ODI Series: ಕ್ಲೀನ್‌ಸ್ವೀಪ್ ಸಾಧಿಸಿದ ಆಸ್ಟ್ರೇಲಿಯ… ಮಂಧನಾ ಶತಕ ಬಳಿಕ ಮಂಕಾದ ಭಾರತ

Team Udayavani, Dec 11, 2024, 11:50 PM IST

ODI Series: ಕ್ಲೀನ್‌ಸ್ವೀಪ್ ಸಾಧಿಸಿದ ಆಸ್ಟ್ರೇಲಿಯ… ಮಂಧನಾ ಶತಕ ಬಳಿಕ ಮಂಕಾದ ಭಾರತ

ಪರ್ತ್‌: ಆರಂಭಿಕ ಆಟಗಾರ್ತಿ ಸ್ಮತಿ ಮಂಧನಾ ಅವರ ಅಮೋಘ ಶತಕದ ಬಳಿಕ ಒಮ್ಮೆಲೇ ಮಂಕಾದ ಭಾರತ, ಏಕದಿನ ಸರಣಿಯಲ್ಲಿ ಆಸ್ಟ್ರೇಲಿಯ ಕೈಯಲ್ಲಿ ವೈಟ್‌ವಾಶ್‌ ಅನುಭವಿಸಿದೆ. ಸರಣಿಯ ಮೂರೂ ಪಂದ್ಯಗಳನ್ನು ಗೆದ್ದ ಕಾಂಗರೂ ಪಡೆ ತನ್ನ ಪ್ರಭುತ್ವವನ್ನು ಮತ್ತೂಮ್ಮೆ ಸಾಬೀತುಪಡಿಸಿದೆ.
ಬುಧವಾರ ಪರ್ತ್‌ನಲ್ಲಿ ನಡೆದ ಪಂದ್ಯವನ್ನು ಆಸ್ಟ್ರೇಲಿಯ 83 ರನ್ನುಗಳ ಅಂತರದಿಂದ ಜಯಿಸಿತು. ಅನ್ನಾಬೆಲ್‌ ಸದರ್‌ಲ್ಯಾಂಡ್‌ ಅವರ ಆಕರ್ಷಕ ಶತಕ (110), ಆ್ಯಶ್ಲಿ ಗಾರ್ಡನರ್‌ (50) ಮತ್ತು ನಾಯಕಿ ಟಹ್ಲಿಯಾ ಮೆಕ್‌ಗ್ರಾತ್‌ (ಅಜೇಯ 56) ಅವರ ಅರ್ಧ ಶತಕದ ಸಾಹಸದಿಂದ ಆಸೀಸ್‌ 6 ವಿಕೆಟಿಗೆ 298 ರನ್‌ ಪೇರಿಸಿತು. ಭಾರತ 45.1 ಓವರ್‌ಗಳಲ್ಲಿ 215ಕ್ಕೆ ಸರ್ವಪತನ ಕಂಡಿತು.

