ಒಲಿಂಪಿಕ್ಸ್ ಮುಂದಿನ ಗುರಿ: ವೇಟ್‌ಲಿಫ್ಟರ್ ಗುರುರಾಜ್ ಪೂಜಾರಿ
Team Udayavani, Aug 11, 2022, 7:12 AM IST
ದೇಶದ ಹೆಮ್ಮೆಯ ವೇಟ್‌ಲಿಫ್ಟರ್ ಗುರುರಾಜ್ ಪೂಜಾರಿ ಅವರನ್ನು ಬುಧವಾರ ಉದಯವಾಣಿಯ ಮಣಿಪಾಲ ಕಚೇರಿಯಲ್ಲಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಅವರು ತಮ್ಮ ಅನುಭವ, ಸಾಧನೆ, ಭವಿಷ್ಯದ ಕುರಿತು ಮನಬಿಚ್ಚಿ ಮಾತನಾಡಿದರು.
ಮುಂದೆ ಇನ್ನೂ ದೊಡ್ಡ ಸವಾಲು ಗಳಿವೆ ಅಲ್ಲವೇ?
ಹೌದು. ಏಷ್ಯನ್ ಗೇಮ್ಸ್, ಪ್ಯಾರಿಸ್ ಒಲಿಂಪಿಕ್ಸ್ ಇದೆ. ಮೊದಲು ಇದಕ್ಕೆಲ್ಲ ಅರ್ಹತಾ ಸುತ್ತುಗಳಿವೆ. ಇದನ್ನು ದಾಟಿ ಬರಬೇಕು. ಪೋಡಿಯಂ ಮೇಲೆ ಇನ್ನೂ ಮೇಲೇರಬೇಕೆಂಬುದೇ ಗುರಿ. ಮೊದಲು ಏಷ್ಯಾಡ್ ಬರಲಿದೆ. ಇದು ಕಾಮನ್ವೆಲ್ತ್ ಗೇಮ್ಸ್‌ಗಿಂತ ಮಿಗಿಲಾದ ಸವಾಲು. ಆದರೆ ಆತ್ಮವಿಶ್ವಾಸ, ಕಠಿನ ಅಭ್ಯಾಸ ನಡೆಸಿದರೆ ಅ ಗುರಿ ತಲುಪುವುದೂ ಅಸಾಧ್ಯವಲ್ಲ. ಏಷ್ಯಾಡ್‌ನಲ್ಲಿ ಉತ್ತಮ ಸಾಧನೆ ಮಾಡುವುದು ನನ್ನ ಮುಂದಿನ ಗುರಿ. ಇದು ಒಲಿಂಪಿಕ್ಸ್ ಗೆ ಪ್ರೇರಣೆ ಆಗಲಿದೆ. ಆದರೆ ಒಲಿಂಪಿಕ್ಸ್ ಅರ್ಹತೆ ಅಷ್ಟು ಸುಲಭವಲ್ಲ. ಹಾಗೆಂದು ಪ್ರಯತ್ನ ನಿಲ್ಲಿಸುವುದಿಲ್ಲ.
ಬೇರೆ ರಾಜ್ಯಕ್ಕೆ ಹೋಲಿಸಿದರೆ ಕರ್ನಾ ಟಕದಲ್ಲಿ ಕ್ರೀಡೆಗೆ ಸಹಕಾರ ಹೇಗಿದೆ?
