ಜೊಕೊವಿಚ್‌ಗೆ ಯುಎಸ್ ಓಪನ್ ಬಾಗಿಲು ಬಂದ್!
Team Udayavani, Jul 22, 2022, 6:40 AM IST
ನ್ಯೂಯಾರ್ಕ್: ಆ.29ರಿಂದ ಆರಂಭವಾಗಲಿರುವ ಪ್ರತಿಷ್ಠಿತ ಯುಎಸ್ ಓಪನ್21 ಗ್ರ್ಯಾನ್‌ಸ್ಲ್ಯಾಮ್ ಟೆನಿಸ್‌ನಲ್ಲಿ 21 ಗ್ರ್ಯಾನ್‌ಸ್ಲ್ಯಾಮ್‌ಗಳ ಒಡೆಯ ನೊವಾಕ್ ಜೊಕೊವಿಚ್ ಆಡುವ ಸಾಧ್ಯತೆ ಶೇ.99 ಇಲ್ಲ. ಅಮೆರಿಕ ಸರಕಾರ ಕೊರೊನಾ ಲಸಿಕೆ ಹಾಕಿಸಿಕೊಂಡವರಿಗೆ ಮಾತ್ರ ದೇಶಕ್ಕೆ ಪ್ರವೇಶ ಎಂದು ಖಚಿತವಾಗಿ ಹೇಳಿರುವುದರಿಂದ ನೊವಾಕ್ ಆಡುವ ಸಾಧ್ಯತೆ ತೀರಾ ಕಡಿಮೆ. ಒಂದು ವೇಳೆ ಆಡಿದರೆ 22ನೇ ಗ್ರ್ಯಾನ್‌ಸ್ಲ್ಯಾಮ್ ಗೆದ್ದು ನಡಾಲ್ ಜತೆಗೆ ವಿಶ್ವದಾಖಲೆ ಹಂಚಿಕೊಳ್ಳುವ ಅವಕಾಶ ಅವರಿಗಿದೆ.
ಜೊಕೊವಿಚ್ ಅವರ ಪರಿಸ್ಥಿತಿಗೆ ಅವರೇ ಕಾರಣ. ಅವರು ಕೊರೊನಾ ಲಸಿಕೆ ಹಾಕಿಸಿಕೊಳ್ಳುವುದಿಲ್ಲ ಎಂಬ ಕಠಿನ ನಿಲುವು ತಾಳಿದ್ದಾರೆ. ಹೀಗಾಗಿ ಆಸ್ಟ್ರೇಲಿಯನ್ ಓಪನ್ ಟೆನಿಸ್ ಕೂಟಕ್ಕೆ ತೆರಳಿದರೂ ಆ ದೇಶದ ಸರಕಾರ ಆಡಲು ಬಿಡದೆ ವಾಪಸ್ ಸರ್ಬಿಯಾಕ್ಕೆ ಗಡೀಪಾರು ಮಾಡಿತ್ತು! ಅಷ್ಟಾದರೂ ಅವರು ನಿಲುವು ಬದಲಿಸಿಕೊಳ್ಳಲಿಲ್ಲ. ಆದರೆ ಮುಂದೆ ಫ್ರೆಂಚ್ ಮತ್ತು ವಿಂಬಲ್ಡನ್‌ನಲ್ಲಿ ಆಡಲು ಅವಕಾಶ ಸಿಕ್ಕಿತ್ತು. ಇದೇ ಔದಾರ್ಯವನ್ನು ತೋರಲು ಅಮೆರಿಕ ಸರಕಾರ ಸಿದ್ಧವಿಲ್ಲ.
ಪ್ರಸ್ತುತ ರ್‍ಯಾಂಕಿಂಗ್ ಪ್ರಕಾರ ಜೊಕೊವಿಚ್‌ಗೆ ಸಹಜವಾಗಿ ಯುಎಸ್ ಓಪನ್‌ನಲ್ಲಿ ಆಡುವ ಅವಕಾಶ ಸಿಕ್ಕಿದೆ. ಯುಎಸ್ ಓಪನ್ ಸಂಘಟಕರು ಕೊರೊನಾ ಲಸಿಕೆ ಹಾಕಿಸಿಕೊಳ್ಳದಿದ್ದರೂ, ಕೂಟದಲ್ಲಿ ಆಡಬಹುದು ಎಂಬ ನಿಯಮ ಹೊಂದಿದ್ದಾರೆ. ಆದರೆ ಅಮೆರಿಕ ಸರ್ಕಾರದ ನಿಯಮಗಳು ಇದಕ್ಕೆ ವ್ಯತಿರಿಕ್ತವಾಗಿವೆ. ಇದು ಜೊಕೊಗೆ ಹೊಡೆತ ನೀಡುತ್ತದೆ.
ಜೊಕೊ ತಮ್ಮ ಹಠವನ್ನು ಎಷ್ಟುಕಾಲ ಮುಂದುವರಿಸುತ್ತಾರೆ ಎನ್ನುವುದು ಪ್ರಶ್ನೆಯಾಗಿದೆ. ಜಗತ್ತಿನ ಬಹುತೇಕ ದೇಶಗಳು ಕೊರೊನಾ ಕುರಿತ ನಿಯಮಗಳನ್ನು ಸಡಿಲಿಸಿವೆ. ಕೊರೊನಾ ಈಗಲೂ ಇರುವುದರಿಂದ ಇನ್ನೂ ಹಲವು ದೇಶಗಳಲ್ಲಿ ಪರಿಸ್ಥಿತಿಯ ಗಂಭೀರತೆ ಹಾಗೆಯೇ ಮುಂದುವರಿದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shaw left out; ಓ ದೇವರೇ, ನಾನು ಇನ್ನೇನೆಲ್ಲ ನೋಡಬೇಕು..; ಪೃಥ್ವಿ ಶಾ ನೋವು
Ravichandran Ashwin: ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಆರ್.ಅಶ್ವಿನ್
Brisbane Test; ವರುಣನ ಅಡ್ಡಿ: ಕೂತೂಹಲ ಮೂಡಿಸಿದ್ದ ಪಂದ್ಯ ಡ್ರಾದಲ್ಲಿ ಅಂತ್ಯ
Brisbane Test; ರೋಚಕ.. ಭಾರತ ಗೆಲ್ಲಲು 54 ಓವರ್‌ಗಳಲ್ಲಿ 275 ರನ್ ಅಗತ್ಯ
Australia vs India: ಬ್ರಿಸ್ಬೇನ್ ಟೆಸ್ಟ್‌ನಲ್ಲಿ ಫಾಲೋಆನ್ ತೂಗುಗತ್ತಿಯಿಂದ ಪಾರಾದ ಭಾರತ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.