5 ಕಿ.ಮೀ. ಓಟ ಜೋಶುವ ಶೆಪ್ಟೆಗೆ ವಿಶ್ವದಾಖಲೆ
Team Udayavani, Feb 17, 2020, 6:15 AM IST
ಮೊನಾಕೊ: ಉಗಾಂಡದ ಜೋಶುವ ಶೆಪ್ಟೆಗೆ 5 ಕಿ.ಮೀ. ಓಟದಲ್ಲಿ ನೂತನ ವಿಶ್ವದಾಖಲೆ ಬರೆದಿದ್ದಾರೆ. ರವಿವಾರ ಮೊನಾಕೊದಲ್ಲಿ ನಡೆದ ಈ ಸ್ಪರ್ಧೆಯನ್ನು ಅವರು 12 ನಿಮಿಷ, 51 ಸೆಕೆಂಡ್‌ಗಳಲ್ಲಿ ಕ್ರಮಿಸಿ ಈ ಸಾಧನೆಗೈದರು.
10 ಸಾವಿರ ಮೀ. ಓಟದಲ್ಲಿ ವಿಶ್ವದಾಖಲೆ ಹೊಂದಿರುವ ಶೆಪ್ಟೆಗೆ, ಕೀನ್ಯದ ರೋನೆಕ್ಸ್ ಕಿಪ್ರುಟೊ ಅವರ ದಾಖಲೆಯನ್ನು ಮುರಿದರು. ಕಳೆದ ತಿಂಗಳಷ್ಟೇ ವೆಲೆನ್ಸಿಯಾ ಕೂಟದಲ್ಲಿ ಕಿಪ್ರುಟೊ 13 ನಿಮಿಷ, 18 ಸೆಕೆಂಡ್‌ಗಳಲ್ಲಿ ಈ ದೂರವನ್ನು ಪೂರೈಸಿ ವಿಶ್ವದಾಖಲೆ ಸ್ಥಾಪಿಸಿದ್ದರು.
“ನಿಜಕ್ಕೂ ಇದು ಮಹಾನ್ ಸಾಧನೆ. 13 ನಿಮಿಷಗಳ ಒಳಗೆ ಈ ದೂರವನ್ನು ಪೂರ್ತಿಗೊಳಿಸಬೇಕು ಎಂದು ನಿರ್ಧರಿಸಿದ್ದೆ. ಆದರೆ ಇದಕ್ಕೂ ಮುಂಚಿತವಾಗಿ ಗುರಿ ಮುಟ್ಟಿದೆ. ಒಲಿಂಪಿಕ್ಸ್‌ನಲ್ಲಿ ಇಂಥದೇ ಸಾಧನೆ ಮಾಡಬೇಕಿದೆ’ ಎಂದು 23ರ ಹರೆಯದ ಶೆಪ್ಟೆಗೆ ಹೇಳಿದರು.
2016ರ ರಿಯೋ ಒಲಿಂಪಿಕ್ಸ್‌ನಲ್ಲಿ 5 ಸಾವಿರ ಮೀ. ಹಾಗೂ 10 ಸಾವಿರ ಮೀ. ಓಟಗಳೆರಡರಲ್ಲೂ ಪ್ರತಿನಿಧಿಸಿದ್ದ ಜೋಶುವ ಶೆಪ್ಟೆಗೆ ಕ್ರಮವಾಗಿ 8ನೇ ಹಾಗೂ 6ನೇ ಸ್ಥಾನ ಪಡೆದಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.