ತ.ನಾಡು ಟಿ20 ಲೀಗ್ನಲ್ಲಿ ಮ್ಯಾಚ್ ಫಿಕ್ಸಿಂಗ್ ನಡೆದಿಲ್ಲ!
ತನಿಖಾ ಸಮಿತಿ ವರದಿ ಅಂಗೀಕರಿಸಿದ ಕ್ರಿಕೆಟ್ ಸಂಸ್ಥೆ
Team Udayavani, Oct 4, 2019, 5:25 AM IST
ಚೆನ್ನೈ: ತಮಿಳುನಾಡು ಟಿ20 ಕ್ರಿಕೆಟ್ ಲೀಗ್ನಲ್ಲಿ ಕ್ರಮ ತೆಗೆದುಕೊಳ್ಳುವಂತಹ ಯಾವುದೇ ಫಿಕ್ಸಿಂಗ್ ಕೃತ್ಯ ನಡೆದಿಲ್ಲ ಎಂದು ಆಂತರಿಕ ತನಿಖಾ ಸಮಿತಿ ವರದಿ ನೀಡಿದೆ. ಇದನ್ನು ಆಧರಿಸಿ ಪ್ರತಿಕ್ರಿಯೆ ನೀಡಿದ ತಮಿಳುನಾಡು ಕ್ರಿಕೆಟ್ ಮಂಡಳಿ ಕಾರ್ಯದರ್ಶಿ ಆರ್.ಎಸ್. ರಾಮಸ್ವಾಮಿ, “ನಾವು ವರದಿಯನ್ನು ಒಪ್ಪಿಕೊಳ್ಳಲು ತೀರ್ಮಾನಿಸಿದ್ದೇವೆ. ಸಮಿತಿ ಕೆಲವು ರಹಸ್ಯವಾದ ಪ್ರಮುಖ ಶಿಫಾರಸುಗಳನ್ನು ಮಾಡಿದೆ. ತಮಿಳುನಾಡು ಕ್ರಿಕೆಟನ್ನು ಸ್ವತ್ಛವಾಗಿಟ್ಟುಕೊಳ್ಳಲು ಇದು ಅಗತ್ಯವಾಗಿದೆ’ ಎಂದಿದ್ದಾರೆ.
ಇತ್ತೀಚೆಗೆ ತಮಿಳುನಾಡು ಕ್ರಿಕೆಟ್ ಟಿ20 ಲೀಗ್ನಲ್ಲಿ ಭಾರೀ ಪ್ರಮಾಣದ ಫಿಕ್ಸಿಂಗ್ ನಡೆದಿದೆ ಎಂದು ವರದಿ ಆಗಿತ್ತು. ಇಬ್ಬರು ತರಬೇತುದಾರರು, ಕೆಲವು ಪ್ರಥಮ ದರ್ಜೆ ಕ್ರಿಕೆಟಿಗರ ಮೇಲೆ ಬಿಸಿಸಿಐ ಭ್ರಷ್ಟಾಚಾರ ನಿಗ್ರಹ ದಳ ಕಣ್ಣಿಟ್ಟಿತ್ತು. ಇದು ವಿವಾದದ ಸ್ವರೂಪ ಪಡೆಯುತ್ತಿದ್ದಂತೆ ಸೆ. 16ರಂದು ತಮಿಳುನಾಡು ಕ್ರಿಕೆಟ್ ಸಂಸ್ಥೆ ಆಂತರಿಕ ತನಿಖಾ ಸಮಿತಿಯನ್ನು ರಚಿಸಿತ್ತು. ಇದರ ವರದಿಯಲ್ಲಿ ಟಿಎನ್ಪಿಎಲ್ ಸ್ವತ್ಛವಾಗಿದೆ, ಯಾವುದೇ ಸಮಸ್ಯೆಯಿಲ್ಲ ಎಂದು ಹೇಳಲಾಗಿದೆ. ಆದರೆ ಈ ವರದಿ ನಿರೀಕ್ಷಿತ ಎಂದು ಕೆಲವು ವಲಯ ಗಳಲ್ಲಿ ಟೀಕೆಗಳು ಬಂದಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.