Novak Djokovic; ಆಹಾರದಲ್ಲಿ ವಿಷ: ಜೊಕೋ ಆಘಾತಕಾರಿ ಹೇಳಿಕೆ


Team Udayavani, Jan 11, 2025, 6:40 AM IST

1-eweweewqe

ಮೆಲ್ಬರ್ನ್: ಕೋವಿಡ್‌-19 ಬಳಿಕ ಪ್ರತಿಯೊಂದು ಆಸ್ಟ್ರೇಲಿಯನ್‌ ಓಪನ್‌ ಗ್ರ್ಯಾನ್‌ಸ್ಲಾಮ್‌ ಪಂದ್ಯಾವಳಿ ಬಂದಾಗಲೂ ನೊವಾಕ್‌ ಜೊಕೋವಿಕ್‌ ಸುದ್ದಿಯಲ್ಲಿರುತ್ತಾರೆ ಅಥವಾ ಆಘಾತಕಾರಿ ಸುದ್ದಿ ಮೂಲಕ ಸಂಚಲನ ಮೂಡಿಸುತ್ತಾರೆ. ಈ ಬಾರಿ ಸ್ಫೋಟಕ ಸುದ್ದಿಯೊಂದಿಗೆ ಅಚ್ಚರಿ, ಆಘಾತ ಮೂಡಿಸಿದ್ದಾರೆ. 2021-22ರ ಘಟನೆಯ ವೇಳೆ ತನ್ನ ಆಹಾರದಲ್ಲಿ ವಿಷ ಪದಾರ್ಥವನ್ನು ಬೆರೆಸಲಾಗಿತ್ತು ಎಂಬ ಗಂಭೀರ ಆರೋಪ ಮಾಡಿದ್ದಾರೆ!

“ಆಸ್ಟ್ರೇಲಿಯದಲ್ಲಿ ನಿಷೇಧ ಹೇರಲಾದ ಬಳಿಕ ಸರ್ಬಿಯಾಕ್ಕೆ ಹೋದಾಗ ನನ್ನ ಆರೋಗ್ಯದಲ್ಲಿ ಏರುಪೇರಾಗತೊಡಗಿತು. ಪರೀಕ್ಷಿಸಿದಾಗ ನನ್ನ ಆಹಾರದಲ್ಲಿ ವಿಷಕಾರಿ ಪದಾರ್ಥಗಳಾದ ಸೀಸ ಮತ್ತು ಪಾದರಸ ಅಂಶ ಇರುವುದು ಪತ್ತೆಯಾಗಿತ್ತು. ಮೆಲ್ಬರ್ನ್ ಹೊಟೇಲ್‌ನಲ್ಲಿ ತಂಗಿದ್ದ ವೇಳೆ ನೀಡಲಾದ ಆಹಾರದಲ್ಲಿ ಇದನ್ನು ಬೆರೆಸಿರುವ ಸಾಧ್ಯತೆ ಇದೆ. ಈವರೆಗೆ ಇದನ್ನು ನಾನು ಎಲ್ಲಿಯೂ ಹೇಳಲು ಹೋಗಿಲ್ಲ’ ಎಂದು “ಜಿಕ್ಯೂ’ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಜೊಕೋವಿಕ್‌ ಈ ಅಂಶವನ್ನು ಬಿಚ್ಚಿಟ್ಟಿದ್ದಾರೆ.

ನಿಮಗೆ ನೀಡಲಾದ ಆಹಾರ ವಿಷಕಾರಿ ವಸ್ತುವನ್ನು ಒಳಗೊಂಡಿತ್ತು ಅಥವಾ ಕಲುಷಿತಗೊಂಡಿತ್ತು ಎಂಬುದನ್ನು ಅವರು ಒಪ್ಪಿಕೊಳ್ಳುತ್ತಾರೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿ ಯಿಸಿದ ಜೊಕೋವಿಕ್‌, “ಅದೊಂದೇ ಮಾರ್ಗವಾಗಿದೆ’ ಎಂದಿದ್ದಾರೆ.
ಆದರೆ ಗೌಪ್ಯತೆಯ ಕಾರಣಗಳಿಗಾಗಿ ವೈಯಕ್ತಿಕ ಪ್ರಕರಣಗಳ ಬಗ್ಗೆ ಪ್ರತಿಕ್ರಿಯಿಸಲು ಸಾಧ್ಯವಿಲ್ಲ ಎಂದು ಆಸ್ಟ್ರೇಲಿಯದ ಗೃಹ ವ್ಯವಹಾರಗಳ ಇಲಾಖೆಯ ವಕ್ತಾರರೊಬ್ಬರು ಹೇಳಿದ್ದಾರೆ.

