ಇಂದಿನಿಂದ ಏಕದಿನ ಸರಣಿ: ಜಿಂಬಾಬ್ವೆ ವಿರುದ್ಧ ಜಬರ್ದಸ್ತ್ ಆಟದ ನಿರೀಕ್ಷೆ

 ರಾಹುಲ್‌ ಫಾರ್ಮ್ ಮತ್ತು ಫಿಟ್‌ನೆಸ್‌ ಮೇಲೆ ಹೆಚ್ಚಿನ ಗಮನ

Team Udayavani, Aug 18, 2022, 7:15 AM IST

ಇಂದಿನಿಂದ ಏಕದಿನ ಸರಣಿ: ಜಿಂಬಾಬ್ವೆ ವಿರುದ್ಧ ಜಬರ್ದಸ್ತ್ ಆಟದ ನಿರೀಕ್ಷೆ

ಹರಾರೆ: ಮೇಲ್ನೋಟಕ್ಕೆ ತೀರಾ ಸಾಮಾನ್ಯವೆಂದೇ ಪರಿಗಣಿಸಲ್ಪಡುವ ಜಿಂಬಾಬ್ವೆ ವಿರುದ್ಧ ಅವರದೇ ನೆಲದಲ್ಲಿ ಟೀಮ್‌ ಇಂಡಿಯಾ 3 ಪಂದ್ಯಗಳ ಏಕದಿನ ಸರಣಿಗೆ ಅಣಿಯಾಗಿದೆ. ಹಿಂದಿನೆರಡು ಪ್ರವಾಸದ ವೇಳೆ 3-0 ವೈಟ್‌ವಾಶ್‌ ಸಾಧನೆಗೈದಿದ್ದ ಭಾರತ, ಈ ಸಲವೂ ಇದೇ ಫ‌ಲಿತಾಂಶವನ್ನು ಪುನರಾವರ್ತಿಸೀತೇ ಎಂಬುದೊಂದು ಕುತೂಹಲ.

ಮೂರೂ ಪಂದ್ಯಗಳ ತಾಣ “ಹರಾರೆ ನ್ಪೋರ್ಟ್ಸ್ ಕ್ಲಬ್‌’ ಅಂಗಳ. ಎಲ್ಲವೂ ಹಗಲು ಪಂದ್ಯಗಳು. ಗುರುವಾರ ಮೊದಲ ಮುಖಾಮುಖೀ ನಡೆಯಲಿದ್ದು, ಆ. 20 ಮತ್ತು 22ರಂದು ಉಳಿದೆರಡು ಪಂದ್ಯಗಳು ಸಾಗಲಿವೆ.
ಈ ಸರಣಿ ಕೆ.ಎಲ್‌. ರಾಹುಲ್‌ ಪಾಲಿಗೆ ಅತ್ಯಂತ ಮಹತ್ವದ್ದಾ ಗಿದೆ. ಎರಡು ಪಂದ್ಯಗಳ ಸುದೀರ್ಘ‌ ವಿರಾಮದ ಬಳಿಕ ಅವರು ಟೀಮ್‌ ಇಂಡಿಯಾಕ್ಕೆ ಮರಳಿದ್ದಾರೆ. ಜತೆಗೆ ನಾಯಕತ್ವದ ಮಹತ್ವದ ಜವಾಬ್ದಾರಿಯೂ ಇದೆ. ಶಿಖರ್‌ ಧವನ್‌ ಜತೆ ಆರಂಭಿಕನಾಗಿ ಇಳಿಯುವ ರಾಹುಲ್‌ ಅವರ ಫಾರ್ಮ್ ಮತ್ತು ಫಿಟ್‌ನೆಸ್‌ ಮೇಲೆ ಎಲ್ಲರ ಗಮನ ಕೇಂದ್ರೀಕೃತಗೊಂಡಿದೆ. ರಾಹುಲ್‌ ಅವರಿಂದ ನೈಜ ಬ್ಯಾಟಿಂಗ್‌ ಫಾರ್ಮ್ ಕಂಡುಬಂದದ್ದೇ ಆದರೆ ಭಾರತಕ್ಕೆ ಅದು ಖಂಡಿತವಾಗಿಯೂ ಹೆಚ್ಚಿನ ಲಾಭ ತರಲಿದೆ.

