ನ್ಯಾಶನಲ್ ಬ್ಯಾಂಕ್ ಓಪನ್ ಟೂರ್ನಿ ಯಿಂದ ಹೊರಗುಳಿಯಲು ನಿರ್ಧರಿಸಿದ ಜೊಕೋ
Team Udayavani, Jul 25, 2023, 7:00 AM IST
ಟೊರೊಂಟೊ: ಸ್ಟಾರ್ ಟೆನಿಸಿಗ ನೊವಾಕ್ ಜೊಕೋವಿಕ್ ಟೊರೊಂಟೊದಲ್ಲಿ ನಡೆಯುವ “ನ್ಯಾಶನಲ್ ಬ್ಯಾಂಕ್ ಓಪನ್’ ಟೂರ್ನಿ ಯಿಂದ ಹೊರಗುಳಿಯಲು ನಿರ್ಧರಿಸಿದ್ದಾರೆ. “ಟೆನಿಸ್ ಕೆನಡಾ’ ಈ ಸುದ್ದಿಯನ್ನು ಬಿತ್ತರಿಸಿದೆ.
ವಿಂಬಲ್ಡನ್ ಫೈನಲ್‌ನಲ್ಲಿ ಕಾರ್ಲೋಸ್ ಅಲ್ಕರಾಜ್‌ಗೆ ಶರಣಾದ ಬಳಿಕ ತನಗೆ ಜಾಸ್ತಿ ವಿಶ್ರಾಂತಿ ಅಗತ್ಯವಿದೆ ಎಂಬುದಾಗಿ ಜೊಕೋವಿಕ್ ಹೇಳಿದ್ದಾರೆ ಎಂಬುದಾಗಿ “ಟೆನಿಸ್ ಕೆನಡಾ’ ತಿಳಿಸಿದೆ. ಜೊಕೋವಿಕ್ ಗೈರಲ್ಲಿ ಅಮೆರಿಕದ ಕ್ರಿಸ್ಟೋಫರ್ ಯುಬ್ಯಾಂಕ್ಸ್ ಆಡುವ ಅವಕಾಶ ಪಡೆದಿದ್ದಾರೆ. ಯುಬ್ಯಾಂಕ್ಸ್ ಕಳೆದ ವಿಂಬಲ್ಡನ್‌ನಲ್ಲಿ ಕ್ವಾರ್ಟ್‌ರ್ ಫೈನಲ್ ತನಕ ಸಾಗಿದ್ದರು. ಈ ಹಾದಿಯಲ್ಲಿ ಅವರು 5ನೇ ಶ್ರೇಯಾಂಕದ ಸ್ಟೆಫನಸ್ ಸಿಸಿಪಸ್, 12ನೇ ಶ್ರೇಯಾಂಕದ ಕಾಮ್ ನೂರಿ ಅವರಿಗೆ ಸೋಲುಣಿಸಿದ್ದರು.
“ನಾನು ಯಾವತ್ತೂ ಕೆನಡಾ ಕೂಟವನ್ನು ಆನಂದಿಸುತ್ತೇನೆ. ವಿಶ್ರಾಂತಿಯ ಜತೆಗೆ ಮುಂದಿನ ಯುಎಸ್ ಓಪನ್ ಪಂದ್ಯಾವಳಿಗೆ ಹೆಚ್ಚಿನ ಸಿದ್ಧತೆ ಮಾಡಿಕೊಳ್ಳುವುದು ನನ್ನ ಯೋಜನೆ. ಮುಂದಿನ ದಿನಗಳಲ್ಲಿ ಟೊರೊಂಟೊ ಕೂಟದಲ್ಲಿ ಖಂಡಿತ ಆಡಲಿದ್ದೇನೆ. ನನ್ನ ಈ ನಿರ್ಧಾರವನ್ನು ಸಮ್ಮತಿಸಿದ ಕೂಟದ ನಿರ್ದೇಶಕ ಕಾರ್ಲ್ ಹಾಲೆ ಅವರಿಗೆ ಕೃತಜ್ಞತೆಗಳು’ ಎಂಬುದಾಗಿ ಜೊಕೋವಿಕ್ ಹೇಳಿದ್ದಾರೆ. ಪಂದ್ಯಾವಳಿ ಆ. 3ರಿಂದ 13ರ ತನಕ ನಡೆಯಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Question paper leak ಶಂಕೆ: ಪಿಡಿಒ ಪರೀಕ್ಷೆ ಬಹಿಷ್ಕರಿಸಿ ಪ್ರತಿಭಟನೆ
Kanakadasa Jayanthi ಇಂದು; ಕನಕದಾಸರ ತಣ್ತೀಗಳು ಹಿಂದೆಂದಿಗಿಂತ ಇಂದಿಗೆ ಹೆಚ್ಚು ಪ್ರಸ್ತುತ
Udupi: ಶ್ರೀಕೃಷ್ಣ ಮಠ: ಗೀತೋತ್ಸವಕ್ಕೆ ಪರ್ತಗಾಳಿ ಶ್ರೀಗಳಿಗೆ ಆಹ್ವಾನ
Udupi: ಸಮಾಜ ರೂಪಿಸುವಲ್ಲಿ ಯಕ್ಷಗಾನ ಪಾತ್ರ ಹಿರಿದು: ಪೇಜಾವರ ಶ್ರೀ
Kaup: ಹೊಸ ಮಾರಿಗುಡಿ ದೇವಸ್ಥಾನ: ಬೆಂಗಳೂರಿನಲ್ಲಿ ವಾಗೀಶ್ವರಿ ಪೂಜೆ, ಲೇಖನ ಸಂಕಲ್ಪ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.