ರಾಜ್ಯ ಒಲಿಂಪಿಕ್ಸ್‌ಗೆ ಅದ್ದೂರಿ ತೆರೆ
Team Udayavani, Feb 11, 2017, 3:45 AM IST
ಧಾರವಾಡ: ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿ ಕಳೆದ 8 ದಿನಗಳಿಂದ ನಡೆಯುತ್ತಿದ್ದ ರಾಜ್ಯ ಒಲಿಂಪಿಕ್ಸ್‌ಗೆ ಅದ್ದೂರಿ ತೆರೆಬಿದ್ದಿದೆ. ಪುರುಷರ ವಿಭಾಗದಲ್ಲಿ ವಿಶ್ವಂಬರ ಮತ್ತು ಮಹಿಳಾ ವಿಭಾಗದಲ್ಲಿ ಎಚ್. ಎಂ.ಜ್ಯೋತಿ ಶ್ರೇಷ್ಠ ಅಥ್ಲೀಟ್ ಆಗಿ ಹೊರಹೊಮ್ಮಿದ್ದಾರೆ. ಇಲ್ಲಿನ ಆರ್.ಎನ್.ಶೆಟ್ಟಿ ಕ್ರೀಡಾಂಗಣದಲ್ಲಿ ನಡೆದ 1500 ಮೀ. ಓಟದಲ್ಲಿ ಬೆಂಗಳೂರಿನ ಪರ ಸ್ಪರ್ಧಿಸಿರುವ, ಬೆಳಗಾವಿಯ ಯುವಕ ವಿಶ್ವಂಬರ 3 ನಿಮಿಷ 45.4 ಸೆಕೆಂಡ್‌ನಲ್ಲಿ ಗುರಿಮುಟ್ಟಿ ರಾಜ್ಯ ದಾಖಲೆ ನಿರ್ಮಿಸಿದರು.
ಇದಕ್ಕೂ ಮುನ್ನ 1986ರಲ್ಲಿ ಸತ್ಯನಾರಾಯಣ 3 ನಿಮಿಷ 51.1 ಸೆಕೆಂಡ್‌ನಲ್ಲಿ ಗುರಿಮುಟ್ಟಿರುವುದು ದಾಖಲೆಯಾಗಿತ್ತು. ಹೀಗಾಗಿ 30 ವರ್ಷದ ಹಿಂದಿನ ದಾಖಲೆಯನ್ನು ಮುರಿದಂತಾಗಿದೆ. ಕೂಟದಲ್ಲಿ ಇದಕ್ಕೂ ಮುನ್ನ 800 ಮೀ. ಓಟದಲ್ಲಿ ವಿಶ್ವಂಬರ ರಾಜ್ಯ ದಾಖಲೆ ನಿರ್ಮಿಸಿ ಚಿನ್ನ ಗೆದ್ದಿದ್ದರು. ಇದು ಕೂಟದಲ್ಲಿ ವಿಶ್ವಂಬರನಿಗೆ ಎರಡನೇ ದಾಖಲೆಯಾಗಿದೆ.
ಜ್ಯೋತಿಗೆ ಎರಡನೇ ಚಿನ್ನ:
ಅಂತಾರಾಷ್ಟ್ರೀಯ ಪದಕ ವಿಜೇತ ಎಚ್.ಎಂ.ಜ್ಯೋತಿ ಮಹಿಳೆಯರ 100 ಮೀ. ಓಟವನ್ನು 11.7 ಸೆಕೆಂಡ್ ನಲ್ಲಿ ಗುರಿ ಮುಟ್ಟಿ ಚಿನ್ನದ ಪದಕ ಪಡೆದಿದ್ದಾರೆ. ಇದು ಕೂಟದಲ್ಲಿ ಜ್ಯೋತಿಗೆ ಸಿಕ್ಕ ಎರಡನೇ ಚಿನ್ನದ ಪದಕವಾಗಿದೆ. ಇದಕ್ಕೂ ಮುನ್ನ 200 ಮೀ. ಓಟದಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ.