ಮತ್ತೋರ್ವ ಓಪನರ್‌ ಶುಭಮನ್‌ ಗಿಲ್‌ ಅವರಿಗೆ ವನ್‌ಡೌನ್‌ ಸ್ಥಾನವೇ ಮೀಸಲಾಗಲಿದೆ. ಕಳೆದ ವೆಸ್ಟ್‌ ಇಂಡೀಸ್‌ ಪ್ರವಾಸದ ವೇಳೆ ಆಡಲಾದ ಮೂರೂ ಏಕದಿನಗಳಲ್ಲಿ ಆರಂಭಿಕನಾಗಿ ಇಳಿದ ಗಿಲ್‌ ಅಮೋಘ ಬ್ಯಾಟಿಂಗ್‌ ಪ್ರದರ್ಶಿಸಿದ್ದನ್ನು ಮರೆಯುವಂತಿಲ್ಲ. ಅವರಿಂದ ಇದೇ ಫಾರ್ಮ್ ಅನ್ನು ನಿರೀಕ್ಷಿಸಲಾಗಿದೆ. ಇನ್ನೂ ಓರ್ವ ಆರಂಭಕಾರ ಋತುರಾಜ್‌ ಗಾಯಕ್ವಾಡ್‌ಗೆ ಎಲ್ಲಿ ಜಾಗ ಕೊಡುವುದು ಎಂಬುದೊಂದು ಪ್ರಶ್ನೆ.

ಮಧ್ಯಮ ಕ್ರಮಾಂಕದಲ್ಲಿ ಭಾರತಕ್ಕೆ ಬಹಳಷ್ಟು ಆಯ್ಕೆಗಳಿವೆ. ದೀಪಕ್‌ ಹೂಡಾ, ಸಂಜು ಸ್ಯಾಮ್ಸನ್‌, ಇಶಾನ್‌ ಕಿಶನ್‌, ಇದೇ ಮೊದಲ ಸಲ ತಂಡವನ್ನು ಪ್ರವೇಶಿಸಿರುವ ರಾಹುಲ್‌ ತ್ರಿಪಾಠಿ ಇಲ್ಲಿನ ಪ್ರಮುಖರು. ಹಂತ ಹಂತವಾಗಿ ಇವರೆಲ್ಲರನ್ನೂ ಆಡುವ ಬಳಗದಲ್ಲಿ ಆಡಿಸಿ ನೋಡಬೇಕಿದೆ.

ಬೌಲಿಂಗ್‌ನಲ್ಲಿ ಭಾರತ ವಿಶೇಷ ಅನುಭವಿಗಳನ್ನು ಹೊಂದಿಲ್ಲ. ವೇಗದ ವಿಭಾಗದಲ್ಲಿ ಶಾದೂìಲ್‌ ಠಾಕೂರ್‌, ಪ್ರಸಿದ್ಧ್ ಕೃಷ್ಣ, ಮೊಹಮ್ಮದ್‌ ಸಿರಾಜ್‌, ಮರಳಿ ಬಂದ ದೀಪಕ್‌ ಚಹರ್‌ ಇದ್ದಾರೆ. ಸ್ಪಿನ್‌ ತ್ರಿವಳಿಗಳೆಂದರೆ ಅಕ್ಷರ್‌ ಪಟೇಲ್‌, ಕುಲದೀಪ್‌ ಯಾದವ್‌ ಮತ್ತು ಶಾಬಾಜ್‌ ಅಹ್ಮದ್‌. ಸ್ಪಿನ್‌ ಆಲ್‌ರಂಡರ್‌ ಆಗಿ ದೀಪಕ್‌ ಹೂಡಾ ಅವರನ್ನು ಪರಿಗಣಿಸಬಹುದು.

