ಪಾಪ.. ಕೊಹ್ಲಿಗೆ ವಿಶ್ರಾಂತಿಯೇ ಇಲ್ವಂತೆ..!
Team Udayavani, Mar 29, 2021, 6:59 PM IST
ನವದೆಹಲಿ : ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ಜಯ ಸಾಧಿಸಿದ ವಿರಾಟ್ ಕೊಹ್ಲಿ ಇದೀಗ ಐಪಿಎಲ್ ಕಡೆ ದೃಷ್ಟಿ ಹಾಯಿಸಿದ್ದಾರೆ. ಐಪಿಎಲ್ ಇನ್ನೇನು ಬಹದ ದಿನ ಉಳಿದಿಲ್ಲ. ಮುಂದಿನ ವಾರದಿಂದಲೇ ಪಂದ್ಯಾಟಗಳು ಶುರುವಾಗುತ್ತಿದ್ದು, ಈಗಾಗಲೇ ಕೊಹ್ಲಿ ತಯಾರಿಯಲ್ಲಿದ್ದಾರೆ.
ಈ ಬಗ್ಗೆ ಟ್ವಿಟ್ಟರ್ ನಲ್ಲಿ ಮಾಹಿತಿಯೊಂದನ್ನು ಹಂಚಿಕೊಂಡಿರುವ ಕ್ರಿಕೆಟಿಗ ಕೊಹ್ಲಿ, ವಿಶ್ರಾಂತಿಯ ದಿನಗಳೇ ಇಲ್ಲ. ಇಲ್ಲಿಂದ ಐಪಿಎಲ್ ಕಡೆ ಓಡಬೇಕು ಎಂದು ಬರೆದಿದ್ದಾರೆ. ತಾವು ಜಿಮ್ ನಲ್ಲಿ ಓಡುತ್ತಿರುವ ವಿಡಿಯೋವನ್ನು ಹಾಕಿ ಈ ರೀತಿ ಬರೆದಿದ್ದಾರೆ.
No rest days. From here on its all about speed #IPL pic.twitter.com/ULkpYmO1uI
— Virat Kohli (@imVkohli) March 29, 2021
ಸಾಮಾಜಿಕ ಜಾಲತಾಣದಲ್ಲಿ ಈ ಪೋಸ್ಟ್ ಗೆ ಕಮೆಂಟ್ ಮಾಡಿರುವ ಆರ್ ಸಿ ಬಿ ಆಟಗಾರ ಎಬಿ ಡೀವಿಲಿಯರ್ಸ್ ನಾನು ಕೂಡ ನಿಮ್ಮ ಜೊತೆ ಟೀಮ್ ಸೇರಿಕೊಳ್ಳಲು ಪ್ಯಾಕ್ ಮಾಡಿಕೊಂಡಿದ್ದೇನೆ ಎಂದು ಬರೆದಿದ್ದಾರೆ.
ಆರ್ ಸಿ ಬಿ ತಂಡದಲ್ಲಿ ಘಟಾನುಘಟಿ ಆಟಗಾರರಿದ್ದರೂ ಇಲ್ಲಿಯವರೆಗೆ ಒಂದು ಬಾರಿಯೂ ಟ್ರೋಫಿಯನ್ನು ತನ್ನದಾಗಿಸಿಕೊಂಡಿಲ್ಲ. ಏಪ್ರಿಲ್ 9 ರಿಂದ ಶುರುವಾಗುವ 2021 ರ ಐಪಿಎಲ್ ನಲ್ಲಿ ಹೇಗೆ ಆಡುತ್ತೆ ಎಂಬುದನ್ನ ಕಾದು ನೋಡಬೇಕು.
Loving the form @imVkohli .. I’m all packed to join the team pic.twitter.com/6rBIV3T3EH
— AB de Villiers (@ABdeVilliers17) March 29, 2021
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.