NZ vs SL: ಮಳೆ ಪಂದ್ಯದಲ್ಲಿ ಎಡವಿದ ಲಂಕಾ ; ಏಕದಿನ ಸರಣಿ ಗೆದ್ದ ನ್ಯೂಜಿಲ್ಯಾಂಡ್
Team Udayavani, Jan 8, 2025, 6:45 PM IST
ಹ್ಯಾಮಿಲ್ಟನ್: “ಸೆಡ್ಡನ್ ಪಾರ್ಕ್’ನಲ್ಲಿ ಬುಧವಾರ ನಡೆದ ದ್ವಿತೀಯ ಏಕದಿನ ಪಂದ್ಯದಲ್ಲಿ ಪ್ರವಾಸಿ ಶ್ರೀಲಂಕಾಕ್ಕೆ 113 ರನ್ನುಗಳ ಭಾರೀ ಸೋಲುಣಿಸಿದ ನ್ಯೂಜಿಲ್ಯಾಂಡ್ ಸರಣಿಯನ್ನು ತನ್ನದಾಗಿಸಿಕೊಂಡಿದೆ.
ಮಳೆಯಿಂದಾಗಿ ಓವರ್‌ಗಳ ಸಂಖ್ಯೆಯನ್ನು 37ಕ್ಕೆ ಇಳಿಸಲಾಗಿತ್ತು. ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ನ್ಯೂಜಿಲ್ಯಾಂಡ್ 9 ವಿಕೆಟಿಗೆ 255 ರನ್ ಪೇರಿಸಿದರೆ, ಶ್ರೀಲಂಕಾ 30.2 ಓವರ್‌ಗಳಲ್ಲಿ 142ಕ್ಕೆ ಕುಸಿಯಿತು. ಮೊದಲ ಪಂದ್ಯವನ್ನು ನ್ಯೂಜಿಲ್ಯಾಂಡ್ 9 ವಿಕೆಟ್‌ಗಳಿಂದ ಜಯಿಸಿತ್ತು. ಅಂತಿಮ ಪಂದ್ಯ ಶನಿವಾರ ಆಕ್ಲೆಂಡ್‌ನಲ್ಲಿ ನಡೆಯಲಿದೆ.
ಆರಂಭಕಾರ ರಚಿನ್ ರವೀಂದ್ರ (79) ಮತ್ತು ವನ್‌ಡೌನ್ ಬ್ಯಾಟರ್ ಮಾರ್ಕ್ ಚಾಪ್‌ಮನ್ (62) ಅವರ ಬಿರುಸಿನ ಆಟ, ಇವರು 2ನೇ ವಿಕೆಟಿಗೆ 91 ಎಸೆತಗಳಿಂದ ಒಟ್ಟುಗೂಡಿಸಿದ 112 ರನ್ ಸಾಹಸದಿಂದ ಕಿವೀಸ್ ದೊಡ್ಡ ಮೊತ್ತ ದಾಖಲಿಸಿತು. ಡ್ಯಾರಿಲ್ ಮಿಚೆಲ್ 38 ರನ್ ಹೊಡೆದರು.
ತೀಕ್ಷಣ ಹ್ಯಾಟ್ರಿಕ್
ಶ್ರೀಲಂಕಾದ ಸ್ಪಿನ್ನರ್ ಮಹೀಶ ತೀಕ್ಷಣ ಹ್ಯಾಟ್ರಿಕ್ ಸಾಧನೆಯೊಂದಿಗೆ ಗುರುತಿಸಿಕೊಂಡರು (44ಕ್ಕೆ 4). ಅವರು 35ನೇ ಓವರಿನ ಕೊನೆಯ 2 ಎಸೆತಗಳಲ್ಲಿ ಸ್ಯಾಂಟ್ನರ್ ಮತ್ತು ಸ್ಮಿತ್ ವಿಕೆಟ್ ಉರುಳಿಸಿದರು. ಅನಂತರ 37ನೇ ಓವರ್‌ನ ಮೊದಲ ಎಸೆತದಲ್ಲಿ ಮ್ಯಾಟ್ ಹೆನ್ರಿ ಅವರನ್ನು ಔಟ್ ಮಾಡಿ ಹ್ಯಾಟ್ರಿಕ್ ಪರಿಪೂರ್ಣಗೊಳಿಸಿದರು. ಆತಿಥೇಯರಿಗೆ ಕಡಿವಾಣ ಹಾಕಿದ ಮತ್ತೋರ್ವ ಬೌಲರ್ ವನಿಂದು ಹಸರಂಗ (39ಕ್ಕೆ 2).
ಚೇಸಿಂಗ್ ವೇಳೆ ಕಮಿಂಡು ಮೆಂಡಿಸ್ ಅವರದು ಏಕಾಂಗಿ ಹೋರಾಟವಾಗಿತ್ತು. ಅವರು 66 ಎಸೆತಗಳಿಂದ 64 ರನ್ ಮಾಡಿದರು (5 ಬೌಂಡರಿ, 3 ಸಿಕ್ಸರ್). ವಿಲಿಯಂ ಓ’ರೂರ್ಕ್ 3, ಜೇಕಬ್ ಡಫಿ 2 ವಿಕೆಟ್ ಉಡಾಯಿಸಿ ಮಿಂಚಿದರು.
ಸಂಕ್ಷಿಪ್ತ ಸ್ಕೋರ್: ನ್ಯೂಜಿಲ್ಯಾಂಡ್-9 ವಿಕೆಟಿಗೆ 255 (ರಚಿನ್ 79, ಚಾಪ್‌ಮನ್ 62, ಮಿಚೆಲ್ 38, ತೀಕ್ಷಣ 44ಕ್ಕೆ 4, ಹಸರಂಗ 39ಕ್ಕೆ 2). ಶ್ರೀಲಂಕಾ-30.2 ಓವರ್‌ಗಳಲ್ಲಿ 142 (ಕಮಿಂಡು ಮೆಂಡಿಸ್ 64, ಲಿಯನಗೆ 22, ಓ’ರೂರ್ಕ್ 31ಕ್ಕೆ 3, ಡಫಿ 30ಕ್ಕೆ 2).
ಪಂದ್ಯಶ್ರೇಷ್ಠ: ರಚಿನ್ ರವೀಂದ್ರ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Toxic Movie: ಕೇವಲ 13ಗಂಟೆಯಲ್ಲೇ ʼಪುಷ್ಪ-2ʼ ದಾಖಲೆ ಉಡೀಸ್ ಮಾಡಿದ ಯಶ್ ʼಟಾಕ್ಸಿಕ್ʼ
Dharwad: ದಲಿತಪರ ಸಂಘಟನೆ ಕರೆ ನೀಡಿದ ಬಂದ್ ಗೆ ಮಿಶ್ರ ಪ್ರತಿಕ್ರಿಯೆ
Bidar: ಬಂದ್‌ಗೆ ಉತ್ತಮ ಪ್ರತಿಕ್ರಿಯೆ… ಸಾರಿಗೆ ಸಂಚಾರ ಸ್ಥಗಿತ, ಅಂಗಡಿ ಮುಂಗಟ್ಟು ಬಂದ್
Teertharoopa Tandeyavarige: ತೀರ್ಥರೂಪರ ಜೊತೆ ರಚನಾ
Ramanagara: ಬಸ್ -ಬೈಕ್ ಅಪಘಾತ; ಇಬ್ಬರು ಮಕ್ಕಳು ಮೂವರು ಸ್ಥಳದಲ್ಲೇ ಮೃತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.