ಇಂಗ್ಲೆಂಡ್ ನಲ್ಲಿ ಟೀಂ ಇಂಡಿಯಾಗೆ ಕೋವಿಡ್ ಕಾಟ: ಓರ್ವ ಆಟಗಾರನಿಗೆ ಪಾಸಿಟಿವ್
Team Udayavani, Jul 15, 2021, 8:17 AM IST
ಲಂಡನ್: ಟೆಸ್ಟ್ ಸರಣಿಗಾಗಿ ಇಂಗ್ಲೆಂಡ್ ನಲ್ಲಿರುವ ಭಾರತೀಯ ಆಟಗಾರರಿಗೆ ಇದೀಗ ಕೋವಿಡ್ ಭೀತಿ ಎದುರಾಗಿದೆ. ಭಾರತ ತಂಡದ ಓರ್ವ ಆಟಗಾರನಿಗೆ ಇದೀಗ ಕೋವಿಡ್ ಪಾಸಿಟಿವ್ ಆಗಿದೆ ಎಂದು ಕ್ರಿಕ್ ಬಜ್ ವರದಿ ಮಾಡಿದೆ.
ಗುರುವಾರ ಮಧ್ಯಾಹ್ನ ಭಾರತ ತಂಡ ಡರ್ಹಮ್ ನಲ್ಲಿ ಒಟ್ಟು ಸೇರಲಿದೆ. ಕೌಂಟಿ ಅಭ್ಯಾಸ ಪಂದ್ಯಕ್ಕಾಗಿ ಅಲ್ಲಿ ಸಿದ್ದತೆ ನಡೆಸಲಿದೆ. ಆದರೆ ಕೋವಿಡ್ ಪಾಸಿಟಿವ್ ಆದ ಆಟಗಾರ ಡರ್ಹಮ್ ಗೆ ಪ್ರಯಾಣ ಮಾಡುವುದಿಲ್ಲ. ಜುಲೈ 20ರಂದು ಕೌಂಟಿ ಚಾಂಪಿಯನ್ ಶಿಪ್ ಇಲೆವೆನ್ ವಿರುದ್ಧ ಭಾರತ ತಂಡ ಒಂದು ಅಭ್ಯಾಸ ಪಂದ್ಯವಾಡಲಿದೆ.
ಇದನ್ನೂ ಓದಿ:ಇಂಗ್ಲೆಂಡ್ ವಿರುದ್ಧ ಕೊನೆಯ ಪಂದ್ಯದಲ್ಲಿ ಎಡವಿ ಸರಣಿ ಸೋತ ವನಿತೆಯರು
ಇಂಗ್ಲೆಂಡ್ ರಾಷ್ಟ್ರೀಯ ಆರೋಗ್ಯ ಸರ್ವಿಸ್ ಭಾರತೀಯ ಆಟಗಾರರ ಕೋವಿಡ್ ಪರೀಕ್ಷೆ ನಡೆಸುತ್ತಿದೆ. ಯಾವ ಆಟಗಾರ ಅಥವಾ ಎಷ್ಟು ಮಂದಿ ಆಟಗಾರರು ಕೋವಿಡ್ ಸೋಂಕಿಗೆ ಒಳಗಾಗಿದ್ದಾರೆ ಎಂದು ಅದು ಇನ್ನಷ್ಟೇ ವರದಿ ನೀಡಬೇಕಿದೆ.
ಜು.10ರಂದು ಮೊದಲ ಕೋವಿಡ್ ಪರೀಕ್ಷೆ ನಡೆಸಲಾಗಿತ್ತು. ಎರಡನೇ ಪರೀಕ್ಷೆಯನ್ನು ಜು.14ರಂದು ನಡೆಸಲಾಗಿತ್ತು. ಆಟಗಾರನಿಗೆ ಮೊದಲ ಪರೀಕ್ಷೆಯಲ್ಲಿ ಕೋವಿಡ್ ಸೋಂಕು ದೃಢವಾಗಿದೆ ಎನ್ನಲಾಗಿದೆ. ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಬಳಿಕ ಆಟಗಾರ ಜನಸಂದಣಿ ಇರುವ ಜಾಗದಲ್ಲಿ ತಿರುಗಾಡಿದ್ದ ಎನ್ನಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.