ಆಸ್ಟ್ರೇಲಿಯನ್ ಓಪನ್: ಜೊಕೋಗೆ 10ನೇ ಕಿರೀಟ
Team Udayavani, Jan 29, 2023, 11:53 PM IST
ಮೆಲ್ಬರ್ನ್: ಆಸ್ಟ್ರೇಲಿಯನ್ ಓಪನ್’ನಲ್ಲಿ ತನಗೆ ಯಾರೂ ಸಾಟಿಯಾಗಲಾರರು ಎಂದು ಸರ್ಬಿಯಾದ ಟೆನಿಸಿಗ ನೊವಾಕ್ ಜೊಕೋವಿಕ್ 10ನೇ ಸಲ ಸಾಧಿಸಿ ತೋರಿಸಿದ್ದಾರೆ.
ರವಿವಾರ “ರಾಡ್ ಲೆವರ್ ಅರೇನಾ’ದಲ್ಲಿ ನಡೆದ ಫೈನಲ್‌ನಲ್ಲಿ ಗ್ರೀಕ್‌ನ ಸ್ಟೆಫನಸ್ ಸಿಸಿಪಸ್ ವಿರುದ್ಧ ಅಮೋಘ ಪ್ರಭುತ್ವ ಸಾಧಿಸಿದ ಅವರು 6-3, 7-6 (7-4), 7-6 (7-5) ಅಂತರದ ಜಯದೊಂದಿಗೆ 22ನೇ ಗ್ರ್ಯಾನ್‌ಸ್ಲಾಮ್ ಪ್ರಶಸ್ತಿಯ ಒಡೆಯನೆನಿಸಿದರು; ರಫೆಲ್ ನಡಾಲ್ ದಾಖಲೆಯನ್ನು ಸರಿದೂಗಿಸಿದರು.
ಇನ್ನೊಂದೆಡೆ ಸ್ಟೆಫನಸ್ ಸಿಸಿಪಸ್ ಅವರ ಚೊಚ್ಚಲ ಗ್ರ್ಯಾನ್‌ಸ್ಲಾಮ್ ಗೆಲುವಿನ ಕನಸು ಎರಡನೇ ಸಲ ಜೊಕೋವಿಕ್ ಕೈಯಲ್ಲೇ ಕಮರಿ ಹೋಯಿತು. ಇದಕ್ಕೂ ಮುನ್ನ 2021ರ ಫ್ರೆಂಚ್ ಓಪನ್ ಫೈನಲ್‌ನಲ್ಲೂ ಅವರು ಜೊಕೋಗೆ ಶರಣಾಗಿದ್ದರು.
ಕಳೆದ ವರ್ಷದ ಬ್ರೇಕ್ ಬಳಿಕ ಮತ್ತೆ “ಮೆಲ್ಬರ್ನ್ ಪಾರ್ಕ್’ನಲ್ಲಿ ಮಹೋನ್ನತ ಪ್ರದರ್ಶನ ನೀಡಿದ ಜೊಕೋವಿಕ್ ಹತ್ತಕ್ಕೆ ಹತ್ತೂ ಫೈನಲ್‌ಗಳಲ್ಲಿ ಚಾಂಪಿಯನ್ ಆಗಿ ಮೂಡಿಬಂದದ್ದು ಅಸಾಮಾನ್ಯ ಸಾಧನೆ ಎನಿಸಿದೆ. ಆಸ್ಟ್ರೇಲಿಯನ್ ಓಪನ್ ಫೈನಲ್‌ನಲ್ಲಿ ಸರ್ಬಿಯನ್ ಟೆನಿಸಿಗನೀಗ ಸೋಲಿಲ್ಲದ ಸರದಾರನಾಗಿ ಮೆರೆದಿದ್ದಾರೆ. ಈ ಜಯದೊಂದಿಗೆ ಎಟಿಪಿ ರ್‍ಯಾಂಕಿಂಗ್‌ನಲ್ಲಿ ಮರಳಿ ಅಗ್ರಸ್ಥಾನ ಅಲಂಕರಿಸಲಿದ್ದಾರೆ.
ಜೊಕೋಗೆ ಗ್ರೀಕ್‌ನ ದೈತ್ಯ ಆಟಗಾರ ಸ್ಟೆಫನಸ್ ಸಿಸಿಪಸ್ ಭಾರೀ ಪ್ರತಿರೋಧ ಒಡ್ಡುವರೆಂದೇ ಭಾವಿಸಲಾಗಿತ್ತು. 5 ಸೆಟ್‌ಗಳ ತನಕ ಹೋರಾಡುವ ಛಾತಿ ಅವರಿಗಿತ್ತು. ಆದರೆ ಜೊಕೋ ಅನುಭವದ ಮುಂದೆ ಸಿಸಿಪಸ್ ಆಟ ನಡೆಯಲಿಲ್ಲ. ಮೊದಲ ಸೆಟ್‌ನಲ್ಲಿ ಅವರು ಪ್ರತಿರೋಧವನ್ನೇ ತೋರಲಿಲ್ಲ. ಮುಂದಿನೆರಡು ಸೆಟ್‌ಗಳನ್ನು ಟೈ-ಬ್ರೇಕರ್‌ಗೆ ಎಳೆದು ತಂದರೂ ಪ್ರಯೋಜನವಾಗಲಿಲ್ಲ.
