ಎಟಿಪಿಯಿಂದ ಹಿಂದೆ ಸರಿದ ವಿಶ್ವದ ನಂ.1 ಟೆನಿಸಿಗ ನೊವಾಕ್ ಜೊಕೊವಿಕ್
Team Udayavani, Dec 29, 2021, 10:15 PM IST
ಸಿಡ್ನಿ: ವಿಶ್ವದ ನಂ.1 ಟೆನಿಸಿಗ ನೊವಾಕ್ ಜೊಕೊವಿಕ್ ವರ್ಷಾರಂಭದ ಎಟಿಪಿ ಕಪ್ ಟೂರ್ನಿಯಿಂದ ಹಿಂದೆ ಸರಿಯಲು ನಿರ್ಧರಿಸಿದ್ದಾರೆ.
ಇದರಿಂದ ಆಸ್ಟ್ರೇಲಿಯನ್ ಓಪನ್ ಗ್ರ್ಯಾನ್ಸ್ಲಾéಮ್ನಲ್ಲಿ ಅವರು ಆಡುವ ಬಗ್ಗೆ ದಟ್ಟ ಅನುಮಾನಗಳು ಎದುರಾಗಿವೆ.
ನೊವಾಕ್ ಜೊಕೊವಿಕ್ ಹಿಂದೆ ಸರಿದ ನಿರ್ಧಾರವನ್ನು ಎಟಿಪಿ ಕಪ್ ತನ್ನ ವೆಬ್ಸೈಟ್ನಲ್ಲಿ ಪ್ರಕಟಿಸಿದೆ.
ಜೊಕೊಗೆ ಬದಲಿಯಾಗಿ ವಿಶ್ವದ ನಂ.33 ಆಟಗಾರ ಡುಸಾನ್ ಲಾಜೋವಿಕ್ ಅವರನ್ನು ಸೇರಿಸಿಕೊಳ್ಳಲಾಗಿದೆ.
ಇದನ್ನೂ ಓದಿ:ಪೃಥ್ವಿ ಶಾ ಮುಂಬಯಿ ರಣಜಿ ನಾಯಕ : ಅರ್ಜುನ್ ತೆಂಡೂಲ್ಕರ್ ತಂಡದಲ್ಲಿ
ಆಸ್ಟ್ರೇಲಿಯನ್ ಓಪನ್ನಲ್ಲಿ ಪಾಲ್ಗೊಳ್ಳುವವರೆಲ್ಲ ಕೊರೊನಾ ಲಸಿಕೆಯನ್ನು ಕಡ್ಡಾಯವಾಗಿ ಪಡೆದಿರಬೇಕೆಂದು ಕೂಟದ ಸಂಘಟಕರು ಸೂಚಿಸಿದ್ದಾರೆ. ಆದರೆ ಜೊಕೊವಿಕ್ ಕೊರೊನಾ ಲಸಿಕೆ ತೆಗೆದುಕೊಳ್ಳುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಲಸಿಕೆ ತೆಗೆದುಕೊಂಡಿರುವುದನ್ನು ಇನ್ನೂ ಖಾತ್ರಿಪಡಿಸಿಲ್ಲ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.