ಬೆಂಗಳೂರು ಔಟ್; ರಾಜಸ್ಥಾನ್ ಪ್ಲೇ ಆಫ್ ಪ್ರವೇಶ ಜೀವಂತ
Team Udayavani, May 20, 2018, 11:56 AM IST
ಜೈಪುರ: ಉತ್ಕೃಷ್ಟ ಮಟ್ಟದ ಬೌಲಿಂಗ್ ದಾಳಿ ಸಂಘಟಿಸಿದ ರಾಜಸ್ಥಾನ್ ರಾಯಲ್ಸ್ ತಂಡವು ಶನಿವಾರದ ಮೊದಲ ಐಪಿಎಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ ಬೆಂಗಳೂರು ತಂಡವನ್ನು 30 ರನ್ನುಗಳಿಂದ ಸೋಲಿಸಿದೆ.
ಇದು ಎರಡೂ ತಂಡಗಳಿಗೆ ಕೊನೆಯ ಲೀಗ್ ಪಂದ್ಯವಾಗಿದ್ದು ಗೆಲುವು ಅನಿವಾರ್ಯವಾಗಿತ್ತು. ಸೋತ ಆರ್‌ಸಿಬಿ ತಂಡವು ಕೂಟದಿಂದ ಹೊರಬಿದ್ದಿದೆ. ಗೆಲುವು ಸಾಧಿಸಿದ ರಾಜಸ್ಥಾನ್ ತಂಡವು ಪ್ಲೇ ಆಫ್ಗೆ ತೇರ್ಗಡೆಯಾಗುವ ಅವಕಾಶವನ್ನು ಜೀವಂತವಿರಿಸಿಕೊಂಡಿದೆ. ಲೀಗ್‌ನಲ್ಲಿ ಇನ್ನು ಮೂರು ಪಂದ್ಯಗಳು ಬಾಕಿ ಉಳಿದಿದ್ದು ಈ ಪಂದ್ಯಗಳ ಫಲಿತಾಂಶದ ಬಳಿಕ ಪ್ಲೇ ಆಫ್ಗೆ ತೇರ್ಗಡೆಯಾಗುವ ಎರಡು ತಂಡಗಳು ಯಾವುವು ಎಂಬುದು ನಿರ್ಧಾರವಾಗಲಿದೆ.
ಮೊದಲು ಬ್ಯಾಟಿಂಗ್ ನಡೆಸಿದ ರಾಜಸ್ಥಾನ್ ರಾಯಲ್ಸ್ ತಂಡವು ಆರಂಭಿಕ ರಾಹುಲ್ ತ್ರಿಪಾಠಿ ಅವರ ಆಕರ್ಷಕ ಆಟದಿಂದಾಗಿ 5 ವಿಕೆಟಿಗೆ 164 ರನ್ನುಗಳ ಸಾಧಾರಣ ಮೊತ್ತ ಪೇರಿಸಿತು. ಇದಕ್ಕೆ$ಉತ್ತರವಾಗಿ ಘೋರ ಕುಸಿತಕ್ಕೆ ಒಳಗಾದ ಆರ್‌ಸಿ ಬೆಂಗಳೂರು ತಂಡವು 19.2 ಓವರ್‌ಗಳಲ್ಲಿ 134 ರನ್ನಿಗೆ ಆಲೌಟಾಗಿ ನಿರಾಶೆ ಅನುಭವಿಸಿತು.
