ODI Ranking: ದ್ವಿತೀಯ ಸ್ಥಾನಕ್ಕೆ ಏರಿದ ಟೀಮ್ ಇಂಡಿಯಾ
Team Udayavani, Sep 16, 2023, 2:23 AM IST
ದುಬಾೖ: ಪಾಕಿಸ್ಥಾನ ತಂಡದ ಏಷ್ಯಾ ಕಪ್ ನಿರ್ಗಮನ ದೊಂದಿಗೆ ಭಾರತ ಏಕದಿನ ರ್‍ಯಾಂಕಿಂಗ್‌ನಲ್ಲಿ ದ್ವಿತೀಯ ಸ್ಥಾನಕ್ಕೆ ಏರಿದೆ. ಬಾಬರ್ ಪಡೆ ಮೂರಕ್ಕೆ ಕುಸಿದಿದೆ. ಅಗ್ರಸ್ಥಾನದ ಹೆಗ್ಗಳಿಕೆ ಆಸ್ಟ್ರೇಲಿಯದ್ದಾಗಿದೆ.
ಗುರುವಾರ ರಾತ್ರಿಯ ಲಾಸ್ಟ್ ಬಾಲ್ ಥ್ರಿಲ್ಲರ್‌ನಲ್ಲಿ ಶ್ರೀಲಂಕಾಕ್ಕೆ ಶರಣಾದದ್ದು ಪಾಕಿಸ್ಥಾನಕ್ಕೆ ಭಾರೀ ಹಿನ್ನಡೆಯಾಗಿ ಪರಿಣಮಿಸಿತು. ಅದು ಸೂಪರ್-4 ಹಂತದಲ್ಲಿ ಅನುಭವಿಸಿದ ಸತತ 2ನೇ ಸೋಲು ಇದಾಗಿತ್ತು. ಇದರಿಂದ 2 ಸ್ಥಾನ ಕುಸಿತ ಕಾಣಬೇಕಾಯಿತು. ಪಾಕಿಸ್ಥಾನವೀಗ 115 ಅಂಕ ಹೊಂದಿದೆ.
ಭಾರತ 116 ಅಂಕ, ಅಗ್ರಸ್ಥಾನಿ ಆಸ್ಟ್ರೇಲಿಯ 118 ಅಂಕಗಳನ್ನು ಹೊಂದಿದೆ. ಮುಂಬರುವ ವಿಶ್ವಕಪ್ ಪಂದ್ಯಾವಳಿಯನ್ನು ಅಗ್ರ ರ್‍ಯಾಂಕಿಂಗ್‌ನೊಂದಿಗೆ ಆಡಲಿಳಿಯುವುದು ಆಸ್ಟ್ರೇಲಿಯದ ಯೋಜನೆ. ಆದರೆ ಇದಕ್ಕೂ ಮುನ್ನ ಭಾರತದ ವಿರುದ್ಧ ಅದು 3 ಪಂದ್ಯಗಳ ಏಕದಿನ ಸರಣಿ ಯನ್ನಾಡಲಿದೆ. ಇಲ್ಲಿನ ಫಲಿತಾಂಶ ನಿರ್ಣಾಯಕವಾಗಲಿದೆ. ಭಾರತಕ್ಕೂ ಇಲ್ಲಿ ನಂ.1 ಸ್ಥಾನ ಅಲಂಕರಿಸುವ ಎಲ್ಲ ಸಾಧ್ಯತೆ ಇದೆ.
ಈಗಿನ ರ್‍ಯಾಂಕಿಂಗ್ ಪ್ರಕಾರ ಅಗ್ರ 3 ತಂಡಗಳ ನಡುವೆ ಕೇವಲ 3 ಅಂಕಗಳ ವ್ಯತ್ಯಾಸವಷ್ಟೇ ಇದೆ. ಹೀಗಾಗಿ ತಂಡಗಳ ರ್‍ಯಾಂಕಿಂಗ್ ಯಾವುದೇ ಹೊತ್ತಿನಲ್ಲಿ ಬದಲಾಗಬಹುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
T20 Asia Cup: ಬಾಂಗ್ಲಾ ವಿರುದ್ದ ಅಂಡರ್ 19 ವನಿತಾ ಏಷ್ಯಾಕಪ್ ಚಾಂಪಿಯನ್ ಆದ ಭಾರತ
BGT 2024: ಮೆಲ್ಬೋರ್ನ್ ಪಂದ್ಯಕ್ಕೂ ಟೀಂ ಇಂಡಿಯಾಗೆ ಗಾಯಾಳುಗಳ ಸಮಸ್ಯೆ
Vijay Hazare Trophy: ಮತ್ತೊಂದು ದಾಖಲೆ ಬರೆದ 13ರ ಹರೆಯದ ವೈಭವ್ ಸೂರ್ಯವಂಶಿ
IND-W vs WI: ವನಿತೆಯರ ಏಕದಿನ ಮುಖಾಮುಖಿ
Ahmed Shehzad: ಭಾರತ-ಪಾಕ್ ಗಡಿಯಲ್ಲಿ ಕ್ರಿಕೆಟ್ ಸ್ಟೇಡಿಯಂಗೆ ಸಲಹೆ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.