ಕುಂಬ್ಳೆಯ ಬೂಟಿನ ಲೇಸ್ ಕಟ್ಟುವ ಯೋಗ್ಯತೆ ಇವರಿಗಿದೆಯೇ?!
Team Udayavani, May 27, 2017, 11:11 AM IST
ಹೊಸದಿಲ್ಲಿ: ಭಾರತ ತಂಡ ಪ್ರತಿಷ್ಠಿತ ಚಾಂಪಿಯನ್ಸ್ ಟ್ರೋಫಿ ಆಡಲು ಇಂಗ್ಲೆಂಡಿಗೆ ತೆರಳಿದ ಹೊತ್ತಿನಲ್ಲೇ ಇತ್ತ ಕೋಚ್ ಹುದ್ದೆಗೆ ಬಿಸಿಸಿಐ ಅರ್ಜಿ ಆಹ್ವಾನಿಸಿದ ಕ್ರಮ ವನ್ನು ಮಾಜಿ ಕ್ರಿಕೆಟಿಗ ಬಿಷನ್ ಸಿಂಗ್ ಬೇಡಿ ಉಗ್ರವಾಗಿ ಟೀಕಿಸಿದ್ದಾರೆ. ಕುಂಬ್ಳೆ ನಿರ್ವಹಣೆ ಪ್ರಶ್ನಾತೀತ ಎಂದ ಅವರು, ಈ ಬಿಸಿಸಿಐ ಮಂದಿಗೆ ಕುಂಬ್ಳೆ ಬೂಟಿನ ಲೇಸ್ ಕಟ್ಟುವ ಯೋಗ್ಯತೆಯಾದರೂ ಇದೆಯೇ ಎಂದು ಪ್ರಶ್ನಿಸಿದ್ದಾರೆ.
“ನಮ್ಮ ತಂಡ ಚಾಂಪಿಯನ್ಸ್ ಟ್ರೋಫಿ
ಉಳಿಸಿಕೊಳ್ಳಲು ಇಂಗ್ಲೆಂಡ್ ನೆಲದ ಮೇಲೆ ಕಾಲಿಟ್ಟಿದೆಯಷ್ಟೇ, ಅಷ್ಟರಲ್ಲಿ ಇಲ್ಲಿ ಬಿಸಿಸಿಐ ಮಂದಿ ಕೋಚ್ ಅಭ್ಯರ್ಥಿ ಗಳಿಗಾಗಿ ಜಾಹೀರಾತು ನೀಡಿದ್ದಾರೆ. ಇವರಿಗೆ ತಲೆ ಸರಿ ಇದೆಯೇ? ಹೀಗೆ ಅರ್ಜಿ ಆಹ್ವಾನಿಸಿದ ಬಿಸಿಸಿಐ ಮಂದಿಗೆ ಅನಿಲ್ ಕುಂಬ್ಳೆ ಅವರ ಬೂಟಿನ ಲೇಸ್ ಕಟ್ಟುವ ಯೋಗ್ಯತೆ ಕೂಡ ಇದೆ ಎಂದು ನನಗನಿಸದು. ನನಗೆ ಈ ಕ್ರಮದಿಂದ ನಿಜಕ್ಕೂ ಆಘಾತವಾಗಿದೆ…’ ಎಂದು ಬೇಡಿ ಎಂದಿನ ಉಗ್ರರೂಪ ತಾಳಿದ್ದಾರೆ.
ಕುಂಬ್ಳೆ ನಿರ್ವಹಣೆಗೆ ಪ್ರಶಂಸೆ
ಬೇಡಿ ಮೊದಲಿನಿಂದಲೂ ಅನಿಲ್ ಕುಂಬ್ಳೆ ಅವರ ಕೋಚ್ ನಿರ್ವಹಣೆಯನ್ನು ಪ್ರಶಂಸಿಸುತ್ತ ಬಂದವರು. ಈಗಲೂ ಅವರ ಕರ್ತವ್ಯದ ಬಗ್ಗೆ ಎರಡು ಮಾತಿಲ್ಲ ಎನ್ನುವುದು ಬೇಡಿ ಅನಿಸಿಕೆ. ಅಂದಹಾಗೆ, 1990ರ ಇಂಗ್ಲೆಂಡ್ ಪ್ರವಾಸದಲ್ಲಿ ಕುಂಬ್ಳೆ ಟೆಸ್ಟ್ ಪಾದಾರ್ಪಣೆ ಮಾಡಿದ ವೇಳೆ ಬೇಡಿಯೇ ತಂಡದ ಮ್ಯಾನೇಜರ್ ಆಗಿದ್ದ ರೆಂಬುದು ಉಲ್ಲೇಖನೀಯ.