ತ್ರಿಪಾಠಿ ಭರ್ಜರಿ ಆಟ
ಆರಂಭಿಕ ತ್ರಿಪಾಠಿ ಅವರ ಭರ್ಜರಿ ಆಟದಿಂದಾಗಿ ರಾಜಸ್ಥಾನ್ ಸಾಧಾರಣ ಮೊತ್ತ ಪೇರಿಸುವಂತಾಯಿತು. ಜೋಫ್ರಾ ಆರ್ಚರ್ ಅವರನ್ನು ಬೇಗನೇ ಕಳೆದುಕೊಂಡ ಬಳಿಕ ತ್ರಿಪಾಠಿ ಮತ್ತು ನಾಯಕ ಅಜಿಂಕ್ಯ ರಹಾನೆ ತಂಡವನ್ನು ಆಧರಿಸುವ ಪ್ರಯತ್ನ ನಡೆಸಿದರು. ದ್ವಿತೀಯ ವಿಕೆಟಿಗೆ 99 ರನ್ನುಗಳ ಜತೆ ಯಾಟ ನಡೆಸಿದರು. ಆದರೆ ಇಬ್ಬರೂ ನಿಧಾನವಾಗಿ ಆಡಿದ್ದರಿಂದ ತಂಡ ಉತ್ತಮ ಮೊತ್ತ ಪೇರಿಸಲು ಸಾಧ್ಯವಾಗಲಿಲ್ಲ.
ರಹಾನೆ ಮತ್ತು ಸ್ಯಾಮ್ಸನ್ ಅವರನ್ನು ಸತತ ಎರಡು ಎಸೆತಗಳಲ್ಲಿ ಉಮೇಶ್ ಯಾದವ್ ಉರುಳಿಸಿದಾಗ ಬೆಂಗಳೂರು ಮೇಲುಗೈ ಸಾಧಿಸಬಹುದೆಂದು ಭಾವಿಸ ಲಾಗಿತ್ತು. ಆದರೆ ತ್ರಿಪಾಠಿ ಸಹಿತ ಕ್ಲಾಸೆನ್ ಮತ್ತು ಗೌತಮ್ ಕೊನೆ ಹಂತದಲ್ಲಿ ಸಿಡಿದ ಕಾರಣ ತಂಡದ ಮೊತ್ತ 150ರ ಗಡಿ ದಾಟುವಂತಾಯಿತು. ತಾಳ್ಮೆಯ ಆಟ ವಾಡಿದ ತ್ರಿಪಾಠಿ ಪೂರ್ತಿ 20 ಓವರ್ ಆಡಿ ಅಜೇಯರಾಗಿ ಉಳಿದರು. 58 ಎಸೆತ ಎದುರಿಸಿದ ಅವರು 5 ಬೌಂಡರಿ ಮತ್ತು 3 ಸಿಕ್ಸರ್ ನೆರವಿನಿಂದ 80 ರನ್ ಹೊಡೆದರು.
ಬಿಗು ದಾಳಿ ಸಂಘಟಿಸಿದ ಉಮೇಶ್ ಯಾದವ್ 25 ರನ್ನಿಗೆ 3 ವಿಕೆಟ್ ಕಿತ್ತರು.ಗೆಲ್ಲಲು 165 ರನ್ ತೆಗೆಯುವ ಅವಕಾಶ ಪಡೆದ ಬೆಂಗಳೂರು ತಂಡವು ನಾಯಕ ಕೊಹ್ಲಿ ಅವರನ್ನು ಬೇಗನೇ ಕಳೆದುಕೊಂಡಿತು. ಕೊಹ್ಲಿ 9 ಎಸೆತ ಎದುರಿಸಿ 4 ರನ್ ಹೊಡೆದು ಗೌತಮ್‌ಗೆ ಕ್ಲೀನ್‌ಬೌಲ್ಡ್ ಆದರು. ಆಬಳಿಕ ಪಾರ್ಥಿವ್ ಪಟೇಲ್ ಮತ್ತು ಎಬಿ ಡಿ’ವಿಲಿಯರ್ ದ್ವಿತೀಯ ವಿಕೆಟಿಗೆ 55 ರನ್ ಪೇರಿಸಿದರು. ಆದರೆ ಈ ಜೋಡಿ ಮುರಿದ ಬಳಿಕ ಬೆಂಗಳೂರು ನಾಟಕೀಯ ಕುಸಿತ ಕಂಡಿತು. ಈ ಆಘಾತದಿಂದ ಕೊನೆಯತನಕವೂ ಅದು ಚೇತರಿಸಿಕೊಳ್ಳಲೇ ಇಲ್ಲ.
