ರೂಪಾಂತರಿ ಭೀತಿ ನಡುವೆ “ಎ’ ತಂಡಗಳ ಟೆಸ್ಟ್
Team Udayavani, Nov 29, 2021, 11:23 PM IST
ಬ್ಲೋಮ್‌ಫಾಂಟೇನ್: ದಕ್ಷಿಣ ಆಫ್ರಿಕಾದಲ್ಲೇ ಹುಟ್ಟಿಕೊಂಡಿತೆನ್ನಲಾದ ಒಮಿಕ್ರಾನ್ ವೈರಸ್ ಭೀತಿಯಿಂದಾಗಿ ಇಲ್ಲಿ ಹಾಗೂ ಜಿಂಬಾಬ್ವೆಯಲ್ಲಿ ನಡೆಯಬೇಕಿದ್ದ ಕೆಲವು ಕ್ರೀಡಾಕೂಟಗಳನ್ನು ಈಗಾಗಲೇ ರದ್ದುಗೊಳಿಸಲಾಗಿದೆ.
ಆದರೆ ದಕ್ಷಿಣ ಆಫ್ರಿಕಾ “ಎ’ ಮತ್ತು ಪ್ರವಾಸಿ ಭಾರತ “ಎ’ ತಂಡಗಳ ನಡುವಿನ ದ್ವಿತೀಯ ಚತುರ್ದಿನ ಅನಧಿಕೃತ ಟೆಸ್ಟ್ ಪಂದ್ಯಕ್ಕೆ ಇದರಿಂದ ಯಾವುದೇ ಆತಂಕ ಎದುರಾದಂತಿಲ್ಲ. ಇದು ನಿಗದಿಯಂತೆ ಮಂಗಳವಾರ ಆರಂಭವಾಗಲಿದೆ.
ಭಾರತ “ಎ’ ತಂಡ ಬ್ಲೋಮ್‌ಫಾಂಟೇನ್‌ನಲ್ಲಿ ಜೈವಿಕ ಸುರಕ್ಷಾ ವಲಯದಲ್ಲಿರುವುದರಿಂದ ಟೆಸ್ಟ್ ಸರಣಿ ವೇಳಾಪಟ್ಟಿಯಂತೆ ಮುಂದುವರಿಯುವ ಸಾಧ್ಯತೆ ಇದೆ.
ಆದರೆ ಟೆಸ್ಟ್ ಸರಣಿ ಬಳಿಕ 3 ಏಕದಿನ, 4 ಟಿ20 ಪಂದ್ಯಗಳನ್ನು ಆಡಬೇಕಿದೆ. ಇವುಗಳ ತಾಣಗಳೆಂದರೆ ಜೊಹಾನ್ಸ್ ಬರ್ಗ್, ಸೆಂಚುರಿಯನ್, ಪಾರ್ಲ್ ಮತ್ತು ಕೇಪ್‌ಟೌನ್. ಆದರೆ ಇಲ್ಲಿನ ಪರಿಸ್ಥಿತಿ ಯನ್ನು ಅವಲೋಕಿಸಿದ ಬಳಿಕ ಬಿಸಿಸಿಐ ಮುಂದಿನ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇದೆ.
ಇದನ್ನೂ ಓದಿ:ಟೀಮ್ ಇಂಡಿಯಾದ ಓಪನರ್ ಕೆ.ಎಲ್. ರಾಹುಲ್ ತುಳು ಕಮೆಂಟ್
ಬ್ಯಾಟಿಂಗ್ ಟ್ರ್ಯಾಕ್
ಮೊದಲ ಪಂದ್ಯ ಮಳೆಯ ಹೊಡೆತಕ್ಕೆ ಸಿಲುಕಿತ್ತು. ಆತಿಥೇಯ ತಂಡ 7 ವಿಕೆಟಿಗೆ 509 ರನ್ ಪೇರಿಸಿದರೆ, ಜವಾಬು ನೀಡಿದ ಭಾರತ “ಎ’ 4 ವಿಕೆಟಿಗೆ 308 ರನ್ ಮಾಡಿತ್ತು. ಅಭಿಮನ್ಯು ಈಶ್ವರನ್ 103, ನಾಯಕ ಪ್ರಿಯಾಂಕ್ ಪಾಂಚಾಲ್ 96 ಬಾರಿಸಿ ಮಿಂಚಿದ್ದರು. ಪೃಥ್ವಿ ಶಾ 48 ರನ್ ಮಾಡಿದ್ದರು. ನ್ಯೂಜಿಲ್ಯಾಂಡ್ ಎದುರಿನ ಟೆಸ್ಟ್ ಸರಣಿಗೆ ಆಯ್ಕೆಯಾಗದ ಹನುಮ ವಿಹಾರಿ ಪಾಲಿಗೆ ಇದು ಮಹತ್ವದ ಸರಣಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijay Hazare; ವಾಸುಕಿ,ಗೋಪಾಲ್ ಬೊಂಬಾಟ್ ಬೌಲಿಂಗ್; ಸೌರಾಷ್ಟ್ರ ವಿರುದ್ದ ಗೆದ್ದ ಕರ್ನಾಟಕ
Test Cricket; ರೋಹಿತ್ ಆಯ್ತು, ಈಗ ವಿರಾಟ್..: ಬಿಸಿಸಿಐ ಕಳಿಸಿದ ʼಆʼ ಸಂದೇಶದಲ್ಲಿ ಏನಿದೆ?
Sydney Test; ಬದಲಾದ ನಾಯಕ; ಮುಂದುವರಿದ ಬ್ಯಾಟಿಂಗ್ ಪರದಾಟ
Test; ಸಿಡ್ನಿ ಸಂಘರ್ಷಕ್ಕೆ ಭಾರತ ಸಿದ್ಧ :ರೋಹಿತ್-ಗಂಭೀರ್ ಮನಸ್ತಾಪ ತೀವ್ರ?
PCB;ಕರಾಚಿ ಕ್ರೀಡಾಂಗಣದ ನವೀಕರಣ ಕಾರ್ಯ ಪೂರ್ಣಕ್ಕೆ ಹರಸಾಹಸ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.