ಮಂಧನಾ 9ನೇ ಶತಕ
ಭಾರತದ ಸರದಿಯಲ್ಲಿ ಸ್ಮತಿ ಮಂಧನಾ ಅವರದು ಏಕಾಂಗಿ ಹೋರಾಟ ವಾಗಿತ್ತು. 36ನೇ ಓವರ್‌ ತನಕ ಕ್ರೀಸ್‌ ಆಕ್ರಮಿಸಿಕೊಂಡ ಮಂಧನಾ 105 ರನ್ನುಗಳ ಕೊಡುಗೆ ಸಲ್ಲಿಸಿದರು. 109 ಎಸೆತಗಳ ಈ ಬ್ಯಾಟಿಂಗ್‌ ವೇಳೆ 14 ಬೌಂಡರಿ, ಒಂದು ಸಿಕ್ಸರ್‌ ಸಿಡಿಸಿದರು. ಇದು ಅವರ 9ನೇ ಏಕದಿನ ಶತಕ.
ಮಂಧನಾ ಮತ್ತು ಹಲೀìನ್‌ ದೇವಲ್‌ (39) 2ನೇ ವಿಕೆಟಿಗೆ 118 ರನ್‌ ಪೇರಿಸಿ ಹೋರಾಟಕ್ಕೆ ಚಾಲನೆ ನೀಡಿದ್ದರು. ಅನಂತರ ಮಂಧನಾಗೆ ಇನ್ನೊಂದು ಕಡೆಯಿಂದ ಬೆಂಬಲ ಲಭಿಸ ಲಿಲ್ಲ. ಒಂದು ಹಂತದಲ್ಲಿ ಭಾರತ 2ಕ್ಕೆ 165 ರನ್‌ ಬಾರಿಸಿ ಗೆಲುವಿ ನತ್ತ ಮುಖ ಮಾಡಿತ್ತು. ಆದರೆ ಈ ಮೊತ್ತ ದಲ್ಲಿ ನಾಯಕಿ ಕೌರ್‌ (12) ವಿಕೆಟ್‌ ಬಿದ್ದೊಡನೆ ಪಂದ್ಯದ ಚಿತ್ರಣ ಒಮ್ಮೆಲೇ ಬದಲಾಯಿತು. ಸ್ಕೋರ್‌ 189ಕ್ಕೆ ಏರಿದಾಗ ಮಂಧನಾ ವಿಕೆಟ್‌ ಉರುಳಿತು. ಆ್ಯಶ್ಲಿ ಗಾರ್ಡನರ್‌ ಎಸೆತದಲ್ಲಿ ಬೌಲ್ಡ್‌ ಆದರು. ಅದೇ ಓವರ್‌ ನಲ್ಲಿ ದೀಪ್ತಿ ಶರ್ಮ (0) ಕೂಡ ಔಟಾ ದರು. ಮುಂದಿನ ಓವರ್‌ನಲ್ಲಿ ಜೆಮಿಮಾ ರೋಡ್ರಿಗಸ್‌ (16) ವಿಕೆಟ್‌ ಬಿತ್ತು. ಪಂದ್ಯ ಭಾರತದ ಕೈಯಿಂದ ಜಾರಿತು.

ಸ್ಪಿನ್‌ ಬೌಲಿಂಗ್‌ ಆಲ್‌ರೌಂಡರ್‌ ಆ್ಯಶ್ನಿ ಗಾರ್ಡನರ್‌ 5 ವಿಕೆಟ್‌ ಬೇಟೆ ಯಾಡಿ ಭಾರತದ ಕುಸಿತದಲ್ಲಿ ಪ್ರಮುಖ ಪಾತ್ರ ವಹಿಸಿದರು. ಗಾರ್ಡನರ್‌ ಬ್ಯಾಟಿಂಗ್‌ನಲ್ಲೂ ಮಿಂಚಿದ್ದರು.

ಅನ್ನಾಬೆಲ್‌ ಆಸರೆ
ಆಸ್ಟ್ರೇಲಿಯ 78ಕ್ಕೆ 4 ವಿಕೆಟ್‌ ಉರು ಳಿಸಿ ಕೊಂಡಾಗ ಅನ್ನಾಬೆಲ್‌ ಸದರ್‌ ಲ್ಯಾಂಡ್‌ ನೆರವಿಗೆ ನಿಂತರು. ಅವ ರಿಗೆ ಗಾರ್ಡನರ್‌ ಮತ್ತು ಮೆಕ್‌ಗ್ರಾತ್‌ ಅಮೋಘ ಬೆಂಬಲವಿತ್ತರು. ಆಸೀಸ್‌ ಮೊತ್ತ ಮುನ್ನೂರರ ಗಡಿ ಸಮೀಪಿಸಿತು.

ಸಂಕ್ಷಿಪ್ತ ಸ್ಕೋರ್‌: ಆಸ್ಟ್ರೇಲಿಯ-6 ವಿಕೆಟಿಗೆ 298 (ಅನ್ನಾಬೆಲ್‌ 110, ಗಾರ್ಡನರ್‌ 50, ಮೆಕ್‌ಗ್ರಾತ್‌ ಔಟಾ ಗದೆ 56, ಅರುಂಧತಿ 26ಕ್ಕೆ 4). ಭಾರತ-45.1 ಓವರ್‌ ಗಳಲ್ಲಿ 215 (ಮಂಧನಾ 105, ಹಲೀìನ್‌ 39, ಗಾರ್ಡನರ್‌ 30ಕ್ಕೆ 5, ಶಟ್‌ 26ಕ್ಕೆ 2, ಅಲಾನಾ 27ಕ್ಕೆ 2).