ಗೋಪಾಲ್ ಮಾರಕ ದಾಳಿ
ರಾಜಸ್ಥಾನ್ ಗೆಲುವಿನಲ್ಲಿ ಶ್ರೇಯಸ್ ಗೋಪಾಲ್ ಪ್ರಮುಖ ಪಾತ್ರ ವಹಿಸಿದರು. ಕರ್ನಾಟಕದ ಗೋಪಾಲ್ ಸ್ಮರಣೀಯ ದಾಳಿ ಸಂಘಟಿಸಿ ಬೆಂಗಳೂರಿಗೆ ಪ್ರಬಲ ಹೊಡೆತ ನೀಡಿದರು. ಪಾರ್ಥಿವ್ ಮತ್ತು ಡಿ’ವಿಲಿಯರ್ ಜೋಡಿಯನ್ನು ಮುರಿದ ಅವರು ತನ್ನ 4 ಓವರ್‌ಗಳ ದಾಳಿಯಲ್ಲಿ ಕೇವಲ 16 ರನ್ನಿಗೆ 4 ವಿಕೆಟ್ ಕಿತ್ತು ಮಿಂಚಿದರು. ಅರ್ಹವಾಗಿ ಪಂದ್ಯಶ್ರೇಷ್ಠ ಪ್ರಶಸ್ತಿ ಒಲಿಸಿಕೊಂಡರು. ಕ್ಲಾಸೆನ್ ಮೂರು ಸ್ಟಂಪ್ ಔಟ್ ಮಾಡಿಸಿ ಗೆಲುವಿಗೆ ತನ್ನ ಕೊಡುಗೆ ಸಲ್ಲಿಸಿದರು.
ಗೋಪಾಲ್ ಅವರ ಈ ದಾಳಿಯಿಂದಾಗಿ ಬೆಂಗಳೂರು 33 ರನ್ ಅಂತರದಲ್ಲಿ 7 ವಿಕೆಟ್ ಕಳೆದುಕೊಂಡು ಸೋಲಿನತ್ತ ಮುಖ ಮಾಡಿತು. ಒಂದು ಹಂತದಲ್ಲಿ 1 ವಿಕೆಟಿಗೆ 75ರನ್ ಗಳಿಸಿದ್ದ ಬೆಂಗಳೂರು ತಂಡವು 108 ರನ್ ತಲುಪಿದಾಗ 8 ವಿಕೆಟ್ ಕಳೆದುಕೊಂಡಿತ್ತು. ಎಬಿ ಡಿ’ ವಿಲಿಯರ್ ಹೋರಾಟದ 53 ರನ್ ಗಳಿಸಿದರು. ಅವರು 6ನೆಯವರಾಗಿ ಔಟಾಗುತ್ತಲೇ ತಂಡದ ಸೋಲು ಖಚಿತವಾಯಿತು.
