ಕಂಠೀರವದಲ್ಲಿ ಅಥ್ಲೀಟ್ಗೆ ಅಡಚಣೆ ಆಗಿಲ್ಲ: ಮಧ್ವರಾಜ್
Team Udayavani, Dec 6, 2017, 10:15 AM IST
ಬೆಂಗಳೂರು: ಕಂಠೀರವ ಕ್ರೀಡಾಂಗಣದಲ್ಲಿ ಅಥ್ಲೀಟ್ಗಳ ಅಭ್ಯಾಸಕ್ಕೆ ಅಡಚಣೆಯಾಗಿಲ್ಲ, ನಿತ್ಯದ ಚಟುವಟಿಕೆ ನಿರಂತರವಾಗಿದೆ ಎಂದು ಯುವಸಬಲೀಕರಣ ಕ್ರೀಡಾ ಸಚಿವ ಪ್ರಮೋದ್ ಮಧ್ವರಾಜ್ ತಿಳಿಸಿದ್ದಾರೆ.
ವಿಕಾಸ ಸೌಧದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಅವರು ಮಂಗಳವಾರ ಮಾತನಾಡಿದರು. ಕಂಠೀರವದಲ್ಲಿ ಅಭ್ಯಾಸ ನಡೆಸುವ ಎಲ್ಲ ಅಥ್ಲೀಟ್ಗಳಿಗೂ ಉತ್ತಮ ಭವಿಷ್ಯವಿದೆ. ಇತರೆ ಕ್ರೀಡೆಗಳನ್ನು ಅಭ್ಯಾಸ ನಡೆಸುತ್ತಿರುವಕ್ರೀಡಾಪಟುಗಳಿಗೂ ಭವ್ಯ ಭವಿಷ್ಯ ವಿದೆ. ಸಣ್ಣಪುಟ್ಟ ಅಡಚಣೆಗಳು ಇವೆ. ಅವನ್ನೆಲ್ಲ ಸರಿ ಮಾಡುತ್ತಿದ್ದೇವೆ. ಪ್ರಕರಣ ನ್ಯಾಯಾಲಯದಲ್ಲಿ ಇರುವುದರಿಂದ ಈಗಲೇ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.
ಕಂಠೀರವ ಕ್ರೀಡಾಂಗಣವನ್ನು ಫುಟ್ಬಾಲ್ ಆಯೋಜಿಸಲು ಖಾಸಗಿ ಕ್ಲಬ್ಗ ನೀಡಲಾಗಿದೆ. ಫುಟ್ಬಾಲ್ ಹಾವಳಿಯಿಂದಾಗಿ ಅಥ್ಲೀಟ್ಗಳ ದೈನಂದಿನ ಅಭ್ಯಾಸಕ್ಕೆ ತೀವ್ರ ಅಡಚಣೆಯಾಗುತ್ತಿದೆ. ಕೆಲವು ಸಲ ಕ್ರೀಡಾಪಟುಗಳನ್ನೇ ಟ್ರ್ಯಾಕ್ನೊಳಕ್ಕೆ ಬಿಡುವುದಿಲ್ಲ. ಅಥ್ಲೀಟ್ ಗಳಿಗಿರುವ ಕ್ರೀಡಾಂಗಣವನ್ನು ಇತರರಿಗೆ ನೀಡಬಾರದು ಎಂದು ಕೋರಿ ಕೋಚ್ ಬೀಡು ಸೇರಿದಂತೆ ಹಲವು ಕೋಚ್ಗಳು, ರಾಷ್ಟ್ರೀಯ ಅಥ್ಲೀಟ್ ಗಳು ಹೈಕೋರ್ಟ್ ಮೆಟ್ಟಿಲೇರಿದ್ದರು. ಇದನ್ನು ವಿಚಾರಣೆಗೆತ್ತಿಕೊಂಡ ನ್ಯಾಯಾಲಯ ಸೋಮವಾರ ಕಾರಣ ಕೇಳಿ ಕ್ರೀಡಾ ಇಲಾಖೆಗೆ ನೋಟಿಸ್ ಜಾರಿ ಮಾಡಿದೆ. ಬುಧವಾರ ವಿಚಾರಣೆ ನಡೆಯಲಿದೆ. ಮಹತ್ವದ ನಿರ್ಧಾರ ಹೊರಬೀಳುವ ಸಾಧ್ಯತೆ ಇದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಇಂಡಿಯಾ ಓಪನ್ ಬ್ಯಾಡ್ಮಿಂಟನ್ ಭಾರತದ 21 ಸ್ಪರ್ಧಿಗಳು ಭಾಗಿ
Women’s Ashes Series: ಆಸ್ಟ್ರೇಲಿಯ-ಇಂಗ್ಲೆಂಡ್ ಬಿಗ್ ಫೈಟ್
Jaiswal: ಚಾಂಪಿಯನ್ಸ್ ಟ್ರೋಫಿಗೆ ಯಶಸ್ವಿ ಜೈಸ್ವಾಲ್; ಇಂಗ್ಲೆಂಡ್ ಸರಣಿಯಲ್ಲೇ ಪದಾರ್ಪಣೆ?
Yuzi Chahal: ಡಿವೋರ್ಸ್ ಸುದ್ದಿಯ ನಡುವೆ ಬೇರೆ ಯುವತಿ ಜತೆ ಕಾಣಿಸಿಕೊಂಡ ಚಾಹಲ್; ಯಾರೀಕೆ?
Team India: ಕೆಎಲ್, ಪಾಂಡ್ಯ, ಗಿಲ್ ಅಲ್ಲ.., ಚಾಂಪಿಯನ್ಸ್ ಟ್ರೋಫಿಗೆ ಈತನೇ ಉಪ ನಾಯಕ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mangaluru: ಒನ್ ನೇಶನ್-ಒನ್ ಡೆಸ್ಟಿನೇಶನ್ಗೆ ಮಂಗಳೂರಿನ ತಣ್ಣೀರುಬಾವಿ ಬೀಚ್
HMP: ಮತ್ತಿಬ್ಬರು ಮಕ್ಕಳಲ್ಲಿ ಎಚ್ಎಂಪಿ ವೈರಸ್: ದೇಶದಲ್ಲಿ 7ಕ್ಕೇರಿದ ಕೇಸ್
ಇಂಡಿಯಾ ಓಪನ್ ಬ್ಯಾಡ್ಮಿಂಟನ್ ಭಾರತದ 21 ಸ್ಪರ್ಧಿಗಳು ಭಾಗಿ
Gangolli; ಬೋಟ್ಗೆ ಮರದ ದಿಮ್ಮಿ ಢಿಕ್ಕಿ: ಅಪಾರ ಹಾನಿ
Mangaluru: ಲಕ್ಷಾಂತರ ವಿದ್ಯಾರ್ಥಿಗಳಿಗೆ ಕೆಪಿಟಿ ದಾರಿದೀಪ: ಸಚಿವ ಡಾ| ಎಂ.ಸಿ. ಸುಧಾಕರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.