ಅರ್ಹತಾ ತಂಡದೊಂದಿಗೆ ಭಾರತದ ಅಭಿಯಾನ
2022ರ ಮಾರ್ಚ್ 4-ಎಪ್ರಿಲ್ 3; ವನಿತಾ ಏಕದಿನ ವಿಶ್ವಕಪ್ ವೇಳಾಪಟ್ಟಿ ಪ್ರಕಟ
Team Udayavani, Dec 16, 2020, 1:32 AM IST
2022ರ ವನಿತಾ ಏಕದಿನ ವಿಶ್ವಕಪ್ ವೇಳಾಪಟ್ಟಿ ಪ್ರಕಟಿಸಿದ ಸಂದರ್ಭ ಟ್ರೋಫಿಯೊಂದಿಗೆ ಆ್ಯಮಿ ಸಾಟರ್ಕ್ವೈಟ್, ರಿಚರ್ಡ್ ಹ್ಯಾಡ್ಲಿ, ಲಿಯಾ ತಹುಹು.
ದುಬಾೖ: ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ಮಂಗಳವಾರ ಪುನಾರಚನೆಗೊಂಡ 2022ರ ವನಿತಾ ಏಕದಿನ ವಿಶ್ವಕಪ್ ಕೂಟದ 31 ಪಂದ್ಯಗಳ ವೇಳಾಪಟ್ಟಿಯನ್ನು ಪ್ರಕಟಿಸಿದ್ದು ಭಾರತವು ಮಾ. 6ರಂದು ನಡೆಯುವ ಪಂದ್ಯದಲ್ಲಿ ಅರ್ಹತಾ ತಂಡವನ್ನು ಎದುರಿಸುವ ಮೂಲಕ ತನ್ನ ಅಭಿಯಾನ ಆರಂಭಿಸಲಿದೆ.
ನ್ಯೂಜಿಲ್ಯಾಂಡಿನ ತೌರಂಗ ಬೇ ಓವಲ್ನಲ್ಲಿ ಈ ಪಂದ್ಯ ನಡೆಯಲಿದೆ. ಎಂಟು ತಂಡಗಳ ರೌಂಡ್ ರಾಬಿನ್ ಮಾದರಿಯ ಈ ಕೂಟದ ಇನ್ನೆರಡು ಪಂದ್ಯಗಳಲ್ಲಿಯೂ ಭಾರತವು ಅರ್ಹತಾ ತಂಡಗಳನ್ನೇ ಎದರಿಸಲಿದೆ. ಈ ಎರಡು ಪಂದ್ಯಗಳು ಸೆಡ್ಡನ್ ಪಾರ್ಕ್ ಮತ್ತು ಹ್ಯಾಮಿಲ್ಟನ್ನಲ್ಲಿ ನಡೆಯಲಿದೆ.
ಪ್ರಮುಖ ಪಂದ್ಯಗಳಲ್ಲಿ ತೌರಂಗದಲ್ಲಿ ಮಾ. 16ರಂದು ನಡೆಯುವ ಪಂದ್ಯದಲ್ಲಿ ಭಾರತವು ಇಂಗ್ಲೆಂಡ್ ತಂಡವನ್ನು ಎದುರಿಸಲಿದೆ. ಇದು ಲಾರ್ಡ್ಸ್ನಲ್ಲಿ 2017ರ ವನಿತಾ ವಿಶ್ವಕಪ್ ಫೈನಲ್ನ ಪುನರಾವರ್ತಿತ ಪಂದ್ಯವಾಗಲಿದೆ. ಭಾರತ ಇನ್ನೆರಡು ಪಂದ್ಯಗಳಲ್ಲಿ ಆಸ್ಟ್ರೇಲಿಯವನ್ನು ಮಾ. 19 (ಈಡನ್ ಪಾರ್ಕ್) ಮತ್ತು ದಕ್ಷಿಣ ಆಫ್ರಿಕಾವನ್ನು ಮಾ. 27 (ಕ್ರೈಸ್ಟ್ಚರ್ಚ್) ರಂದು ಎದುರಿಸಲಿದೆ.
ಈ ವಿಶ್ವಕಪ್ ಕ್ರಿಕೆಟ್ 2021ರ ಫೆಬ್ರವರಿ-ಮಾರ್ಚ್ ನಲ್ಲಿ ನಡೆಯಬೇಕಿತ್ತು. ಆದರೆ ಕೋವಿಡ್-19ನಿಂದಾಗಿ ಮುಂದೂಡಲ್ಪಟ್ಟ ಈ ಕೂಟ 2022ರ ಮಾ. 4ರಿಂದ ಎ. 3ರ ವರೆಗೆ ನಡೆಯಲಿದ್ದು ಮಾ. 30 ಮತ್ತು 31ರಂದು 2 ಸೆಮಿ ಫೈನಲ್ಸ್ ಹಾಗೂ ಎ. 3ರಂದು ಫೈನಲ್ ಪಂದ್ಯ ನಡೆಯಲಿದೆ.
