ಜೆಪಿ ಡ್ಯುಮಿನಿಯ ಸಾರ್ವಕಾಲಿಕ ಐಪಿಎಲ್ ತಂಡದಲ್ಲಿ ಧೋನಿಗೆ ಜಾಗವಿಲ್ಲ!
Team Udayavani, May 30, 2020, 10:04 AM IST
ಮುಂಬೈ: ಕೋವಿಡ್-19 ಸೋಂಕಿನ ಕಾರಣದಿಂದ ಬಾರಿಯ ಐಪಿಎಲ್ ನಡೆಯುವ ಬಗ್ಗೆ ನಿರ್ಧಾರವಾಗಿಲ್ಲ. ಮುಚ್ಚಿದ ಬಾಗಿಲಿನಲ್ಲಿ ಐಪಿಎಲ್ ನಡೆಸಲು ಬಿಸಿಸಿಐ ಉತ್ಸುಕವಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿದೆ. ಐಪಿಎಲ್ ನಲ್ಲಿ ಬ್ಯುಸಿ ಆಗಬೇಕಾಗಿದ್ದ ಆಟಗಾರರು ಈಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಸ್ಥರಾಗಿದ್ದಾರೆ.
ಈ ನಡುವೆ ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗ ಜೆ ಪಿ ಡ್ಯುಮಿನಿ ತನ್ನ ಸಾರ್ವಕಾಲಿನ ನೆಚ್ಚಿನ ಐಪಿಎಲ್ ತಂಡವನ್ನು ಪ್ರಕಟಿಸಿದ್ದಾರೆ. ಆದರೆ ಮಾಜಿ ಆಲ್ ರೌಂಡರ್ ಐಪಿಎಲ್ ನ ಪ್ರಮುಖ ನಿಯಮವಾದ ನಾಲ್ವರು ವಿದೇಶಿಯರು ಮತ್ತು ಏಳು ಭಾರತೀಯ ಆಟಗಾರರ ನಿಯಮವನ್ನೇ ಮರೆತಿದ್ದಾರೆ. ಅಂದಹಾಗೆ ಡ್ಯುಮಿನಿ ತಂಡದಲ್ಲಿರುವುದು ಕೇವಲ ಇಬ್ಬರು ಭಾರತೀಯರು.
ಡ್ಯುಮಿನಿ ತಂಡದ ನಾಯಕ ವಿರಾಟ್ ಕೊಹ್ಲಿ, ಐಪಿಎಲ್ ನ ಯಶಸ್ವಿ ನಾಯಕ ರೋಹಿತ್ ಶರ್ಮಾ ತಂಡದಲ್ಲಿದ್ದರೂ ಡ್ಯಮಿನಿ, ಕೊಹ್ಲಿಯನ್ನು ಹೆಸರಿಸಿದ್ದು ಅಚ್ಚರಿಗೆ ಕಾರಣವಾಗಿದೆ. ಮಹೇಂದ್ರ ಸಿಂಗ್ ಧೋನಿ ಮತ್ತು ರೈನಾಗೆ ಜಾಗವೇ ಇಲ್ಲ.
ಡ್ಯುಮಿನಿ ಸಾರ್ವಕಾಲಿಕ ಐಪಿಎಲ್ ಇಲೆವೆನ್: ಕ್ರಿಸ್ ಗೇಲ್, ಆಡಂ ಗಿಲ್‌ಕ್ರಿಸ್ಟ್, ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ (ನಾ), ಎಬಿ ಡಿವಿಲಿಯರ್ಸ್, ಕೀರನ್ ಪೊಲಾರ್ಡ್, ಆಂಡ್ರೆ ರಸ್ಸೆಲ್, ಬ್ರೆಟ್ ಲೀ, ಮುತ್ತಯ್ಯ ಮುರಳೀಧರನ್, ಲಸಿತ್ ಮಾಲಿಂಗ, ಇಮ್ರಾನ್ ತಾಹಿರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
T20; ಇಂಗ್ಲೆಂಡ್ ವಿರುದ್ಧದ ಸರಣಿಗೆ ಟೀಮ್ ಇಂಡಿಯಾ ಪ್ರಕಟ: ಶಮಿಗೆ ಅವಕಾಶ
Malaysia Open; ಸೆಮಿಫೈನಲ್‌ನಲ್ಲಿ ಸಾತ್ವಿಕ್-ಚಿರಾಗ್ ಜೋಡಿಗೆ ಸೋಲು
VijayHazareTrophy: ಪಡಿಕ್ಕಲ್ ಶತಕ; ಬರೋಡಾ ವಿರುದ್ದ ಗೆದ್ದು ಸೆಮಿ ಪ್ರವೇಶಿಸಿದ ಕರ್ನಾಟಕ
ChampionsTrophy: ಭಾರತೀಯ ತಂಡ ಪ್ರಕಟ ವಿಳಂಬ ಸಾಧ್ಯತೆ; ರಾಹುಲ್ ಗೆ ಬಿಸಿಸಿಐ ವಿಶೇಷ ಸಂದೇಶ
Bangladesh: ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿದ ತಮೀಮ್ ಇಕ್ಬಾಲ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.