ಕಿರಿಯರಿಗೆ ಒಲಿಯಿತು ಏಕದಿನ ಸರಣಿ
Team Udayavani, Feb 7, 2017, 3:45 AM IST
ಮುಂಬಯಿ: ಪ್ರವಾಸಿ ಇಂಗ್ಲೆಂಡ್ ಮೇಲೆ ಭಾರತದ ಕಿರಿಯರೂ ಸವಾರಿ ಮಾಡಿದ್ದಾರೆ. 5 ಪಂದ್ಯಗಳ ಏಕದಿನ ಸರಣಿಯನ್ನು ವಶಪಡಿಸಿಕೊಂಡು ಮೆರೆದಿದ್ದಾರೆ.
ಪ್ರತಿಭಾನ್ವಿತ ಓಪನರ್ ಶುಭಂ ಗಿಲ್ ಬಾರಿಸಿದ ಸತತ 2ನೇ ಶತಕ, ವನ್‌ಡೌನ್ ಬ್ಯಾಟ್ಸ್‌ಮನ್ ಪೃಥ್ವಿ ಶಾ ಅವರ 105 ರನ್ ಸಾಹಸದಿಂದ ಅಂಡರ್-19 ಸರಣಿಯ 4ನೇ ಏಕದಿನ ಪಂದ್ಯವನ್ನು ಭಾರತ 230 ರನ್ನುಗಳ ಬೃಹತ್ ಅಂತರದಿಂದ ಗೆದ್ದು ಸರಣಿ ಮೇಲೆ ಹಕ್ಕು ಸ್ಥಾಪಿಸಿತು.
“ವಾಂಖೇಡೆ ಸ್ಟೇಡಿಯಂ’ನಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಬ್ಯಾಟಿಂಗಿಗೆ ಇಳಿಸಲ್ಪಟ್ಟ ಭಾರತದ ಕಿರಿಯರು 9 ವಿಕೆಟಿಗೆ 382 ರನ್ ಸೂರೆಗೈದರೆ, ಈ ಬೃಹತ್ ಮೊತ್ತವನ್ನು ಕಂಡು ಬೆದರಿದಂತೆ ಆಡಿದ ಇಂಗ್ಲೆಂಡ್ 37.4 ಓವರ್‌ಗಳಲ್ಲಿ 152ಕ್ಕೆ ಆಲೌಟ್ ಆಯಿತು. 5ನೇ ಹಾಗೂ ಅಂತಿಮ ಪಂದ್ಯ ಫೆ. 8ರಂದು ಮುಂಬಯಿಯಲ್ಲೇ ನಡೆಯಲಿದೆ.
ಗಿಲ್ ಜೀವನಶ್ರೇಷ್ಠ ಸಾಧನೆ
ಪಂಜಾಬ್ ಆರಂಭಕಾರ ಶುಭಂ ಗಿಲ್ ಮತ್ತೂಮ್ಮೆ ಪ್ರಚಂಡ ಬ್ಯಾಟಿಂಗ್ ಪ್ರದರ್ಶಿಸಿ 160 ರನ್ ಸಿಡಿಸಿದರು. ಇದು ಈ ಸರಣಿಯಲ್ಲಿ ಗಿಲ್ ಬಾರಿಸಿದ ಸತತ 2ನೇ ಶತಕ ಹಾಗೂ ಜೀವನಶ್ರೇಷ್ಠ ಸಾಧನೆ. 3ನೇ ಪಂದ್ಯದಲ್ಲಿ ಗಿಲ್ ಅಜೇಯ 138 ರನ್ ಮಾಡಿ ಇಂಗ್ಲೆಂಡ್ ಬೌಲರ್‌ಗಳನ್ನು ಕಾಡಿದ್ದರು. ಸೋಮವಾರದ ಮುಖಾಮುಖೀಯಲ್ಲಿ ಇವರಿಗೆ ಮುಂಬಯಿಯ ಪೃಥ್ವಿ ಶಾ ಉತ್ತಮ ಬೆಂಬಲವಿತ್ತರು. ವನ್‌ಡೌನ್‌ನಲ್ಲಿ ಬ್ಯಾಟ್ ಹಿಡಿದು ಬಂದ ಶಾ ಗಳಿಕೆ 105 ರನ್. ಇವರಿಬ್ಬರ 3ನೇ ವಿಕೆಟ್ ಜತೆಯಾಟದಲ್ಲಿ 231 ರನ್ ಹರಿದು ಬಂತು.
ಗಿಲ್ 160 ರನ್ನಿಗೆ ಎದುರಿಸಿದ್ದು ಕೇವಲ 120 ಎಸೆತ. ಸಿಡಿಸಿದ್ದು 23 ಬೌಂಡರಿ ಹಾಗೂ ಒಂದು ಸಿಕ್ಸರ್. ಶಾ 89 ಎಸೆತಗಳಿಂದ ತಮ್ಮ ಇನ್ನಿಂಗ್ಸ್ ಕಟ್ಟಿದರು. ಇದರಲ್ಲಿ 12 ಬೌಂಡರಿ, 2 ಸಿಕ್ಸರ್ ಸೇರಿತ್ತು. 16ನೇ ಓವರಿನಲ್ಲಿ ಜತೆಗೂಡಿದ ಈ ಜೋಡಿ 43ನೇ ಓವರ್ ತನಕವೂ ಕ್ರೀಸಿಗೆ ಅಂಟಿಕೊಂಡು ನಿಂತಿತು.