ಎಂಟು ತಂಡಗಳು
ಕಳೆದ ಮಾರ್ಚ್ನಲ್ಲಿ ಆಸ್ಟ್ರೇಲಿಯದಲ್ಲಿ ನಡೆದ ಟಿ20 ವಿಶ್ವಕಪ್ ಬಳಿಕ ವನಿತಾ ಏಕದಿನ ವಿಶ್ವಕಪ್ ಜಾಗತಿಕ ಮಟ್ಟದಲ್ಲಿ ನಡೆಯಲಿರುವ ಬೃಹತ್ ಕೂಟವಾಗಿದೆ. ಈ ಕೂಟದಲ್ಲಿ ಬಲಿಷ್ಠ ಎಂಟು ತಂಡಗಳು ಭಾಗವಹಿಸಲಿದ್ದು ರೌಂಡ್ ರಾಬಿನ್ ಮಾದರಿಯಲ್ಲಿ ಪಂದ್ಯಗಳು ನಡೆಯಲಿವೆ. ಪಂದ್ಯಗಳು ಆಕ್ಲಂಡ್, ತೌರಂಗ, ಹ್ಯಾಮಿಲ್ಟನ್, ವೆಲ್ಲಿಂಗ್ಟನ್, ಕ್ರೈಸ್ಟ್ಚರ್ಚ್ ಮತ್ತು ಡುನೆಡಿನ್ನಲ್ಲಿ ನಡೆಯಲಿವೆ.
ಭಾರತವಲ್ಲದೇ ನ್ಯೂಜಿಲ್ಯಾಂಡ್, ಆಸ್ಟ್ರೇಲಿಯ, ಇಂಗ್ಲೆಂಡ್ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ವಿಶ್ವಕಪ್ಗೆ ಅರ್ಹತೆ ಗಳಿಸಿವೆ. ಇನ್ನುಳಿದ ಮೂರು ತಂಡಗಳು ಐಸಿಸಿ ಅರ್ಹತಾ ಕೂಟದಿಂದ ಆಯ್ಕೆಯಾಗಲಿವೆ. ಅರ್ಹತಾ ಕೂಟವು ಮುಂದಿನ ವರ್ಷದ ಜೂ. 26ರಿಂದ ಜುಲೈ 10ರ ವರೆಗೆ ಶ್ರೀಲಂಕಾದಲ್ಲಿ ನಡೆಯಲಿದೆ.
ಬಹುಮಾನ ನಿಧಿ
ಈ ಕೂಟವು 5.5 ಮಿಲಿಯನ್ ನ್ಯೂಜಿಲ್ಯಾಂಡ್ ಡಾಲರ್ ಬಹುಮಾನ ನಿಧಿಯನ್ನು ಒಳಗೊಂಡಿದೆ. ಇದು 2017ರ ವಿಶ್ವಕಪ್ಗಿಂತ ಶೇ. 70ರಷ್ಟು ಮತ್ತು 2013ರ ವಿಶ್ವಕಪ್ಗಿಂತ ಶೇ. ನೂರರಷ್ಟು ಹೆಚ್ಚಾಗಿದೆ. ಎಲ್ಲ ಪಂದ್ಯಗಳನ್ನು ಸ್ಟಾರ್ ಇಂಡಿಯಾ ನೇರ ಪ್ರಸಾರ ಮಾಡಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Udupi: ಸಾಲ ಮರುಪಾವತಿಸದೆ ನಕಲಿ ದಾಖಲೆ ಸೃಷ್ಟಿಸಿ ಮರು ಸಾಲ; ಪ್ರಕರಣ ದಾಖಲು
ಮಂಡ್ಯ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡಕ್ಕಾಗಿ ಕೈಗೊಂಡ 5 ನಿರ್ಣಯಗಳೇನು ಗೊತ್ತಾ?
Kasaragodu: ಸ್ಲೀಪರ್ ಸೆಲ್ ರಚನೆಗಾಗಿ ಭಾರತಕ್ಕೆ ಬಂದಿದ್ದ ಭಯೋತ್ಪಾದಕ ಶಾಬ್ಶೇಖ್
Ayodhya: ರಾಮಮಂದಿರಕ್ಕೆ 1 ವರ್ಷ: ಜ.11ರಿಂದ 3 ದಿನ ಪೂಜೆ
ಸಿ.ಟಿ.ರವಿ ನಕಲಿ ಎನ್ಕೌಂಟರ್ಗೆ ಸರಕಾರದ ಹುನ್ನಾರ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.