ಪಂದ್ಯಶ್ರೇಷ್ಠ, ಸರಣಿಶ್ರೇಷ್ಠ: ಅನ್ನಾಬೆಲ್‌ ಸದರ್‌ಲ್ಯಾಂಡ್‌.

ಟಾಪ್ ನ್ಯೂಸ್

rape

Kerala; 5 ವರ್ಷಗಳಲ್ಲಿ 64 ಜನರಿಂದ ಲೈಂಗಿ*ಕ ದೌರ್ಜನ್ಯ: ಯುವತಿ ಹೇಳಿಕೆ !!

Vijayendra did not go to Kalaburagi due to Priyank Kharge’s threat: MLA Yatnal

BJP: ಪ್ರಿಯಾಂಕ್ ಖರ್ಗೆ ಧಮ್ಕಿಯಿಂದ ಕಲಬುರಗಿಗೆ ಹೋಗದ ವಿಜಯೇಂದ್ರ: ಶಾಸಕ ಯತ್ನಾಳ್

ಅಂದು ಪ್ರತಾಪ್‌ ಇಂದು ಹನುಮಂತು: ಫಿನಾಲೆ ತಲುಪಿದ ರೈತನ ಮಗನಿಗೆ ಒಲಿಯುತ್ತಾ ಬಿಗ್‌ಬಾಸ್ ಕಪ್?

ಅಂದು ಪ್ರತಾಪ್‌ ಇಂದು ಹನುಮಂತು: ಫಿನಾಲೆ ತಲುಪಿದ ರೈತನ ಮಗನಿಗೆ ಒಲಿಯುತ್ತಾ ಬಿಗ್‌ಬಾಸ್ ಕಪ್?

1-asssam-1

New York Time ಟ್ರಾವೆಲ್ 2025 ಲಿಸ್ಟ್; 52 ಸ್ಥಳಗಳ ಪಟ್ಟಿಯಲ್ಲಿ ಅಸ್ಸಾಂಗೆ ನಾಲ್ಕನೇ ಸ್ಥಾನ

Vijay Hazare Trophy: Padikkal century; Karnataka entered the semi after winning against Baroda

VijayHazareTrophy: ಪಡಿಕ್ಕಲ್‌ ಶತಕ; ಬರೋಡಾ ವಿರುದ್ದ ಗೆದ್ದು ಸೆಮಿ ಪ್ರವೇಶಿಸಿದ ಕರ್ನಾಟಕ

Kannauj: ಕುಸಿದು ಬಿದ್ದ ನಿರ್ಮಾಣ ಹಂತದ ಕಟ್ಟಡದ ಮೇಲ್ಛಾವಣಿ… ಹಲವರು ಸಿಲುಕಿರುವ ಶಂಕೆ

Kannauj: ಕುಸಿದು ಬಿದ್ದ ನಿರ್ಮಾಣ ಹಂತದ ಕಟ್ಟಡದ ಮೇಲ್ಛಾವಣಿ… ಹಲವರು ಸಿಲುಕಿರುವ ಶಂಕೆ

Tulu Film: ʼಮಿಡಲ್‌ ಕ್ಲಾಸ್‌ ಫ್ಯಾಮಿಲಿʼಯಿಂದ ಬಂತು ‘ಬೊಕಾ ಬೊಕಾ’ ಹಾಡು

Tulu Film: ʼಮಿಡಲ್‌ ಕ್ಲಾಸ್‌ ಫ್ಯಾಮಿಲಿʼಯಿಂದ ಬಂತು ‘ಬೊಕಾ ಬೊಕಾ’ ಹಾಡು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Vijay Hazare Trophy: Padikkal century; Karnataka entered the semi after winning against Baroda

