ಅಂತರದಿಂದ ಶರಣಾಗಿತ್ತು. ಸಹಜವಾಗಿಯೇ ಪರಾಜಿತ ತಂಡಗಳೆರಡರ ನಡುವಿನ ಕಾಲ್ಚೆಂಡಿನ ಕದನ ವಿಪರೀತ ನಿರೀಕ್ಷೆ ಮೂಡಿಸಿತ್ತು. ಆದರೆ ಏಕಪಕ್ಷೀಯವಾಗಿ ಮುಗಿಯಿತು. ಸ್ಪೇನ್ ಪರ ನಾಯಕ ಅಬೆಲ್ ರಿಜ್ 2 ಗೋಲು ಹೊಡೆದರೆ, ಸಿಸರ್ ಗೆಲಾಬರ್ಟ್ ಮತ್ತು ಸರ್ಗಿಯೊ ಗೊಮೆಜ್ ಒಂದೊಂದು ಗೋಲು ಹೊಡೆದರು.
ಗೋವಾದಲ್ಲಿ ನಡೆದ ಕೋಸ್ಟಾರೀಕ-ಗಿನಿ ನಡುವಿನ ಸ್ಪರ್ಧೆ 2-2 ಗೋಲುಗಳಿಂದ ಡ್ರಾಗೊಂಡಿತು. ಇವೆರಡೂ ಮೊದಲ ಪಂದ್ಯದಲ್ಲಿ ಸೋಲನುಭವಿಸಿದ್ದವು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Atul Subhash Case: ಪತ್ನಿ ಮೇಲಿನ ಕೇಸ್ ರದ್ದತಿಗೆ ನಿರಾಕರಣೆ
Junior Doctor: ಮಾತನಾಡಲು ಕರೆದು ಕಿರಿಯ ವೈದ್ಯೆಯ ಮೇಲೆ ಸಹೋದ್ಯೋಗಿಯಿಂದಲೇ ಅತ್ಯಾಚಾರ…
Suspend: ನಕಲಿ ದಾಖಲೆ ಕೊಟ್ಟು ಹುದ್ದೆ ಪಡೆದ ಪಿಎಸ್‌ಐ ಸಸ್ಪೆಂಡ್
Sandalwood: ಶ್ರೀರಾಘವೇಂದ್ರ ಚಿತ್ರವಾಣಿ ಪ್ರಶಸ್ತಿ ಪ್ರಕಟ
Gadag: ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದಲ್ಲಿ ನಡೆದ ದುರ್ಘಟನೆಗೆ ಒಂದು ವರ್ಷ…
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.