ಕ್ರೀಡಾಳುಗಳಿಗೆ ಮೂಲ ಸೌಕರ್ಯ ಒದಗಿಸಲು ರಾಜ್ಯದಲ್ಲಿ ಆಮೂಲಾಗ್ರ ಬದಲಾವಣೆ ಆಗಬೇಕಿದೆ. ನಗರ ಪ್ರದೇಶ
ಮಾತ್ರವಲ್ಲದೆ, ಪ್ರತೀ ಜಿಲ್ಲೆ, ತಾಲೂಕು ಮಟ್ಟದಲ್ಲೂ ಕ್ರೀಡೆಗಳಿಗೆ ಬೇಕಾದ ಅಗತ್ಯ ಸೌಲಭ್ಯ, ಸವಲತ್ತುಗಳನ್ನು ಒದ ಗಿಸಿಕೊಡಬೇಕು. ನನಗೆ ತಿಂಗಳಿಗೆ 30 ಸಾವಿರ ರೂ. ತರಬೇತಿಗೆ ಖರ್ಚಾಗು ತ್ತದೆ. ಹರಿಯಾಣದಲ್ಲಿ ಚಿನ್ನದ ಪದಕ ಗೆದ್ದವರಿಗೆ 1.50 ಕೋ.ರೂ. ನಗದು ಪುರಸ್ಕಾರ ನೀಡುತ್ತಿದ್ದಾರೆ. ಬೆಳ್ಳಿ, ಕಂಚಿನ ಪದಕ ಗೆದ್ದವರಿಗೂ ಉತ್ತಮ ನಗದು ಪುರಸ್ಕಾರ ಘೋಷಣೆಯಾಗಿದೆ. ಅದಕ್ಕೆ ಆ ರಾಜ್ಯದಲ್ಲಿ ಪದಕ ಗೆದ್ದವರ ಪಟ್ಟಿ ದೊಡ್ಡದಿದೆ. ಕರ್ನಾಟಕದಲ್ಲಿ ಪದಕ ಗೆದ್ದವರಿಗೆ ಕನಿಷ್ಠ ನಗದು ಪುರ ಸ್ಕಾರ ನೀಡುತ್ತಿರುವುದು ಸೂಕ್ತವಲ್ಲ. ಮುಖ್ಯಮಂತ್ರಿಗಳ ಜತೆ ಮಾತನಾಡಲು ಅವಕಾಶ ಸಿಕ್ಕಿದರೆ ಅವರಲ್ಲಿ ಹೇಳುವೆ.
ಗ್ರಾಮೀಣ ಭಾಗದಿಂದ ಬಂದು, ವಿಶ್ವ ಮಟ್ಟ ದಲ್ಲಿ ದೇಶಕ್ಕೆ ಪದಕ ತರುವ ಸಾಧನೆಯ ಬಗ್ಗೆ ಏನನ್ನಿಸುತ್ತದೆ?
ಒಮ್ಮೆ ಹಿಂದಿರುಗಿ ನೋಡಿದರೆ ಅಚ್ಚರಿ. ಕುಂದಾಪುರದ ಚಿತ್ತೂರಿನಂತಹ ಸಣ್ಣ ಹಳ್ಳಿಯಿಂದ ಬಂದು, ಈ ಮಟ್ಟಕ್ಕೆ ಸಾಧನೆ ಮಾಡಲು ತರಬೇತಿ, ನಿತ್ಯವೂ ಅಭ್ಯಾಸ ಎಲ್ಲವೂ ಸವಾಲೇ ಆಗಿತ್ತು. ಊರಲ್ಲಿದ್ದಾಗ ಜಿಮ್‌ನಲ್ಲಿ ವಕೌìಟ್ ಮಾಡಲು ದೂರದ ಕುಂದಾಪುರಕ್ಕೆ ಬರಬೇಕು. ಪ್ರಯಾಣವೇ 3-4 ಗಂಟೆ ಆಗುತ್ತದೆ. ಆರಂಭದಲ್ಲಿ ಟ್ರಕ್ ಚಾಲಕ ರಾಗಿದ್ದ ಅಪ್ಪನ ದುಡಿಮೆ ಪೂರ್ತಿ ನನ್ನ ತರಬೇತಿಗೆ ತಗಲುತ್ತಿತ್ತು. ಆ ಬಳಿಕ ಸ್ಕಾಲರ್‌ಶಿಪ್‌ನಿಂದ ಸ್ವಲ್ಪ ಪ್ರಯೋ ಜನವಾಗಿದೆ. ಕಾಲೇಜು ದಿನಗಳಲ್ಲಿ ಸ್ನೇಹಿತರು, ಸೀನಿಯರ್ನಿಂದಲೂ ಸಹಾಯ ಪಡೆದದ್ದಿದೆ.
