Neeraj Chopra: ನದೀಮ್ ಬಗ್ಗೆ ನನ್ನ ತಾಯಿ ಆಡಿದ್ದು ಹೃದಯದ ಮಾತುಗಳು; ನೀರಜ್
Team Udayavani, Aug 10, 2024, 10:26 PM IST
ಪ್ಯಾರಿಸ್: ಸಾಮಾಜಿಕ ಜಾಲತಾಣಗಳ ಪ್ರಭಾವದಿಂದ ನನ್ನ ತಾಯಿ ದೂರ ಉಳಿದಿದ್ದಾರೆ. ಹೀಗಾಗಿ ಪಾಕಿಸ್ಥಾನದ ಆಥ್ಲೀಟ್ ಅರ್ಶದ್ ನದೀಮ್ ಬಗ್ಗೆ ಅವರಾಡಿದ್ದು ಹೃದಯದಿಂದ ಬಂದ ಮಾತುಗಳು ಎಂದು ನೀರಜ್ ಚೋಪ್ರಾ ಹೇಳಿದ್ದಾರೆ. ನದೀಮ್ ಕೂಡ ನನ್ನ ಮಗನಿದ್ದಂತೆ ಎಂದು ಹೇಳಿಕೆ ನೀಡಿದ್ದ ತನ್ನ ತಾಯಿ ಸರೋಜಾದೇವಿ ಬಗ್ಗೆ ನೀರಜ್ ಈ ಪ್ರತಿಕ್ರಿಯೆ ನೀಡಿದ್ದಾರೆ.
ಸಂದರ್ಶನವೊಂದರಲ್ಲಿ ಮಾತನಾಡಿರುವ ನೀರಜ್, “ಭಾರತ ಮತ್ತು ಪಾಕಿಸ್ಥಾನ ನಡುವಿನ ಸಂಬಂಧಗಳ ಬಗ್ಗೆ ಸುದ್ದಿ ಹಬ್ಬಿಸುವ ಸಾಮಾಜಿಕ ಜಾಲತಾಣ, ಟಿವಿಗಳ ಪ್ರಭಾವವಿಲ್ಲದ ಹಳ್ಳಿಯ ಮೂಲೆಯಲ್ಲಿ ನನ್ನ ತಾಯಿ ವಾಸಿಸುತ್ತಿದ್ದಾರೆ. ಅವರಲ್ಲಿ ಮಾತೃಗುಣವಿದೆ. ಹೀಗಾಗಿ ತನ್ನ ಹೃದಯದಿಂದ ಬಂದ ಸೀದಾ ಮಾತುಗಳನ್ನು ಅವರು ಆಡಿದ್ದಾರೆ. ಇದು ಕೆಲವರಿಗೆ ವಿಚಿತ್ರವಾಗಿ ಕಾಣಿಸಬಹುದು. ಇನ್ನು ಕೆಲವರಿಗೆ ಇಷ್ಟವಾಗಬಹುದು’ ಎಂದರು.
ಚಿನ್ನ ಗೆದ್ದಿರುವ ಅರ್ಶದ್ ಕೂಡ ತನ್ನ ಮಗನಿದ್ದಂತೆ ಎಂದು ನೀರಜ್ ತಾಯಿ ಹೇಳಿದ್ದರು. ಅವರ ಈ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ಬಹಳ ವೈರಲ್ ಆಗಿತ್ತು. ವಿಶೇಷವೆಂದರೆ, ಅತ್ತ ಅರ್ಶದ್ ತಾಯಿ ರಜಿಯಾ ಪರ್ವೀನ್ ಕೂಡ ನೀರಜ್‌ನೂ ನನ್ನ ಮಗನೇ ಎಂದಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mudhol: ಪ್ರತ್ಯೇಕ ಅಪಘಾತ, ಇಬ್ಬರು ಮೃತ್ಯು..
Naxal: ತನಿಖೆ ನಡೆಸಿ ಪ್ಯಾಕೇಜ್ ನೀಡಬೇಕು,ಇಲ್ಲದಿದ್ದರೇ ಪ್ಯಾಕೇಜ್ ನೀಡುವುದರಲ್ಲಿ ಅರ್ಥವಿಲ್ಲ
AAP MLA: ಗುಂಡೇಟಿನಿಂದ ಎಎಪಿ ಶಾಸಕ ಗುರುಪ್ರೀತ್ ಗೋಗಿ ಸಾ*ವು… ಕುಟುಂಬಸ್ಥರು ಹೇಳಿದ್ದೇನು?
Gangavati: ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ವಿಜಯಪ್ರಸಾದ್ ಅಮಾನತು
Udyavara: ಟ್ರಕ್ ಗೆ ಢಿಕ್ಕಿ ಹೊಡೆದು ಬೈಕ್ ಸವಾರ ಮೃತ್ಯು ; ಟ್ರಕ್ ಬೆಂಕಿಗೆ ಆಹುತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.