ಒಂದೇ ಹುದ್ದೆಗೆ ಅವಕಾಶ: ಬಿಸಿಸಿಐ
Team Udayavani, Jun 22, 2019, 5:37 AM IST
ಹೊಸದಿಲ್ಲಿ: ಐಪಿಎಲ್, ಕ್ರಿಕೆಟ್ ಸಲಹಾ ಸಮಿತಿ, ಕೋಚಿಂಗ್ ಹುದ್ದೆ ಅಥವಾ ಟೀವಿ ಕಾಮೆಂಟ್ರಿ… ಎಲ್ಲೇ ಕೆಲಸ ನಿರ್ವಹಿಸಿ, ಆದರೆ ಯಾವುದಾದರೂ ಒಂದು ಕ್ಷೇತ್ರ ಮಾತ್ರ ಆಯ್ಕೆ ಮಾಡಿಕೊಳ್ಳಬೇಕು, ಒಬ್ಬ ವ್ಯಕ್ತಿ ಏಕಕಾಲಕ್ಕೆ ಒಂದಕ್ಕಿಂತ ಹೆಚ್ಚು ಹುದ್ದೆ ಹೊಂದುವಂತಿಲ್ಲ ಎಂದು ಬಿಸಿಸಿಐ ನೀತಿ ಅಧಿಕಾರಿ, ನ್ಯಾಯಮೂರ್ತಿ ಡಿ.ಕೆ. ಜೈನ್ ತಿಳಿಸಿದ್ದಾರೆ.
ಈ ಮೂಲಕ ಮುಂದಿನ ದಿನಗಳಲ್ಲಿ ಲೋಧಾ ಸಮಿತಿ ಶಿಫಾರಸು ಕಟ್ಟುನಿಟ್ಟಿನಿಂದ ಜಾರಿಯಾಗಲಿದೆ ಎನ್ನುವ ಸೂಚನೆ ರವಾನಿಸಿದ್ದಾರೆ.
“ಸುಪ್ರೀಂ ಕೋರ್ಟ್ ರಚಿಸಿದ ಬಿಸಿಸಿಐ ಸಾಂವಿಧಾನಿಕ ರಚನೆ ಪ್ರಕಾರವೇ ನಿಯಮ ಜಾರಿಯಾ ಗಲಿದೆ. ಲೋಧಾ ಶಿಫಾರಸು ಕಟ್ಟು ನಿಟ್ಟನಿಂದ ಜಾರಿಗೊಳಿಸುವುದೇ ಗುರಿ’ ಎಂದು ಜೈನ್ ತಿಳಿಸಿದರು.
ಹಿತಾಸಕ್ತಿ ಸಂಘರ್ಷ
ಸಚಿನ್ ತೆಂಡುಲ್ಕರ್ ಸಿಎಸಿ ಹುದ್ದೆಯಿಂದ ಹೊರಬಂದಿದ್ದಾರೆ. ಹೀಗಾಗಿ ಹಿತಾಸಕ್ತಿ ಸಂಘರ್ಷದ ವ್ಯಾಪ್ತಿಗೆ ಒಳಪಡುವುದಿಲ್ಲವಾದರೂ ವಿಶ್ವಕಪ್‌ನಲ್ಲಿ ಟೀವಿ ಕಾಮೆಂಟ್ರಿ ಪ್ಯಾನಲ್‌ನಲ್ಲಿ ಇರುವುದರಿಂದ ಇನ್ನೂ° ಗೊಂದಲ ಮುಂದುವರಿದಿದೆ. ಸೌರವ್ ಗಂಗೂಲಿ, ಲಕ್ಷ್ಮಣ್ ಒಂದಕ್ಕಿಂತ ಹೆಚ್ಚು ಹುದ್ದೆ ಹೊಂದಿ ಹಿತಾಸಕ್ತಿ ಸಂಘರ್ಷಕ್ಕೆ ಒಳಪಟ್ಟಿದ್ದಾರೆ. ಇವರು ಐಪಿಎಲ್ ಅಥವಾ ಸಿಎಸಿ, ಯಾವುದಾದರೂ ಒಂದನ್ನು ಮಾತ್ರ ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.