ಹ್ಯಾಮರ್ ಥ್ರೋದಲ್ಲಿ ಗವಿ ಸ್ವಾಮಿ, ಹರ್ಷಿತಾಗೆ ಚಿನ್ನ:
ದಕ್ಷಿಣ ಕನ್ನಡದ ಗವಿಸ್ವಾಮಿ ಚಿನ್ನ, ಬೆಂಗಳೂರಿನ ಸುರೇಂದ್ರ ಕುಮಾರ್ ಬೆಳ್ಳಿ, ಬೆಂಗಳೂರಿನ ಕೆ.ಎಸ್. ದಿನೇಶ್ ಕಂಚಿನ ಪದಕ ಗೆದ್ದಿದ್ದಾರೆ. ಮಹಿಳೆ ಯರ ವಿಭಾಗದಲ್ಲಿ ಮೈಸೂರಿನ ವಿ.ಆರ್.ಹರ್ಷಿತಾ ಚಿನ್ನ, ದಕ್ಷಿಣ ಕನ್ನಡದ ಅಮ್ರಿàನ್ ಬೆಳ್ಳಿ, ದಕ್ಷಿಣ ಕನ್ನಡದ ಅರ್ಚನಾ ಜಯರಾಜ್ ಕಂಚಿನ ಪದಕ ಗೆದ್ದಿದ್ದಾರೆ.
400 ಮೀ. ಹರ್ಡಲ್ಸ್‌ನಲ್ಲಿ ಅಪ್ಸನಾಗೆ ಚಿನ್ನ: ಮಹಿಳೆಯರ ವಿಭಾಗದ 400 ಮೀಟರ್ ಹರ್ಡಲ್ಸ್ ಸ್ಪರ್ಧೆಯಲ್ಲಿ ಮೈಸೂರಿನ ಅಪ್ಸನಾ ಬೇಗಂ ಚಿನ್ನ, ಬೆಂಗಳೂರಿನ ಎಂ.ಬಿ. ಬಿಬಿಷಾ ಬೆಳ್ಳಿ, ದಕ್ಷಿಣ ಕನ್ನಡದ ಎಂ.ಸಿಮೋನ್ ಕಂಚಿನ ಪದಕ ಗೆದ್ದಿದ್ದಾರೆ.
ಫುಟ್‌ಬಾಲ್: ಬೆಳಗಾವಿಗೆ ಪ್ರಶಸ್ತಿ
ಸಂಘಟಿತ ಪ್ರದರ್ಶನ ನೀಡಿದ ಬೆಳಗಾವಿ ತಂಡ ರಾಜ್ಯ ಒಲಿಂಪಿಕ್ಸ್‌ನ ಫುಟ್‌ಬಾಲ್‌ನಲ್ಲಿ ಧಾರವಾಡ ತಂಡವನ್ನು 2-1 ಗೋಲುಗಳಿಂದ ಸೋಲಿಸಿ ಚಾಂಪಿಯನ್‌ಶಿಪ್ ಪಡೆದಿದೆ. ಕಂಚಿನ ಪದಕಕ್ಕಾಗಿ ನಡೆದ ಮತ್ತೂಂದು ಪಂದ್ಯದಲ್ಲಿ ಬೆಂಗಳೂರು ತಂಡ 4-1 ಗೋಲುಗಳಿಂದ ಮಂಗಳೂರು ತಂಡವನ್ನು ಸೋಲಿಸಿತು.
ಮುಂದಿನ ಒಲಿಂಪಿಕ್ಸ್ ಕರಾವಳಿಯಲ್ಲಿ
ಮುಂದಿನ ರಾಜ್ಯ ಒಲಿಂಪಿಕ್ಸ್ ಕ್ರೀಡಾಕೂಟ ಉಡುಪಿ ಅಥವಾ ಮಂಗಳೂರಿನಲ್ಲಿ 4ನೇ ಒಲಿಂಪಿಕ್ಸ್ ಕ್ರೀಡಾಕೂಟ ನಡೆಯಲಿದೆ ಎಂದು ಕೆಒಎ ಅಧ್ಯಕ್ಷ ಗೋವಿಂದ ರಾಜ್ ತಿಳಿಸಿದರು. ಕೂಟವನ್ನು ಆಯೋಜಿಸುವ ಕುರಿತು ಈಗಾಗಲೇ ಮುಖ್ಯಮಂತ್ರಿಗಳ ಜೊತೆ ಮಾತ ನಾಡಿದ್ದು,ಅವರು ಒಪ್ಪಿಕೊಂಡಿದ್ದಾರೆ ಎಂದರು.
– ಮಂಜು ಮಳಗುಳಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.