ಇತ್ತೀಚೆಗೆ ಕ್ರಿಕೆಟಿಗರ ವೇತನವನ್ನು ಶೇ. 150 ರಷ್ಟು ಪ್ರಮಾಣದಲ್ಲಿ ಹೆಚ್ಚಿಸಬೇಕೆಂದು ಕುಂಬ್ಳೆ ಬಿಸಿಸಿಐಯನ್ನು ಒತ್ತಾಯಿಸಿದ್ದರು ಹಾಗೂ ಎಲ್ಲದಕ್ಕೂ ಸರ್ವೋಚ್ಚ ನ್ಯಾಯಾ ಲಯ ನೇಮಿಸಿದ ಆಡಳಿತಾಧಿಕಾರಿಗಳತ್ತ ಹೋಗುತ್ತಿದ್ದರು. ಕುಂಬ್ಳೆ ವಿರುದ್ಧ ಬಿಸಿಸಿಐ ಗರಂ ಆಗಿರುವುದಕ್ಕೆ ಇದೇ ಕಾರಣ ಎಂಬುದು ರಹಸ್ಯವೇನಲ್ಲ. ಬೇಡಿ ಕೂಡ ಇದನ್ನೇ ಪ್ರಸ್ತಾವಿಸಿದ್ದಾರೆ.
“ಬಿಸಿಸಿಐ ಸದಸ್ಯರು ಕುಂಬ್ಳೆಯ ಈ ನಡವಳಿಕೆಯನ್ನು ಒಪ್ಪದೇ ಇರ ಬಹುದು, ಅಂದಮಾತ್ರಕ್ಕೆ ಈಗ ಅವರನ್ನು ಗುರಿಯಾಗಿಸುವುದು ಸರಿಯಲ್ಲ. ಕೆಲವರಿಗೆ ಯಾವತ್ತೂ ಯಾವ ಬಗ್ಗೆಯೂ ಸಮಾಧಾನ ಇರುವುದಿಲ್ಲ. ಬಿಸಿಸಿಐಗೆ ಬಿಸಿಸಿಐ ಮೇಲೆ ಸಮಾಧಾನ ಇದೆಯೇ ಎಂಬುದು ನನ್ನ ಪ್ರಶ್ನೆ. ನೆನಪಿರಲಿ, ಈ ಬಿಸಿಸಿಐ ಮಂದಿಯೆಲ್ಲ ಸುಪ್ರೀಂ ಕೋರ್ಟಿನ ಬಾಗಿಲಿನ ಮುಂದೆ ಹೋಗಿ ನಿಂತವರು…’ ಎಂದು ಬೇಡಿ ಚಾಟಿ ಬೀಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chess player; ಕುಟುಂಬ ಸಮೇತ ಮೋದಿ ಭೇಟಿಯಾದ ಕೊನೆರು ಹಂಪಿ
Vijay Hazare; ವಾಸುಕಿ,ಗೋಪಾಲ್ ಬೊಂಬಾಟ್ ಬೌಲಿಂಗ್; ಸೌರಾಷ್ಟ್ರ ವಿರುದ್ದ ಗೆದ್ದ ಕರ್ನಾಟಕ
Test Cricket; ರೋಹಿತ್ ಆಯ್ತು, ಈಗ ವಿರಾಟ್..: ಬಿಸಿಸಿಐ ಕಳಿಸಿದ ʼಆʼ ಸಂದೇಶದಲ್ಲಿ ಏನಿದೆ?
Sydney Test; ಬದಲಾದ ನಾಯಕ; ಮುಂದುವರಿದ ಬ್ಯಾಟಿಂಗ್ ಪರದಾಟ
Test; ಸಿಡ್ನಿ ಸಂಘರ್ಷಕ್ಕೆ ಭಾರತ ಸಿದ್ಧ :ರೋಹಿತ್-ಗಂಭೀರ್ ಮನಸ್ತಾಪ ತೀವ್ರ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.