ಒಲಿಂಪಿಕ್ಸ್ : ಭಾರತದಿಂದ ದಾಖಲೆ ಸಂಖ್ಯೆಯ ಬಾಕ್ಸರ್
ಬಾಕ್ಸ್-ಆಫ್ ನಲ್ಲಿ ಗೆದ್ದ ಮನೀಷ್; ಹಿಂದೆ ಸರಿದ ವಿಕಾಸ್
Team Udayavani, Mar 11, 2020, 11:05 PM IST
ಅಮ್ಮಾನ್ (ಜೋರ್ಡಾನ್): ಒಲಿಂಪಿಕ್ಸ್ ಇತಿಹಾಸದಲ್ಲೇ ಮೊದಲ ಬಾರಿಗೆ ಭಾರತದ ಅತ್ಯಧಿಕ ಸಂಖ್ಯೆಯ ಬಾಕ್ಸರ್ಗಳು ಅರ್ಹತೆ ಸಂಪಾದಿಸಿ ದಾಖಲೆ ಬರೆದಿದ್ದಾರೆ. ಬುಧವಾರದ 63 ಕೆಜಿ ವಿಭಾಗದ “ಬಾಕ್ಸ್-ಆಫ್’ ಸುತ್ತಿನಲ್ಲಿ ಮನೀಷ್ ಕೌಶಿಕ್ ಜಯ ಸಾಧಿಸುವುದರೊಂದಿಗೆ ಭಾರತದ 9ನೇ ಬಾಕ್ಸರ್ ಟೋಕಿಯೊ ಒಲಿಂಪಿಕ್ಸ್ ಅರ್ಹತೆ ಸಂಪಾದಿಸಿದಂತಾಯಿತು. 2012 ಲಂಡನ್ ಒಲಿಂಪಿಕ್ಸ್ ನಲ್ಲಿ 8 ಮಂದಿ ಬಾಕ್ಸರ್ಗಳು ಕಣಕ್ಕಿಳಿದದ್ದು ಭಾರತದ ದಾಖಲೆಯಾಗಿತ್ತು.
ಮನೀಷ್ ಕೌಶಿಕ್ 2ನೇ ಶ್ರೇಯಾಂಕದ ಬಾಕ್ಸರ್, ಕಾಮನ್ವೆಲ್ತ್ ಗೇಮ್ಸ್ ಚಾಂಪಿಯನ್ ಹ್ಯಾರಿಸನ್ ಗಾರ್ಸಿಡೆ ಅವರನ್ನು 4-1 ಅಂತರದಿಂದ ಮಣಿಸಿ ಅರ್ಹತೆ ಪಡೆದರು. ಇವರಿಬ್ಬರೂ ಕ್ವಾರ್ಟರ್ ಫೈನಲ್ನಲ್ಲಿ ಪರಾಭವಗೊಂಡಿದ್ದರು. ಇವರ ಬುಧವಾರದ ಬಾಕ್ಸ್-ಆಫ್ ಪಂದ್ಯ 2018ರ ಕಾಮನ್ವೆಲ್ತ್ ಗೇಮ್ಸ್ನ ಪುನರಾವರ್ತನೆ ಆಗಿತ್ತು. ಅಲ್ಲಿ ಮನೀಷ್ ಕೌಶಿಕ್ ಪರಾಭವಗೊಂಡಿದ್ದರು.
ಫೈನಲ್ ವೇಳೆ ವಿಕಾಸ್ ಗಾಯಾಳು
ಇದಕ್ಕೂ ಮೊದಲು ಗಾಯಾಳಾಗಿ 69 ಕೆಜಿ ಫೈನಲ್ನಿಂದ ಹಿಂದೆ ಸರಿದ ವಿಕಾಸ್ ಕೃಷ್ಣನ್ ಬೆಳ್ಳಿ ಪದಕಕ್ಕೆ ತೃಪ್ತಿಪಡಬೇಕಾಯಿತು. ಆತಿಥೇಯ ಜೋರ್ಡಾನ್ನ ಜೆಯಾದ್ ಎಹ್ಸಾಸ್ ಚಿನ್ನದ ಪದಕ ಗೆದ್ದರು.
