ಪಿಸಿಬಿ ಜತೆ ಸಭೆ ಬೇಡವಿತ್ತು: ಗೋಯಲ್
Team Udayavani, May 31, 2017, 10:40 AM IST
ಹೊಸದಿಲ್ಲಿ: ಪಾಕಿಸ್ಥಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಜತೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಸಭೆ ನಡೆಸುವ ಅಗತ್ಯವೇ ಇರಲಿಲ್ಲ ಎಂದು ಕೇಂದ್ರ ಕ್ರೀಡಾ ಸಚಿವ ವಿಜಯ್ ಗೋಯಲ್ ತಿಳಿಸಿದ್ದಾರೆ. ಪಾಕಿಸ್ಥಾನದ ಜತೆ ಕ್ರಿಕೆಟ್ ಸಾಧ್ಯವಿಲ್ಲವೆನ್ನುವುದು ಬಿಸಿಸಿಐಗೂ ಗೊತ್ತು. ಆದ್ದರಿಂದ ಆ ದೇಶದ ಜತೆ ಸಭೆ ನಡೆಸುವ ಅಗತ್ಯವಾದರೂ ಏನು ಎಂದು ಕೇಳಿದ್ದಾರೆ.
ಬಿಸಿಸಿಐ ಸೋಮವಾರ ಪಾಕಿಸ್ಥಾನ ಕ್ರಿಕೆಟ್ ಮಂಡಳಿಯೊಂದಿಗೆ ಕೆಲ ವಿಷಯಗಳಿಗೆ ಸಂಬಂಧಿಸಿದಂತೆ ಮಾತುಕತೆ ನಡೆಸಿತ್ತು. ಇದನ್ನು ಹಿನ್ನೆಲೆಯಾಗಿಟ್ಟುಕೊಂಡು ಗೋಯಲ್ ಪ್ರತಿ ಕ್ರಿಯಿಸಿದ್ದಾರೆ.
ಸೋಮವಾರ ಬಿಸಿಸಿಐ-ಪಿಸಿಬಿ ನಡುವೆ ನಡೆದ ಸಭೆ ಯಾವುದೇ ನಿರ್ದಿಷ್ಟ ತೀರ್ಮಾನಕ್ಕೆ ಬರಲು ವಿಫಲವಾಗಿದೆ. ಹಿಂದೆ ಬಿಸಿಸಿಐ ಹೇಳಿಕೊಂಡಂತೆ ಅದು ತನ್ನೊಂದಿಗೆ ಕ್ರಿಕೆಟ್ ಆಡಿಲ್ಲ. ಆದ್ದರಿಂದ 380 ಕೋಟಿ ರೂ. ಪರಿಹಾರ ನೀಡಬೇಕು ಎಂದು ಪಾಕಿಸ್ಥಾನ ಒತ್ತಾಯಿಸಿತ್ತು. ಇದನ್ನು ಬಿಸಿಸಿಐ ತಿರಸ್ಕರಿಸುವುದರೊಂದಿಗೆ ಮಾತುಕತೆ ಮುರಿದು ಬಿದ್ದಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Karnataka sports meet: ಈಜು ಸ್ಪರ್ಧೆ ಆರಂಭ; ದಕ್ಷಿಣ ಕನ್ನಡ ಮೇಲುಗೈ
Under-19 Women’s T20 World Cup: ವೈಷ್ಣವಿ ಹ್ಯಾಟ್ರಿಕ್, 5 ರನ್ನಿಗೆ 5 ವಿಕೆಟ್ ದಾಖಲೆ
Australia Open: 50ನೇ ಬಾರಿಗೆ ಗ್ರ್ಯಾನ್‌ಸ್ಲಾಮ್ ಸೆಮೀಸ್‌ಗೇರಿದ ಜೋಕೋ
Women’s ODI rankings: ಅಗ್ರಸ್ಥಾನಕ್ಕೆ ಮಂಧನಾ ಸನಿಹ
Rinku Singh: ತಂದೆಗೆ ಸೂಪರ್ ಬೈಕ್ ಗಿಫ್ಟ್ ನೀಡಿದ ರಿಂಕು ಸಿಂಗ್… ಬೆಲೆ ಎಷ್ಟು ಗೊತ್ತಾ?