ಹೊಟೇಲ್‌ನಲ್ಲಿ ವಿಷಾಹಾರ?!
ಅಂದು ಕೋವಿಡ್‌-19 ಲಸಿಕೆ ಪಡೆಯದ ಕಾರಣ ನೊವಾಕ್‌ ಜೊಕೋವಿಕ್‌ ಅವರಿಗೆ ಆಸ್ಟ್ರೇಲಿಯನ್‌ ಓಪನ್‌ನಲ್ಲಿ ಆಡಲು ಬಿಡದೆ ದೇಶ ಬಿಟ್ಟು ಹೋಗಲು ಸೂಚಿಸಲಾಗಿತ್ತು. ಆಗ ಅವರನ್ನು ಮೆಲ್ಬರ್ನ್ನಲ್ಲಿ ಬಂಧಿಸಿ 4 ದಿನಗಳ ಕಾಲ “ಪಾರ್ಕ್‌ ಹೊಟೇಲ್‌’ನಲ್ಲಿ ಇರಿಸಲಾಗಿತ್ತು. ಈ ಸಂದರ್ಭದಲ್ಲಿ ನೀಡಲಾದ ಆಹಾರದಲ್ಲಿ ವಿಷಕಾರಿ ಅಂಶವನ್ನು ಬೆರೆಸಿರುವ ಸಾಧ್ಯತೆ ಇದೆ ಎಂಬುದು ಜೊಕೋವಿಕ್‌ ಆರೋಪ.

ಆದರೆ ಪಾರ್ಕ್‌ ಹೊಟೇಲ್‌ನಲ್ಲಿ, ಬಂಧಿತರಿಗೆ ಪ್ರತ್ಯೇಕವಾಗಿ ತಯಾರಿಸಲಾದ, ಉತ್ತಮ ಗುಣಮಟ್ಟದ ಆಹಾರವನ್ನೇ ಒದಗಿಸಲಾಗುತ್ತದೆ. ಎಲ್ಲ ಅಡುಗೆ ಸಿಬಂದಿ ಆಹಾರ ಸುರಕ್ಷತಾ ಕ್ರಮಗಳನ್ನು ತೆಗೆದುಕೊ ಳ್ಳುತ್ತಾರೆ ಎಂದು ಸ್ಪಷ್ಟನೆ ನೀಡಲಾಗಿದೆ.

2025ರ ಆಸ್ಟ್ರೇಲಿಯನ್‌ ಓಪನ್‌ ಗ್ರ್ಯಾನ್‌ಸ್ಲಾಮ್‌ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿರುವ ಹೊತ್ತಿನಲ್ಲೇ ನೊವಾಕ್‌ ಜೊಕೋವಿಕ್‌ ನೀಡಿರುವ ಈ ಹೇಳಿಕೆ ಭಾರೀ ಸಂಚಲನ ಮೂಡಿಸಿದೆ.

