ಒಲಿಂಪಿಕ್ಸ್ ಸ್ಪರ್ಧಿಗಳಿಗೆ 4 ದ್ರವ್ಯ ಪರೀಕ್ಷೆ
Team Udayavani, Jul 24, 2019, 7:22 AM IST
ಹೊಸದಿಲ್ಲಿ: ಮುಂದಿನ ವರ್ಷ ಟೋಕಿಯೊದಲ್ಲಿ ನಡೆಯಲಿರುವ ಒಲಿಂಪಿಕ್ಸ್‌ನಲ್ಲಿ ಭಾಗವಹಿಸುವ ಸ್ಪರ್ಧಿಗಳು ಕಠಿನ ದ್ರವ್ಯ ಪರೀಕ್ಷೆ ಎದುರಿಸಬೇಕಾಗುತ್ತದೆ.
ಪ್ರತಿ ಸ್ಪರ್ಧಿಯನ್ನು 3-4 ದ್ರವ್ಯ ಪರೀಕ್ಷೆಗೆ ಒಳಪಡಿಸಿದ ಬಳಿಕವೇ ಸರ್ಟಿಫಿಕೆಟ್ ನೀಡಲಾ ಗುವುದು ಎಂದು ರಾಷ್ಟ್ರೀಯ ದ್ರವ್ಯ ವಿರೋಧಿ ದಳ (ನಾಡಾ)ದ ಮಹಾ ನಿರ್ದೇಶಕ ನವೀನ್ ಅಗರ್ವಾಲ್ ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ.
ನಾಡಾ ಟಾರ್ಗೆಟೆಡ್ ಟೆಸ್ಟಿಂಗ್ ಎಂಬ ಹೊಸ ವಿಧಾನವೊಂದನ್ನು ಅಳವಡಿಸಿಕೊಂಡ ಬಳಿಕ ದ್ರವ್ಯ ಪರೀಕ್ಷೆಯಲ್ಲಿ ಸಿಕ್ಕಿ ಬೀಳುತ್ತಿರುವ ಕ್ರೀಡಾಪಟುಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಕಳೆದ ವರ್ಷದ ಎಪ್ರಿಲ್‌ನಿಂದ ಈ ವರ್ಷದ ಮಾರ್ಚ್ ತನಕ 187 ಕ್ರೀಡಾಪಟುಗಳು ಡೋಪಿಂಗ್ ವಂಚನೆ ಎಸಗಿರುವುದು ಪತ್ತೆಯಾಗಿದೆ. ಇದೊಂದು ದುರದೃಷ್ಟಕರ ಬೆಳವಣಿಗೆ ಎಂದು ಅಗರ್ವಾಲ್ ಹೇಳಿಕೊಂಡಿದ್ದಾರೆ.
ಪರಿಶುದ್ಧ ಮತ್ತು ನೈಜ ಕ್ರೀಡಾಪಟುಗಳು ಒಲಿಂಪಿಕ್ಸ್‌ನಲ್ಲಿ ಭಾಗವಹಿಸಬೇಕು ಎನ್ನುವುದು ನಮ್ಮ ಉದ್ದೇಶ. ಆಯ್ಕೆಯಾದ ಬಳಿಕ ಅವಮಾನಿತರಾಗುವುದಕ್ಕಿಂತ ಆಯ್ಕೆಯಾಗುವ ಮೊದಲೇ ದ್ರವ್ಯ ಪರೀಕ್ಷೆಯಲ್ಲಿ ಸಾಚಾತನವನ್ನು ಸಾಬೀತುಪಡಿಸುವುದು ಆಟಗಾರರ ಹಿತದೃಷ್ಟಿ ಯಿಂದಲೂ ಉತ್ತಮ ಕ್ರಮ ಎಂದವರು ಕಠಿನ ಪರೀಕ್ಷೆಯನ್ನು ಸಮರ್ಥಿಸಿಕೊಂಡಿದ್ದಾರೆ.