ನಿಮ್ಮ ಸಾಧನೆಯಲ್ಲಿ ಮಾಧ್ಯಮಗಳ ಪಾತ್ರ?
ಖಂಡಿತವಾಗಿಯೂ ಉತ್ತಮ ಮಟ್ಟ ದಲ್ಲಿದೆ. ಮೊದಲು ಕ್ರೀಡಾಪ್ರತಿಭೆಗಳನ್ನು ಗುರುತಿಸುವುದು ಮುಖ್ಯ. ಈ ಕೆಲಸ ನಮ್ಮಲ್ಲಿ ಉತ್ತಮ ಮಟ್ಟದಲ್ಲಿ ಆಗುತ್ತಿದೆ. ಇದರಿಂದ ನಾವು ಒಂದೊಂದೇ ಹೆಜ್ಜೆ ಮೇಲೇರುತ್ತೇವೆ. ಸರಕಾರದಿಂದ ಹೆಚ್ಚಿನ ನೆರವು ಪಡೆಯಲು ಮಾಧ್ಯಮಗಳ ಈ ಗುರುತಿಸುವಿಕೆ ನೆರವಿಗೆ ಬರುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Australian Open: ಹಿಂದೆ ಸರಿದ ಸಿಮೋನಾ ಹಾಲೆಪ್
South Africa vs Pakistan 2nd Test: ಬಾಶ್ ದಾಖಲೆ: ದ. ಆಫ್ರಿಕಾ ಮುನ್ನಡೆ
Melbourne Cricket Club; ಸಚಿನ್ ತೆಂಡುಲ್ಕರ್‌ಗೆ ಗೌರವ ಸದಸ್ಯತ್ವ
Boxing: ವಿಶ್ವ ಬಾಕ್ಸಿಂಗ್ ಸಂಸ್ಥೆಯಿಂದ ಮಧ್ಯಂತರ ಏಷ್ಯನ್ ಮಂಡಳಿ
INDWvWIW: ದೀಪ್ತಿ ಶರ್ಮಾ ಆಲ್ ರೌಂಡ್ ಶೋ; ಸರಣಿ ಕ್ಲೀನ್‌ಸ್ವೀಪ್ ಮಾಡಿದ ವನಿತೆಯರು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Havyaka Sammelana; ಅಡಿಕೆ ಬೆಳೆಗಾರರ ಹಿತ ರಕ್ಷಣೆಗೆ ಕೇಂದ್ರ ಬದ್ಧ: ಸಚಿವ ಜೋಶಿ
Udupi; ಗೀತಾರ್ಥ ಚಿಂತನೆ 138 : ಅಭಿಮಾನತ್ಯಾಗವೇ ಮೋಕ್ಷದ ಮೊದಲ ಮೆಟ್ಟಿಲು
Manmohan Singh ಅಂತ್ಯಕ್ರಿಯೆ ಸ್ಮಾರಕ ನಿರ್ಮಿಸಬಹುದಾದ ಸ್ಥಳದಲ್ಲಿ ನಡೆಸಲು ಖರ್ಗೆ ಮನವಿ
Kasaragod Crime News: ಅವಳಿ ಪಾಸ್‌ಪೋರ್ಟ್; ಕೇಸು ದಾಖಲು
Traffic; ಉಡುಪಿ ನಗರದಲ್ಲಿ 5 ದಿನ ರಸ್ತೆ ಮಾರ್ಗಗಳಲ್ಲಿ ಮಾರ್ಪಾಡು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.