ಟಾಪ್ ನ್ಯೂಸ್

Chikkamagaluru: ನಕ್ಸಲರ ಶರಣಾಗತಿ ಬೆನ್ನಲ್ಲೇ ಶಸ್ತ್ರಾಸ್ತ್ರ ವಶಪಡಿಸಿಕೊಂಡ ಪೊಲೀಸರು

Chikkamagaluru: ನಕ್ಸಲರ ಶರಣಾಗತಿ ಬೆನ್ನಲ್ಲೇ ಶಸ್ತ್ರಾಸ್ತ್ರ ವಶಪಡಿಸಿಕೊಂಡ ಪೊಲೀಸರು

2-katapady

Katapady: ಭೀಕರ ಅಪಘಾತ… ಹೊತ್ತಿ ಉರಿದ ಲಾರಿ, ದ್ವಿಚಕ್ರ ವಾಹನ; ಓರ್ವ ಗಂಭೀರ

BJP-SPL-Meet

BJP Politics: ಬಿ.ಎಸ್‌.ಯಡಿಯೂರಪ್ಪ ಅಖಾಡಕ್ಕೆ!; ಒಳಜಗಳ ಬಿಟ್ಟು ಒಗ್ಗಟ್ಟಿನ ಹೆಜ್ಜೆ ಹಾಕೋಣ

CM-DCM

Dinner Politics: ಸಿದ್ದರಾಮಯ್ಯ ಬಣದಿಂದ ಡಿ.ಕೆ.ಶಿವಕುಮಾರ್‌ರತ್ತ  “ಗುರಿ’!

ASHA_WORKERs

Protest Happy Ending: “ಆಶಾ’ ಕಾರ್ಯಕರ್ತೆಯರ ಗೌರವಧನ 2 ಸಾವಿರ ರೂ. ಏರಿಕೆ

1-horoscope

Daily Horoscope: ಬಹುದಿನದ ಅಪೇಕ್ಷೆಯೊಂದು ಕೈಗೂಡಿದ ಆನಂದ, ಶುಭ ಸಮಾಚಾರ

GPS-hori

New Method: ಕಾಣೆಯಾದ ಹೋರಿ ಹುಡುಕಲು “ಜಿಪಿಎಸ್‌’!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

PCB

Champions Trophy ಸ್ಥಳಾಂತರ ಸುದ್ದಿಯನ್ನು ತಳ್ಳಿಹಾಕಿದ ಪಿಸಿಬಿ

BCCI

Vijay Hazare Trophy ಕ್ವಾರ್ಟರ್‌ ಫೈನಲ್‌ : ಕರ್ನಾಟಕಕ್ಕೆ ಬರೋಡ ಸವಾಲು

1-saaai

Malaysia Open Badminton: ಸಾತ್ವಿಕ್‌-ಚಿರಾಗ್‌ ಜೋಡಿ ಸೆಮಿಗೆ

1-man

Gael Monfils;  35ನೇ ಎಟಿಪಿ ಫೈನಲ್‌

1-a-manga

ಸೌತ್‌ ಏಷ್ಯಾ ಮಾಸ್ಟರ್  ಆ್ಯತ್ಲೆಟಿಕ್ಸ್‌  ಆರಂಭ

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

Chikkamagaluru: ನಕ್ಸಲರ ಶರಣಾಗತಿ ಬೆನ್ನಲ್ಲೇ ಶಸ್ತ್ರಾಸ್ತ್ರ ವಶಪಡಿಸಿಕೊಂಡ ಪೊಲೀಸರು

Chikkamagaluru: ನಕ್ಸಲರ ಶರಣಾಗತಿ ಬೆನ್ನಲ್ಲೇ ಶಸ್ತ್ರಾಸ್ತ್ರ ವಶಪಡಿಸಿಕೊಂಡ ಪೊಲೀಸರು

2-katapady

Katapady: ಭೀಕರ ಅಪಘಾತ… ಹೊತ್ತಿ ಉರಿದ ಲಾರಿ, ದ್ವಿಚಕ್ರ ವಾಹನ; ಓರ್ವ ಗಂಭೀರ

BJP-SPL-Meet

BJP Politics: ಬಿ.ಎಸ್‌.ಯಡಿಯೂರಪ್ಪ ಅಖಾಡಕ್ಕೆ!; ಒಳಜಗಳ ಬಿಟ್ಟು ಒಗ್ಗಟ್ಟಿನ ಹೆಜ್ಜೆ ಹಾಕೋಣ

CM-DCM

Dinner Politics: ಸಿದ್ದರಾಮಯ್ಯ ಬಣದಿಂದ ಡಿ.ಕೆ.ಶಿವಕುಮಾರ್‌ರತ್ತ  “ಗುರಿ’!

ASHA_WORKERs

Protest Happy Ending: “ಆಶಾ’ ಕಾರ್ಯಕರ್ತೆಯರ ಗೌರವಧನ 2 ಸಾವಿರ ರೂ. ಏರಿಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.