ಮಹಿಳಾ ಹಾಕಿ ಆಟಗಾರರಿಗೆ ಸಿಹಿ-ಖಾರ ಪಥ್ಯ
ಮಹಿಳಾ ಹಾಕಿ ಆಟಗಾರರಿಗೆ ಈಗಲೇ ತಯಾರಿ ಶುರುವಾಗಿದೆ. ಆಯ್ಕೆ ಸುತ್ತಿನಲ್ಲಿ ತೇರ್ಗಡೆಯಾಗುವ ಸಲುವಾಗಿ ವನಿತೆಯರು ತಮ್ಮ ಮೆಚ್ಚಿನ ಸಿಹಿ ಮತ್ತು ಖಾರ ತಿಂಡಿಗಳಿಂದ ದೂರವಿರಬೇಕೆಂದು ಸೂಚಿಸಲಾಗಿದೆ.
ಹಿರೋಶಿಮಾದಲ್ಲಿ ಕಳೆದ ತಿಂಗಳು ನಡೆದ ಎಫ್ಐಎಚ್ ಸರಣಿಯಲ್ಲಿ ಕಪ್ ಗೆದ್ದ ಬಳಿಕ ಆತ್ಮವಿಶ್ವಾಸ ಹೆಚ್ಚಿಸಿಕೊಂಡಿರುವ ವನಿತೆಯರು ನವೆಂಬರ್‌ನಲ್ಲಿ ನಡೆಯಲಿರುವ ಒಲಿಂಪಿಕ್ಸ್ ಅರ್ಹತಾ ಸುತ್ತಿಗಾಗಿ ಕಠಿನ ಅಭ್ಯಾಸ ನಿರತರಾಗಿದ್ದಾರೆ. ಪ್ರಸ್ತುತ ಇರುವುದು ಅತ್ಯುತ್ತಮ ಮತ್ತು ಅತಿ ಸಂತುಲಿತವಾಗಿರುವ ತಂಡ. ವೈಜ್ಞಾನಿಕ ಸಲಹೆಗಾರ ವಾಯ್ನ ಲೋಂಬರ್ಡ್ ಸಲಹೆಯನ್ನು ನಾವು ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದೇವೆ ಎಂದು ನಾಯಕಿ ರಾಣಿ ರಾಮ್‌ಪಾಲ್ ಪ್ರತಿಕ್ರಿಯಿಸಿದ್ದಾರೆ. ಮೈದಾನದಲ್ಲಿ ಉತ್ತಮ ನಿರ್ವಹಣೆ ತೋರಿಸಬೇಕಿದ್ದರೆ ಕಟ್ಟುನಿಟ್ಟಿನ ಆಹಾರ ಪಥ್ಯ ಪಾಲಿಸಬೇಕೆಂದು ಲೋಂಬರ್ಡ್ ವನಿತೆಯರಿಗೆ ಹೇಳಿದ್ದಾರೆ. ಅವರ ಸಲಹೆಯಂತೆ ವನಿತೆಯರು ಈಗ ಸಿಹಿ, ಖಾರ, ಚಾಕೊಲೇಟ್, ಎಣ್ಣೆ ಪದಾರ್ಥ ತಿನ್ನುವುದನ್ನು ಬಿಟ್ಟಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Udupi: ಸಾಲ ಮರುಪಾವತಿಸದೆ ನಕಲಿ ದಾಖಲೆ ಸೃಷ್ಟಿಸಿ ಮರು ಸಾಲ; ಪ್ರಕರಣ ದಾಖಲು
ಮಂಡ್ಯ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡಕ್ಕಾಗಿ ಕೈಗೊಂಡ 5 ನಿರ್ಣಯಗಳೇನು ಗೊತ್ತಾ?
Kasaragodu: ಸ್ಲೀಪರ್ ಸೆಲ್ ರಚನೆಗಾಗಿ ಭಾರತಕ್ಕೆ ಬಂದಿದ್ದ ಭಯೋತ್ಪಾದಕ ಶಾಬ್‌ಶೇಖ್
Ayodhya: ರಾಮಮಂದಿರಕ್ಕೆ 1 ವರ್ಷ: ಜ.11ರಿಂದ 3 ದಿನ ಪೂಜೆ
ಸಿ.ಟಿ.ರವಿ ನಕಲಿ ಎನ್‌ಕೌಂಟರ್‌ಗೆ ಸರಕಾರದ ಹುನ್ನಾರ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.