ಕದನ ಕಣದಲ್ಲಿ ಟೆನಿಸ್ ಸೇನಾನಿ! ಉಕ್ರೇನಿಯನ್ ಟೆನಿಸಿಗನ ನೆರವಿಗೆ ಜೊಕೋವಿಕ್
Team Udayavani, Mar 8, 2022, 7:50 AM IST
ಸರ್ಬಿಯಾ: ಉಕ್ರೇನಿನ ಮಾಜಿ ಟೆನಿಸಿಗ, ವಿಶ್ವದ ಮಾಜಿ ನಂ. 31ನೇ ಆಟಗಾರ ಸ್ಟಾಖೋವ್‌ಸ್ಕಿ ನೆರವಿಗೆ ನೊವಾಕ್ ಜೊಕೋವಿಕ್ ಮುಂದಾಗಿದ್ದಾರೆ. ಅವರಿಗೆ ಆರ್ಥಿಕ ನೆರವಿನ ಜತೆಗೆ ಯಾವುದೇ ರೀತಿಯ ಸಹಾಯಕ್ಕೂ ತಾನು ಸಿದ್ಧ ಎಂಬುದಾಗಿ ಜೊಕೋ ತಿಳಿಸಿದ್ದಾರೆ.
ಸ್ಟಾಖೋವ್‌ಸ್ಕಿ ಪ್ರಸ್ತುತ ಉಕ್ರೇನಿನ ಮೀಸಲು ಸೇನಾಪಡೆಯಲ್ಲಿ ಕರ್ತವ್ಯ ನಿಭಾಯಿಸುತ್ತಿದ್ದಾರೆ. ರಷ್ಯಾ ವಿರುದ್ಧದ ಕದನದ ವೇಳೆ ಸ್ಟಾಖೋವ್‌ಸ್ಕಿ ಸ್ಥಿತಿ ಏನಾಗಿದೆ ಎಂಬುದು ಸ್ಪಷ್ಟವಾಗಿಲ್ಲ. ಇದಕ್ಕೂ ಮಿಗಿಲಾಗಿ ಅವರಿಗೆ ಸೇನೆಯಲ್ಲಿ ಯಾವುದೇ ಅನುಭವ ಇಲ್ಲ. ಕಳೆದ ತಿಂಗಳಷ್ಟೇ ದೇಶದ ಮೀಸಲು ಸೇನೆಗೆ ಸೇರ್ಪಡೆಗೊಂಡಿದ್ದರು!
36 ವರ್ಷದ ಸಬೇìಯಿ ಸ್ಟಾಖೋವ್‌ಸ್ಕಿ 4 ಎಟಿಪಿ ಪ್ರಶಸ್ತಿಗಳನ್ನು ಗೆದ್ದ ಸಾಧಕ. 2013ರ ವಿಂಬಲ್ಡನ್‌ನ ದ್ವಿತೀಯ ಸುತ್ತಿನಲ್ಲೇ ರೋಜರ್ ಫೆಡರರ್ ಅವರನ್ನು ಸೋಲಿಸಿ ಸುದ್ದಿಯಾಗಿದ್ದರು.
ನಿಖರ ವಿಳಾಸ ತಿಳಿಸಿ…
ಪ್ರಸ್ತುತ ಸ್ಟಾಖೋವ್‌ಸ್ಕಿ ತಮ್ಮ ಹಾಗೂ ಜೊಕೋವಿಕ್ ನಡುವೆ ನಡೆದ ಸಂಭಾಷಣೆಯ ಸ್ಕ್ರೀನ್‌ಶಾಟ್ ಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. “ನಿಮಗೆ ನೆರವು ಒದಗಿಸಲು ದಯವಿಟ್ಟು ನಿಖರವಾದ ವಿಳಾಸವನ್ನು ತಿಳಿಸಿ. ಆರ್ಥಿಕ ನೆರವು, ಇನ್ಯಾವುದೇ ರೀತಿಯ ಸಹಾಯವನ್ನು ಮಾಡಲು ನಾನು ಸಿದ್ಧ’ ಎಂದಿದ್ದಾರೆ ಜೊಕೋವಿಕ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chess player; ಕುಟುಂಬ ಸಮೇತ ಮೋದಿ ಭೇಟಿಯಾದ ಕೊನೆರು ಹಂಪಿ
Vijay Hazare; ವಾಸುಕಿ,ಗೋಪಾಲ್ ಬೊಂಬಾಟ್ ಬೌಲಿಂಗ್; ಸೌರಾಷ್ಟ್ರ ವಿರುದ್ದ ಗೆದ್ದ ಕರ್ನಾಟಕ
Test Cricket; ರೋಹಿತ್ ಆಯ್ತು, ಈಗ ವಿರಾಟ್..: ಬಿಸಿಸಿಐ ಕಳಿಸಿದ ʼಆʼ ಸಂದೇಶದಲ್ಲಿ ಏನಿದೆ?
Sydney Test; ಬದಲಾದ ನಾಯಕ; ಮುಂದುವರಿದ ಬ್ಯಾಟಿಂಗ್ ಪರದಾಟ
Test; ಸಿಡ್ನಿ ಸಂಘರ್ಷಕ್ಕೆ ಭಾರತ ಸಿದ್ಧ :ರೋಹಿತ್-ಗಂಭೀರ್ ಮನಸ್ತಾಪ ತೀವ್ರ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.