ಏಕದಿನ: ಪಾಕ್ ವಿರುದ್ಧ ಆಸೀಸ್‌ಗೆ 2-0 ಮುನ್ನಡೆ
Team Udayavani, Mar 26, 2019, 6:10 AM IST
ಶಾರ್ಜಾ: ಶತಕವೀರ ಏರಾನ್ ಫಿಂಚ್ ಮತ್ತು ಉಸ್ಮಾನ್ ಖವಾಜ ಅವರ ಅಮೋಘ ಆಟದ ನೆರವಿನಿಂದ ಪಾಕಿಸ್ತಾನ ವಿರುದ್ಧದ ಏಕದಿನ ಸರಣಿಯಲ್ಲಿ ಆಸ್ಟ್ರೇಲಿಯ 2-0 ಮುನ್ನಡೆ ಸಾಧಿಸಿದೆ.
“ಶಾರ್ಜಾ ಕ್ರಿಕೆಟ್ ಮೈದಾನ’ದಲ್ಲಿ ಭಾನುವಾರ ರಾತ್ರಿ ನಡೆದ ದ್ವಿತೀಯ ಪಂದ್ಯದಲ್ಲಿ ಆಸ್ಟ್ರೇಲಿಯ 8 ವಿಕೆಟ್‌ಗಳ ಭರ್ಜರಿ ಜಯ ಗಳಿಸಿತು. ಮೊದಲ ಬ್ಯಾಟಿಂಗ್ ಮಾಡಿದ ಪಾಕಿಸ್ತಾನ 7 ವಿಕೆಟಿಗೆ 284 ರನ್ ದಾಖಲಿಸಿದರೆ, ಆಸ್ಟ್ರೇಲಿಯ 47.5 ಓವರ್‌ಗಳಲ್ಲಿ ಎರಡೇ ವಿಕೆಟಿಗೆ 285 ರನ್ ಬಾರಿಸಿತು. ಮೊದಲ ಪಂದ್ಯದಲ್ಲಿ 116 ರನ್ ಗಳಿಸಿ ಮೆರೆದಾಡಿದ ಫಿಂಚ್ ಮತ್ತೂಮ್ಮೆ ಸಿಡಿದು ಜೀವನಶ್ರೇಷ್ಠ ಅಜೇಯ 153 ರನ್ ಬಾರಿಸಿದರು. 143 ಎಸೆತಗಳ ಈ ಇನಿಂಗ್ಸ್‌ನಲ್ಲಿ 11 ಬೌಂಡರಿ, 6 ಸಿಕ್ಸರ್ ಸೇರಿದ್ದವು. 3ನೇ ಶತಕದ ನಿರೀಕ್ಷೆಯಲಿದ್ದ ಖವಾಜ ಕೇವಲ 12 ರನ್‌ಗಳ ಅಂತರದಲ್ಲಿ ಈ ಅವಕಾಶ ಕಳೆದುಕೊಂಡರು. ಖವಾಜ ಗಳಿಕೆ 109 ಎಸೆತಗಳಲ್ಲಿ 88 ರನ್. ಇವರಿಬ್ಬರ ಮೊದಲ ವಿಕೆಟ್ ಜತೆಯಾಟದಲ್ಲಿ 209 ರನ್ ಹರಿದು ಬಂತು. ಇದು ಆಸ್ಟ್ರೇಲಿಯದ ಚೇಸಿಂಗ್ ವೇಳೆ ಆರಂಭಿಕ ಜತೆಯಾಟದಲ್ಲಿ ಒಟ್ಟುಗೂಡಿದ ಅತ್ಯಧಿಕ ರನ್ ಆಗಿದೆ. ಈ ಗೆಲುವಿನ ಮೂಲಕ ಆಸ್ಟೇಲಿಯ ಸತತ 5ನೇ ಜಯ ದಾಖಲಿಸಿದೆ. ಭಾರತದ ವಿರುದ್ಧ ಏಕದಿನ ಸರಣಿಯ ಕೊನೆಯ 3 ಪಂದ್ಯಗಳನ್ನು ಗೆದ್ದು ಸರಣಿ ಜಯಿಸಿತ್ತು.
ರಿಜ್ವಾನ್ ಚೊಚ್ಚಲ ಶತಕ: ಮೊದಲೆರಡು ವಿಕೆಟ್ ಬೇಗನೇ ಕಳೆದುಕೊಂಡ ಪಾಕಿಸ್ತಾನಕ್ಕೆ ಆಸರೆಯಾಗಿ ನಿಂತವರು ಮೊಹಮ್ಮದ್ ರಿಜ್ವಾನ್. ಅವರು 126 ಎಸೆತಗಳಲ್ಲಿ 115 ರನ್ ಬಾರಿಸಿದರು. ಇದು ಅವರ ಏಕದಿನ ಕ್ರಿಕೆಟಿನ ಚೊಚ್ಚಲ ಶತಕ. ಈ ಆಟದಲ್ಲಿ 11 ಬೌಂಡರಿಗಳು ಸೇರಿದ್ದವು. ನಾಯಕ ಶೋಯಿಬ್ ಮಲಿಕ್ ಅರ್ಧ ಶತಕ ಬಾರಿಸಿದರು (60).
ಸಂಕ್ಷಿಪ್ತ ಸ್ಕೋರ್: ಪಾಕಿಸ್ತಾನ 50 ಓವರ್, 284/7 (ರಿಜ್ವಾನ್ 115, ಮಲಿಕ್ 60, ರಿಚರ್ಡ್‌ಸನ್ 16ಕ್ಕೆ 2). ಆಸ್ಟ್ರೇಲಿಯ 47.5 ಓವರ್, 285/2 (ಫಿಂಚ್ ಔಟಾಗದೆ 153, ಖವಾಜ 88).
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
N.Maharajan: ವಲ್ಲರಸು ನಿರ್ದೇಶಕರ ಚಿತ್ರದಲ್ಲಿ ಶಿವಣ್ಣ ಸಿನಿಮಾ
Sirsi: ಅರಣ್ಯವಾಸಿಗಳ 50,000 ಕ್ಕೂ ಮಿಕ್ಕಿ ಜಿ.ಪಿ.ಎಸ್ ನಕಾಶೆ ಅತಂತ್ರ: ರವಿಂದ್ರ ನಾಯ್ಕ
Hubli: ಕಾಂಗ್ರೆಸ್‌ನಲ್ಲಿ ಈಗ ಇರುವವರೆಲ್ಲ ನಕಲಿ ಗಾಂಧಿಗಳು..: ಪ್ರಹ್ಲಾದ ಜೋಶಿ
FIR 6to6 movie: ಆ್ಯಕ್ಷನ್ ಚಿತ್ರದಲ್ಲಿ ವಿಜಯ ರಾಘವೇಂದ್ರ
Birthday Party: ಬರ್ತ್‌ಡೇ ಪಾರ್ಟಿ ಮುಗಿಸಿ ಬರುತ್ತಿದ್ದ ಮೂವರನ್ನು ಗುಂಡಿಕ್ಕಿ ಹ*ತ್ಯೆ…
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.