VijayHazareTrophy: ಪಡಿಕ್ಕಲ್‌ ಶತಕ; ಬರೋಡಾ ವಿರುದ್ದ ಗೆದ್ದು ಸೆಮಿ ಪ್ರವೇಶಿಸಿದ ಕರ್ನಾಟಕ

ChampionsTrophy: ಭಾರತೀಯ ತಂಡ ಪ್ರಕಟ ವಿಳಂಬ ಸಾಧ್ಯತೆ; ರಾಹುಲ್‌ ಗೆ ಬಿಸಿಸಿಐ ವಿಶೇಷ ಸಂದೇಶ

ChampionsTrophy: ಭಾರತೀಯ ತಂಡ ಪ್ರಕಟ ವಿಳಂಬ ಸಾಧ್ಯತೆ; ರಾಹುಲ್‌ ಗೆ ಬಿಸಿಸಿಐ ವಿಶೇಷ ಸಂದೇಶ

Bangladesh: Tamim Iqbal bids farewell to international cricket

Bangladesh: ಅಂತಾರಾಷ್ಟ್ರೀಯ ಕ್ರಿಕೆಟ್‌ ಗೆ ವಿದಾಯ ಹೇಳಿದ ತಮೀಮ್‌ ಇಕ್ಬಾಲ್

1-eweweewqe

Novak Djokovic; ಆಹಾರದಲ್ಲಿ ವಿಷ: ಜೊಕೋ ಆಘಾತಕಾರಿ ಹೇಳಿಕೆ

PCB

Champions Trophy ಸ್ಥಳಾಂತರ ಸುದ್ದಿಯನ್ನು ತಳ್ಳಿಹಾಕಿದ ಪಿಸಿಬಿ

MUST WATCH

udayavani youtube

ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ

udayavani youtube

ಅಮೇರಿಕಾದಲ್ಲಿ ವೈಕುಂಠ ಏಕಾದಶಿ ಸಂಭ್ರಮ

udayavani youtube

ನಕ್ಸಲರ ಶರಣಾಗತಿಯಲ್ಲಿ ಸರಕಾರದ ನಡೆ ಸಂಶಯ ಮೂಡಿಸುವಂತಿದೆ: ಅಣ್ಣಾಮಲೈ |

udayavani youtube

ಹೇಗಿತ್ತು ಎಂ.ಜಿ.ಎಂ ಅಮೃತ ಮಹೋತ್ಸವ ಸಂಭ್ರಮ

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

ಹೊಸ ಸೇರ್ಪಡೆ

rape

Kerala; 5 ವರ್ಷಗಳಲ್ಲಿ 64 ಜನರಿಂದ ಲೈಂಗಿ*ಕ ದೌರ್ಜನ್ಯ: ಯುವತಿ ಹೇಳಿಕೆ !!

Vijayendra did not go to Kalaburagi due to Priyank Kharge’s threat: MLA Yatnal

BJP: ಪ್ರಿಯಾಂಕ್ ಖರ್ಗೆ ಧಮ್ಕಿಯಿಂದ ಕಲಬುರಗಿಗೆ ಹೋಗದ ವಿಜಯೇಂದ್ರ: ಶಾಸಕ ಯತ್ನಾಳ್

NK-MOdi

Podcast: ಗಾಂಧೀಜಿ ಎಂದೂ ಟೋಪಿ ಧರಿಸುತ್ತಿರಲಿಲ್ಲ, ಆದರೆ ದೇಶದಲ್ಲಿ “ಗಾಂಧಿ ಟೋಪಿ’ ಜನಜನಿತ!

ಅಂದು ಪ್ರತಾಪ್‌ ಇಂದು ಹನುಮಂತು: ಫಿನಾಲೆ ತಲುಪಿದ ರೈತನ ಮಗನಿಗೆ ಒಲಿಯುತ್ತಾ ಬಿಗ್‌ಬಾಸ್ ಕಪ್?

ಅಂದು ಪ್ರತಾಪ್‌ ಇಂದು ಹನುಮಂತು: ಫಿನಾಲೆ ತಲುಪಿದ ರೈತನ ಮಗನಿಗೆ ಒಲಿಯುತ್ತಾ ಬಿಗ್‌ಬಾಸ್ ಕಪ್?

1-asssam-1

New York Time ಟ್ರಾವೆಲ್ 2025 ಲಿಸ್ಟ್; 52 ಸ್ಥಳಗಳ ಪಟ್ಟಿಯಲ್ಲಿ ಅಸ್ಸಾಂಗೆ ನಾಲ್ಕನೇ ಸ್ಥಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.