ಜಿಂಬಾಬ್ವೆ ಸಾಮಾನ್ಯ ತಂಡವಲ್ಲ
ಜಿಂಬಾಬ್ವೆಯ ಸಾಮರ್ಥ್ಯಕ್ಕೆ ಭಾರತದ ಈ ಬೌಲಿಂಗ್‌ ಪಡೆ ಧಾರಾಳ ಎಂದು ಭಾವಿಸಿದರೆ ಅಪಾಯ ತಪ್ಪಿದ್ದಲ್ಲ. ಜಿಂಬಾಬ್ವೆ ಒಂದು ಕಾಲದ ಹೀರೋಗಳಾದ ಫ್ಲವರ್‌ ಬ್ರದರ್, ಹಾಟನ್‌, ಸ್ಟ್ರೀಕ್‌, ನೀಲ್‌ ಜಾನ್ಸನ್‌, ಮರ್ರೆ ಗುಡ್‌ವಿನ್‌, ಹೆನ್ರಿ ಒಲೊಂಗ ಅವರಂಥ ಸ್ಟಾರ್‌ ಆಟಗಾರರನ್ನು ಹೊಂದಿಲ್ಲದೇ ಇರಬಹುದು, ಆದರೆ ಕಳೆದ ಸರಣಿಯಲ್ಲಿ ಅದು ಬಾಂಗ್ಲಾ ವಿರುದ್ಧ ಇದೇ ಹರಾರೆ ಅಂಗಳದಲ್ಲಿ 300 ಪ್ಲಸ್‌, 290 ಪ್ಲಸ್‌ ಮೊತ್ತವನ್ನು ಯಶಸ್ವಿಯಾಗಿ ಬೆನ್ನಟ್ಟಿದ್ದನ್ನು ಭಾರತ ಗಂಭೀರವಾಗಿಯೇ ಪರಿ ಗಣಿಸ ಬೇಕಿದೆ. ಆದರೆ ಜಬರ್ದಸ್ತ್ ಪ್ರದರ್ಶನ ನೀಡಲು ಮರೆಯಬಾರದು.

ಧೋನಿ, ರೋಹಿತ್‌ ಜತೆ ಹೋಲಿಸಬೇಡಿ: ರಾಹುಲ್‌
“ನನ್ನ ನಾಯಕತ್ವದ ಶೈಲಿಯನ್ನು ದಯವಿಟ್ಟು ಮಹೇಂದ್ರ ಸಿಂಗ್‌ ಧೋನಿ ಅಥವಾ ರೋಹಿತ್‌ ಶರ್ಮ ಅವರೊಂದಿಗೆ ಹೋಲಿಸಬೇಡಿ’ ಎಂದಿದ್ದಾರೆ ಕೆ.ಎಲ್‌. ರಾಹುಲ್‌. ಫಿಟ್‌ನೆಸ್‌ ಪಡೆದು ಜಿಂಬಾಬ್ವೆ ಪ್ರವಾಸದಲ್ಲಿ ಮರಳಿ ಏಕದಿನ ತಂಡದ ನಾಯಕತ್ವ ವಹಿಸಿಕೊಳ್ಳುತ್ತಿರುವ ಸಂದರ್ಭದಲ್ಲಿ ಅವರು ಈ ಹೇಳಿಕೆ ನೀಡಿದ್ದಾರೆ.
“ನಾನು ಯಾರೊಂದಿಗೂ ಹೋಲಿಕೆ ಮಾಡಿಕೊಳ್ಳಲು ಬಯಸುವುದಿಲ್ಲ. ನಾಯಕತ್ವದ ವಿಷಯದಲ್ಲಿ ನಾನಿನ್ನೂ ಕಿರಿಯ ಮತ್ತು ಅನನುಭವಿ. ನಾಯಕನಾಗಿ ಇದು ನನ್ನ ಕೇವಲ ಎರಡನೇ ಸರಣಿ. ಧೋನಿ, ರೋಹಿತ್‌ ಅವರ ಸಾಧನೆ, ಅವರೇರಿದ ಎತ್ತರ ಅಸಾಮಾನ್ಯ. ದೇಶಕ್ಕಾಗಿ ಅವರು ನೀಡಿದ ಕೊಡುಗೆ ಅಪಾರ. ಅವರ ಮಾರ್ಗದರ್ಶನದಲ್ಲಿ ನಾನು ಬಹಳಷ್ಟು ಪಂದ್ಯಗಳನ್ನು ಆಡಿದ್ದೇನೆ, ಬಹಳಷ್ಟು ಕಲಿತಿದ್ದೇನೆ. ನಾಯಕತ್ವದ ವಿಷಯದಲ್ಲಿ ನಾನು ನನ್ನದೇ ಆದ ದಾರಿಯಲ್ಲಿ ನಡೆಯುತ್ತೇನೆ’ ಎಂದು ರಾಹುಲ್‌ ಹೇಳಿದರು.