ಇಂಗ್ಲೆಂಡ್ ಬ್ಯಾಟಿಂಗ್ ಸರದಿಗೆ ಗಂಡಾಂತರ ತಂದಿತ್ತವರು ರಾಜಸ್ಥಾನದ ಮಧ್ಯಮ ವೇಗಿ ಕಮಲೇಶ್ ನಾಗರ್ಕೋಟಿ (31ಕ್ಕೆ 4). ಜತೆಗೆ ವಿವೇಕಾನಂದ ತಿವಾರಿ (20ಕ್ಕೆ 3) ಮತ್ತು ಶಿವಂ ಮಾವಿ (18ಕ್ಕೆ 2) ಕೂಡ ಮಿಂಚಿನ ಬೌಲಿಂಗ್ ನಡೆಸಿದರು. 16 ರನ್ ಆಗುವಷ್ಟರಲ್ಲಿ 3 ವಿಕೆಟ್ ಉದುರಿಸಿಕೊಂಡ ಇಂಗ್ಲೆಂಡ್ ಯಾವ ಹಂತದಲ್ಲೂ ಹೋರಾಟದ ಲಕ್ಷಣ ತೋರಲಿಲ್ಲ. ಕೀಪರ್ ಒಲೀ ಪೋಪ್ 59, ಕೆಳ ಕ್ರಮಾಂಕದ ಬ್ಯಾಟ್ಸ್‌ಮನ್ ವಿಲ್ ಜಾಕ್ಸ್ 44 ರನ್ ಮಾಡಿದ್ದೇ ದೊಡ್ಡ ಮೊತ್ತಗಳಾಗಿ ದಾಖಲಾದವು.
ಸಂಕ್ಷಿಪ್ತ ಸ್ಕೋರ್: ಭಾರತದ ಕಿರಿಯರು-9 ವಿಕೆಟಿಗೆ 382 (ಗಿಲ್ 160, ಶಾ 105, ರಾಣ 33, ಬ್ರೂಕ್ಸ್ 58ಕ್ಕೆ 2, ಗೋಡ್ಸಲ್ 78ಕ್ಕೆ 2, ರಾಲಿನ್ಸ್ 78ಕ್ಕೆ 2). ಇಂಗೆಂಡ್ ಕಿರಿಯರು-37.4 ಓವರ್‌ಗಳಲ್ಲಿ 152 (ಪೋಪ್ 59, ಜಾಕ್ಸ್ 44, ನಾಗರ್ಕೋಟಿ 31ಕ್ಕೆ 4, ತಿವಾರಿ 20ಕ್ಕೆ 3, ಮಾವಿ 18ಕ್ಕೆ 2).
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Test: ಇಂಗ್ಲೆಂಡ್ ಸರಣಿಯ ಬಳಿಕ ಟೆಸ್ಟ್ ಕ್ರಿಕೆಟ್ ನಿಂದ ದೂರವಾಗಲಿದ್ದಾರೆ ಕಿವೀಸ್ ಆಟಗಾರ
Ranji Trophy: ಇನ್ನಿಂಗ್ಸ್ ನ ಎಲ್ಲಾ 10 ವಿಕೆಟ್ ಕಿತ್ತು ಅನ್ಶುಲ್ ಕಾಂಬೋಜ್ ದಾಖಲೆ
India Vs India A ಅಭ್ಯಾಸ ಪಂದ್ಯ: ಅಗ್ಗಕ್ಕೆ ಔಟಾದ ಕೊಹ್ಲಿ, ಪಂತ್; ಗಾಯಗೊಂಡ ರಾಹುಲ್
India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
K.L. Rahul; ಕುಡ್ಲದ ಜನರ ಬೆಂಬಲವೇ ಸಾಧನೆಗೆ ಕಾರಣ
MUST WATCH
ಹೊಸ ಸೇರ್ಪಡೆ
BJP;’ಬಟೆಂಗೆ ತೊ ಕಟೆಂಗೆ’ ಹೇಳಿಕೆಗೆ ಬೆಂಬಲವಿಲ್ಲ ಎಂದ ಅಜಿತ್ ಪವಾರ್
Catacombs: ಇದು ಎಲುಬುಗಳೇ ತುಂಬಿಕೊಂಡ ಸುರಂಗ; ಸುಂದರ ದೇಶದ ಕರಾಳ ಇತಿಹಾಸ
Mangaluru: ಕದ್ರಿ ಪೊಲೀಸ್ ಠಾಣೆ ಬಳಿ ಇದ್ದಕ್ಕಿದ್ದಂತೆ ಹೊತ್ತಿ ಉರಿದ ಕಾರು
J-K: ಭೀಕರ ಅಪಘಾ*ತದಲ್ಲಿ SUV ಚಲಾಯಿಸುತ್ತಿದ್ದ 17 ರ ಹುಡುಗರಿಬ್ಬರು ಮೃ*ತ್ಯು
Save Life: ಆಯತಪ್ಪಿ ಬಿದ್ದು ರೈಲಿನಡಿ ಸಿಲುಕುತ್ತಿದ್ದ ಪ್ರಯಾಣಿಕನ ಕಾಪಾಡಿದ ಹೋಂಗಾರ್ಡ್!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.