ಸತತ 4ನೇ ಪ್ರಶಸ್ತಿ
ಇದು ಆಸ್ಟ್ರೇಲಿಯನ್ ಓಪನ್‌ನಲ್ಲಿ ಜೊಕೋವಿಕ್‌ಗೆ ಒಲಿದ ಸತತ 4ನೇ ಪ್ರಶಸ್ತಿ. 2019ರಿಂದ ಅವರ ಓಟ ಮೊದಲ್ಗೊಂಡಿತ್ತು. ಕಳೆದ ವರ್ಷ “ಕೊರೊನಾ ಲಸಿಕೆ’ ಹಾಕಿಸಿಕೊಳ್ಳದ ಕಾರಣ ಅವರಿಗೆ ಇಲ್ಲಿ ಆಡುವ ಅವಕಾಶ ನೀಡಿರಲಿಲ್ಲ.
ಜೊಕೋವಿಕ್ ಅವರ 22 ಗ್ರ್ಯಾನ್‌ಸ್ಲಾಮ್ ಪ್ರಶಸ್ತಿಗಳಲ್ಲಿ ಆಸ್ಟ್ರೇಲಿಯನ್ ಓಪನ್‌ಗೆ ಅಗ್ರಸ್ಥಾನ (10). ಅವರ ಗ್ರ್ಯಾನ್‌ಸ್ಲಾಮ್ ಅಭಿಯಾನ ಆರಂಭಗೊಂಡದ್ದೇ “ಮೆಲ್ಬರ್ನ್ ಪಾರ್ಕ್’ನಲ್ಲಿ ಎಂಬುದನ್ನು ಮರೆಯುವಂತಿಲ್ಲ. 2008ರಲ್ಲಿ ಜೊಕೋ ಇಲ್ಲಿ ತಮ್ಮ ಟೆನಿಸ್ ಬಾಳ್ವೆಯ ಮೊದಲ ಗ್ರ್ಯಾನ್‌ಸ್ಲಾಮ್ ಜಯಿಸಿದ್ದರು. ಉಳಿದಂತೆ 7 ಸಲ ವಿಂಬಲ್ಡನ್, 3 ಸಲ ಯುಎಸ್ ಓಪನ್, 2 ಸಲ ಫ್ರೆಂಚ್ ಓಪನ್ ಪ್ರಶಸ್ತಿ ಜಯಿಸಿದ್ದಾರೆ.
ವರ್ಷ ಎದುರಾಳಿ ಅಂತರ
2008 ಜೋ ವಿಲ್‌ಫ್ರೆಡ್ ಸೋಂಗ 4-6, 6-4, 6-3, 7-6 (7-2)
2011 ಆ್ಯಂಡಿ ಮರ್ರೆ 6-4, 6-2, 6-3
2012 ರಫೆಲ್ ನಡಾಲ್ 5-7, 6-4, 6-2, 6-7 (5-7), 7-5
2013 ಆ್ಯಂಡಿ ಮರ್ರೆ 6-7 (2-7), 7-6 (7-3), 6-3, 6-2
2015 ಆ್ಯಂಡಿ ಮರ್ರೆ 7-6 (7-5), 6-7 (4-7), 6-3, 6-0
2016 ಆ್ಯಂಡಿ ಮರ್ರೆ 6-1, 7-5, 7-6 (7-3)
2019 ರಫೆಲ್ ನಡಾಲ್ 6-3, 6-2, 6-3
2020 ಡೊಮಿನಿಕ್ ಥೀಮ್ 6-4, 4-6, 2-6, 6-3, 6-4
2021 ಡ್ಯಾನಿಲ್ ಮೆಡ್ವೆಡೇವ್ 7-5, 6-2, 6-2
2023 ಸ್ಟೆಫನೆಸ್ ಸಿಸಿಪಸ್ 6-3, 7-6 (7-4), 7-6 (7-5)
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ
ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ
Adani ವಿರುದ್ಧ ಲಂಚ ಆರೋಪ; ಏನಿದು ಪ್ರಕರಣ? ಅಮೆರಿಕದಲ್ಲಿ ಪ್ರಕರಣ ಏಕೆ?
Naxal ಎನ್‌ಕೌಂಟರ್ ತನಿಖೆ ಆರಂಭ; ಉಳಿದವರು ಯಾವ ಕಡೆಗೆ ಪರಾರಿ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.