ತಂಡಗಳು
ಭಾರತ
ಕೆ.ಎಲ್‌. ರಾಹುಲ್‌ (ನಾಯಕ), ಶಿಖರ್‌ ಧವನ್‌, ಋತುರಾಜ್‌ ಗಾಯಕ್ವಾಡ್‌, ಶುಭಮನ್‌ ಗಿಲ್‌, ದೀಪಕ್‌ ಹೂಡಾ, ರಾಹುಲ್‌ ತ್ರಿಪಾಠಿ, ಇಶಾನ್‌ ಕಿಶನ್‌, ಸಂಜು ಸ್ಯಾಮ್ಸನ್‌, ಶಾದೂìಲ್‌ ಠಾಕೂರ್‌, ಕುಲದೀಪ್‌ ಯಾದವ್‌, ಅಕ್ಷರ್‌ ಪಟೇಲ್‌, ಆವೇಶ್‌ ಖಾನ್‌, ಪ್ರಸಿದ್ಧ್ ಕೃಷ್ಣ, ಮೊಹಮ್ಮದ್‌ ಸಿರಾಜ್‌, ದೀಪಕ್‌ ಚಹರ್‌, ಶಾಬಾಜ್‌ ಅಹ್ಮದ್‌.

ಜಿಂಬಾಬ್ವೆ
ರೇಗಿಸ್‌ ಚಕಬ್ವ(ನಾಯಕ), ರಿಯಾನ್‌ ಬರ್ಲ್, ಟನಾಕ ಚಿವಾಂಗ, ಟಕುದ್ವನಾಶೆ ಕೈಟಾನೊ, ಕ್ಲೈವ್‌ ಮಡಾಂಡೆ, ವೆಸ್ಲಿ ಮಧೆವೇರ್‌, ಟಡಿವನಾಶೆ ಮರುಮನಿ, ಜಾನ್‌ ಮಸಾರ, ಟೋನಿ ಮುನ್ಯೊಂಗ, ರಿಚರ್ಡ್‌ ಎನ್‌ಗರವ, ವಿಕ್ಟರ್‌ ನ್ಯವುಚಿ, ಸಿಕಂದರ್‌ ರಝ, ಮಿಲ್ಟನ್‌ ಶುಂಬ, ಡೊನಾಲ್ಡ್‌ ಟಿರಿಪಾನೊ.