ವಿಕಾಸ್ ಕೃಷ್ಣನ್ ಸೆಮಿಫೈನಲ್ನಲ್ಲಿ ಕಝಾಕ್ಸ್ಥಾನದ ದ್ವಿತೀಯ ಶ್ರೇಯಾಂಕದ ಅಬ್ಲೇಖಾನ್ ಝುಸುಪೋವ್ ಅವರನ್ನು ಕೆಡವಿದ್ದರು. ಈ ಪಂದ್ಯದ ವೇಳೆ ವಿಕಾಸ್ ಕಣ್ಣಿನ ಕೆಳಭಾಗಕ್ಕೆ ಗಾಯವಾಗಿತ್ತು. ಆದರೂ ಎದುರಾಳಿಯನ್ನು ತಮ್ಮ ತಂತ್ರಗಾರಿಕೆಯಿಂದ ಸೋಲಿಸುವಲ್ಲಿ ಯಶಸ್ವಿಯಾಗಿದ್ದರು.
ಸೆಮಿಫೈನಲ್ ಬಳಿಕ ವಿಕಾಸ್ ಅವರ ಕಣ್ಣಿನ ಕೆಳಭಾಗದ ಗಾಯಕ್ಕೆ ಹೊಲಿಗೆ ಹಾಕಲಾಗಿತ್ತು. ಆದರೆ ಈ ಗಾಯದಿಂದ ಸಂಪೂರ್ಣ ಗುಣಮುಖವಾಗದ ಕಾರಣ, ವೈದ್ಯರ ಸಲಹೆ ಮೇರೆಗೆ ವಿಕಾಸ್ ಫೈನಲ್ನಿಂದ ಹಿಂದೆ ಸರಿಯಬೇಕಾಯಿತು.
ಟೋಕಿಯೋಗೆ ತೆರಳುವವರು…
ಟೋಕಿಯೊ ಒಲಿಂಪಿಕ್ಸ್ಗೆ ತೆರಳುವ ಭಾರತದ ಬಾಕ್ಸರ್ಗಳ ಯಾದಿ ಇಲ್ಲಿದೆ. ಎಂ.ಸಿ. ಮೇರಿ ಕೋಮ್ (51 ಕೆಜಿ), ಸಿಮ್ರನ್ಜಿತ್ ಕೌರ್ (60 ಕೆಜಿ), ಲೊವಿÉನಾ ಬೋರ್ಗೊಹೈನ್ (69 ಕೆಜಿ), ಪೂಜಾ ರಾಣಿ (75 ಕೆಜಿ), ಅಮಿತ್ ಪಂಘಲ್ (52 ಕೆಜಿ), ವಿಕಾಸ್ ಕೃಷ್ಣನ್ (69 ಕೆಜಿ), ಆಶಿಷ್ ಕುಮಾರ್ (75 ಕೆಜಿ), ಸತೀಶ್ ಕುಮಾರ್ (+91 ಕೆಜಿ) ಮತ್ತು ಮನೀಷ್ ಕೌಶಿಕ್ (63 ಕೆಜಿ).
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL 2025-27: ಮುಂದಿನ ಮೂರು ಐಪಿಎಲ್ ಸೀಸನ್ ನ ದಿನಾಂಕ ಪ್ರಕಟಿಸಿದ ಬಿಸಿಸಿಐ
Perth Test: ಟೀಂ ಇಂಡಿಯಾಗಿಲ್ಲ ಶುಭಾರಂಭ: ಮೊದಲ ಸೆಶನ್ ನಲ್ಲೇ ಪರದಾಡಿದ ಬ್ಯಾಟರ್ ಗಳು
Border-Gavaskar Test series ಇಂದಿನಿಂದ: ಹೋರಾಟಕ್ಕೆ ಭಾರತ-ಆಸ್ಟ್ರೇಲಿಯ ಸಿದ್ಧ
Eden Gardens; ‘ಬಿ’ ಬ್ಲಾಕ್ಗೆ ಜೂಲನ್ ಗೋಸ್ವಾಮಿ ಹೆಸರಿಡಲು ನಿರ್ಧಾರ
PCB; ಚಾಂಪಿಯನ್ಸ್ ಟ್ರೋಫಿಗೆ ಅಧಿಕಾರಿಯ ನೇಮಕ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.