ನೈಟ್ ಕ್ಲಬ್ ಪ್ರಕರಣ: ಸ್ಟೋಕ್ಸ್ ಬಂಧನ
Team Udayavani, Sep 27, 2017, 11:41 AM IST
ಲಂಡನ್: ಇಂಗ್ಲೆಂಡಿನ ಆಲ್ರೌಂಡರ್ ಬೆನ್ ಸ್ಟೋಕ್ಸ್ ನೈಟ್ಕ್ಲಬ್ ಪ್ರಕರಣವೊಂದರಲ್ಲಿ ಬಂಧನಕ್ಕೊಳಗಾಗಿದ್ದು, ವಿಚಾರಣೆ ಬಳಿಕ ಬಿಡು ಗಡೆಗೊಂಡಿದ್ದಾರೆ. ರವಿವಾರ ರಾತ್ರಿ ಬ್ರಿಸ್ಟಲ್ನ ನೈಟ್ಕ್ಲಬ್ಒಂದರಲ್ಲಿ ಬೆನ್ ಸ್ಟೋಕ್ಸ್ ಕುಡಿದು ದಾಂಧಲೆ ನಡೆಸಿದ್ದಾರೆ. ಸೋಮವಾರ ಬೆಳಗಿನ ಜಾವ ಬಂಧನಕ್ಕೊಳಗಾದ ಅವರನ್ನು ವಿಚಾರಣೆ ಬಳಿಕ ಬಿಡುಗಡೆ ಮಾಡಲಾಗಿದೆ. ಆದರೆ ತನಿಖೆ ಮುಂದುವರಿದಿದೆ.
ಘಟನೆಯ ವೇಳೆ ಬೆನ್ ಸ್ಟೋಕ್ಸ್ ಜತೆ ಆರಂಭಕಾರ ಅಲೆಕ್ಸ್ ಹೇಲ್ಸ್ ಕೂಡ ಇದ್ದರು. ಹೇಲ್ಸ್ ಅವರೀಗ ಈ ಘಟನೆಯ ಪ್ರಮುಖ ಸಾಕ್ಷೀದಾರನಾಗಿದ್ದು, ವಿಚಾರಣೆ ವೇಳೆ ಪೊಲೀಸರಿಗೆ ಮಾಹಿತಿ ನೀಡಬೇಕಿದೆ. ಹೀಗಾಗಿ ವೆಸ್ಟ್ ಇಂಡೀಸ್ ವಿರುದ್ಧದ 4ನೇ ಏಕದಿನ ಪಂದ್ಯದಿಂದ ಇವರಿಬ್ಬರನ್ನೂ ಇಂಗ್ಲೆಂಡ್ ತಂಡದಿಂದ ಕೈಬಿಡಲಾಗಿದೆ ಎಂದು ಇಸಿಬಿ ಟೀಮ್ ಡೈರೆಕ್ಟರ್ ಆ್ಯಂಡ್ರೂé ಸ್ಟ್ರಾಸ್ ತಿಳಿಸಿದ್ದಾರೆ.
ಬೆನ್ ಸ್ಟೋಕ್ಸ್ ಬಾರಿನಲ್ಲಿ ಗಲಭೆ ನಡೆಸಿದ್ದು ಇದೇ ಮೊದಲೇನಲ್ಲ. 2012 ಮತ್ತು 2013ರಲ್ಲೂ ಇಂಥದೇ 2 ಪ್ರಕರಣಗಳಲ್ಲಿ ಭಾಗಿಯಾಗಿ ವಿಚಾರಣೆಗೊಳಗಾಗಿದ್ದರು. 2013ರಲ್ಲಿ ಇಂಗ್ಲೆಂಡ್ ಲಯನ್ಸ್ ಪರ ಆಡುತ್ತಿದ್ದಾಗ ಕುಡಿದು ಗಲಾಟೆ ಮಾಡಿದ್ದರು. ಆಗ ಅವರ ವಿರುದ್ಧ ಶಿಸ್ತಿನ ಕ್ರಮ ತೆಗೆದುಕೊಳ್ಳಲಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Patna: ಆಸ್ಪತ್ರೆಯಲ್ಲಿ ಮೃತಪಟ್ಟ ವ್ಯಕ್ತಿಯ ಕಣ್ಣು ನಾಪತ್ತೆ!; ಇಲಿ ಕಚ್ಚಿದೆ ಎಂದ ವೈದ್ಯರು
Kerala govt: ಶಬರಿಮಲೆ ವರ್ಚುವಲ್ ಕ್ಯೂ ಬುಕ್ಕಿಂಗ್ ಮಿತಿ ಹೆಚ್ಚಳ
Uttar Pradesh: ಝಾನ್ಸಿ ಅಗ್ನಿ ಅವಘಡ: ಗುರುತೇ ಸಿಗದಂತೆ ಕರಕಲಾದ ಹಸುಳೆಗಳು
G20 Leaders Summit: ಪ್ರಧಾನಿ ಮೋದಿ ನೈಜೀರಿಯಾ, ಬ್ರೆಜಿಲ್, ಗಯಾನಾ ಪ್ರವಾಸ ಶುರು
Chhattisgarh: ನೀರಿನ ಬಾವೀಲಿ ಪೆಟ್ರೋಲ್: ಸಂಗ್ರಹಕ್ಕೆ ಮುಗಿಬಿದ್ದ ಜನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.