ಆರಂಭ: ಅಪರಾಹ್ನ 12.45
ಪ್ರಸಾರ: ಸೋನಿ ಸ್ಪೋರ್ಟ್ಸ್

ಟಾಪ್ ನ್ಯೂಸ್

Vitla: ಸೂರಿಕುಮೇರು ಜಂಕ್ಷನ್ ನಲ್ಲಿ ಅಪಘಾತ… ಬೈಕ್ ಸವಾರ ಮೃತ್ಯು

Vitla: ಸೂರಿಕುಮೇರು ಜಂಕ್ಷನ್ ನಲ್ಲಿ ಅಪಘಾತ… ಬೈಕ್ ಸವಾರ ಮೃತ್ಯು

BGV-CM

Belagavi: ಎಐಸಿಸಿ ಅಧಿವೇಶನದ ಶತಮಾನೋತ್ಸವಕ್ಕೆ ಅಡ್ಡಿಪಡಿಸಿದರೆ ಕ್ರಮ: ಸಿದ್ದರಾಮಯ್ಯ

Hydarabad: ಪುಷ್ಪ-2 ಚಿತ್ರದ ಪ್ರದರ್ಶನ ವೇಳೆ ಗಾಯಗೊಂಡಿದ್ದ ಬಾಲಕನ ಸ್ಥಿತಿ ಗಂಭೀರ

Hydarabad: ಪುಷ್ಪ-2 ಚಿತ್ರದ ಪ್ರದರ್ಶನ ವೇಳೆ ಗಾಯಗೊಂಡಿದ್ದ ಬಾಲಕನ ಸ್ಥಿತಿ ಗಂಭೀರ

BBK11: ಮತ್ತೆ ಬಿಗ್ ಬಾಸ್ ಮನೆಗೆ ಗೋಲ್ಡ್ ಸುರೇಶ್.. ವಿಡಿಯೋದಲ್ಲಿ ಸುಳಿವು

BBK11: ಮತ್ತೆ ಬಿಗ್ ಬಾಸ್ ಮನೆಗೆ ಗೋಲ್ಡ್ ಸುರೇಶ್..? ವಿಡಿಯೋದಲ್ಲಿ ಸುಳಿವು

Vijayapura: ಜನವರಿ 1, 2 ರಂದು ಸಿದ್ದೇಶ್ವರ ಶ್ರೀಗಳಿಗೆ ಗುರುನಮನ ಕಾರ್ಯಕ್ರಮ

Vijayapura: ಜನವರಿ 1, 2 ರಂದು ಸಿದ್ದೇಶ್ವರ ಶ್ರೀಗಳಿಗೆ ಗುರುನಮನ ಕಾರ್ಯಕ್ರಮ

ನಾವು ಅಧಿಕಾರಕ್ಕೆ ಬಂದರೆ 60 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ಚಿಕಿತ್ಸೆ: ಕೇಜ್ರಿವಾಲ್‌

ನಾವು ಅಧಿಕಾರಕ್ಕೆ ಬಂದರೆ 60 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ಚಿಕಿತ್ಸೆ: ಕೇಜ್ರಿವಾಲ್‌

BGV-Gruhalkmi

Belagavi: ಮಹಿಳೆಯರ ಸಬಲರಾಗಿಸುವ ಗೃಹಲಕ್ಷ್ಮಿ ಯೋಜನೆ ನಿಲ್ಲಿಸುವ ಮಾತೇ ಇಲ್ಲ: ಸಿದ್ದರಾಮಯ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-prathvi

Shaw left out; ಓ ದೇವರೇ, ನಾನು ಇನ್ನೇನೆಲ್ಲ ನೋಡಬೇಕು..; ಪೃಥ್ವಿ ಶಾ ನೋವು

Ravichandran Ashwin: ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಆರ್.ಅಶ್ವಿನ್

Ravichandran Ashwin: ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಆರ್.ಅಶ್ವಿನ್

1-crick

Brisbane Test; ವರುಣನ ಅಡ್ಡಿ: ಕೂತೂಹಲ ಮೂಡಿಸಿದ್ದ ಪಂದ್ಯ ಡ್ರಾದಲ್ಲಿ ಅಂತ್ಯ

1-eqeeqwe

Brisbane Test; ರೋಚಕ.. ಭಾರತ ಗೆಲ್ಲಲು 54 ಓವರ್‌ಗಳಲ್ಲಿ 275 ರನ್ ಅಗತ್ಯ

KLR

Australia vs India: ಬ್ರಿಸ್ಬೇನ್‌ ಟೆಸ್ಟ್‌ನಲ್ಲಿ ಫಾಲೋಆನ್‌ ತೂಗುಗತ್ತಿಯಿಂದ ಪಾರಾದ ಭಾರತ

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

police-ban

Bantwal: ಜೂಜಾಟಕ್ಕೆ ದಾಳಿ; 7.81 ಲಕ್ಷ ರೂ.ವಶ

Vitla: ಸೂರಿಕುಮೇರು ಜಂಕ್ಷನ್ ನಲ್ಲಿ ಅಪಘಾತ… ಬೈಕ್ ಸವಾರ ಮೃತ್ಯು

Vitla: ಸೂರಿಕುಮೇರು ಜಂಕ್ಷನ್ ನಲ್ಲಿ ಅಪಘಾತ… ಬೈಕ್ ಸವಾರ ಮೃತ್ಯು

BGV-CM

Belagavi: ಎಐಸಿಸಿ ಅಧಿವೇಶನದ ಶತಮಾನೋತ್ಸವಕ್ಕೆ ಅಡ್ಡಿಪಡಿಸಿದರೆ ಕ್ರಮ: ಸಿದ್ದರಾಮಯ್ಯ

byndoor

Malpe: ತೀವ್ರ ಆಸ್ವಸ್ಥಗೊಂಡ ವ್ಯಕ್ತಿ ಸಾವು

byndoor

Udupi: ಸ್ಕೂಟರ್‌ ಢಿಕ್ಕಿ; ಪಾದಚಾರಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.