ಸ್ಕೋರ್‌ಪಟ್ಟಿ
ರಾಜಸ್ಥಾನ್ ರಾಯಲ್ಸ್
ರಾಹುಲ್ ತ್ರಿಪಾಠಿ ಔಟಾಗದೆ 80
ಜೋಫ್ರಾ ಆರ್ಚರ್ ಸಿ ಪಟೇಲ್ ಬಿ ಯಾದವ್ 0
ಅಜಿಂಕ್ಯ ರಹಾನೆ ಎಲ್‌ಬಿಡಬ್ಲ್ಯು ಯಾದವ್ 33
ಸಂಜು ಸ್ಯಾಮ್ಸನ್ ಸಿ ಅಲಿ ಬಿ ಯಾದವ್ 0
ಹೆನ್ರಿಕ್ ಕ್ಲಾಸೆನ್ ಸಿ ಅಲಿ ಬಿ ಸಿರಾಜ್ 32
ಕೃಷ್ಣಪ್ಪ ಗೌತಮ್ ರನೌಟ್ 14
ಇತರ: 5
ಒಟ್ಟು (20 ಓವರ್‌ಗಳಲ್ಲಿ 5 ವಿಕೆಟಿಗೆ) 164
ವಿಕೆಟ್ ಪತನ: 1-2, 2-101, 3-101, 4-149, 5-164
ಬೌಲಿಂಗ್:
ಯಜುವೇಂದ್ರ ಚಹಲ್ 4-0-26-0
ಉಮೇಶ್ ಯಾದವ್ 4-1-25-3
ಮೊಯಿನ್ ಅಲಿ 2-0-19-0
ಟಿಮ್ ಸೌಥಿ 4-0-37-0
ಮೊಹಮ್ಮದ್ ಸಿರಾಜ್ 4-0-33-1
ಕಾಲಿನ್ 2-0-23-0
ರಾಯಲ್ ಚಾಲೆಂಜರ್ ಬೆಂಗಳೂರು
ವಿರಾಟ್ ಕೊಹ್ಲಿ ಬಿ ಗೌತಮ್ 4
ಪಾರ್ಥಿವ್ ಪಟೇಲ್ ಸ್ಟಂಪ್ಡ್ ಕ್ಲಾಸೆನ್ ಬಿ ಗೋಪಾಲ್ 33
ಎಬಿ ಡಿ’ವಿಲಿಯರ್ ಸ್ಟಂಪ್ಡ್ ಕ್ಲಾಸೆನ್ ಬಿ ಗೋಪಾಲ್ 53
ಮೊಯಿನ್ ಅಲಿ ಸಿ ಮತ್ತು ಬಿ ಗೋಪಾಲ್ 1
ಮನ್‌ದೀಪ್ ಸಿಂಗ್ ಸ್ಟಂಪ್ಡ್ ಕ್ಲಾಸೆನ್ ಬಿ ಗೋಪಾಲ್ 3
ಕಾಲಿನ್ ಸಿ ರಹಾನೆ ಬಿ ಸೋಧಿ 2
ಸಫìರಾಜ್ ಖಾನ್ ಸಿ ಕ್ಲಾಸೆನ್ ಬಿ ಲಾಲಿನ್ 7
ಟಿಮ್ ಸೌಥಿ ಸಿ ಗೌತಮ್ ಬಿ ಉನಾದ್ಕತ್ 14
ಉಮೇಶ್ ಯಾದವ್ ಬಿ ಲಾಲಿನ್ 0
ಮೊಹಮ್ಮದ್ ಸಿರಾಜ್ ಸಿ ಗೌತಮ್ ಬಿ ಉನಾದ್ಕತ್ 14
ಯಜುವೇಂದ್ರ ಚಹಲ್ ಔಟಾಗದೆ 0
ಇತರ: 3
ಒಟ್ಟು (19.2 ಓವರ್‌ಗಳಲ್ಲಿ ಆಲೌಟ್) 134
ವಿಕೆಟ್ ಪತನ: 1-20, 2-75, 3-77, 4-85, 5-96, 6-98, 7-108, 8-108, 9-128
ಬೌಲಿಂಗ್:
ಕೃಷ್ಣಪ್ಪ ಗೌತಮ್ 2-0-6-1
ಜೋಫ್ರಾ ಆರ್ಚರ್ 4-0-37-0
ಬೆನ್ ಲಾಲಿನ್ 2-0-15-0
ಜೈದೇವ್ ಉನಾದ್ಕತ್ 3.2-0-27-2
ಶ್ರೇಯಸ್ ಗೋಪಾಲ್ 4-0-16-4
ಐಶ್ ಸೋಧಿ 4-0-31-1
ಪಂದ್ಯಶ್ರೇಷ್ಠ: ಶ್ರೇಯಸ್ ಗೋಪಾಲ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Ullala: ಉಚ್ಚಿಲದ ರೆಸಾರ್ಟ್ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾವು!
BBK11: ನೇರ ನಡೆ, ನುಡಿಯಿಂದ ಗಮನ ಸೆಳೆದಿದ್ದ ಈ ಸ್ಪರ್ಧಿ; ಮನೆಯಿಂದ ಹೊರಕ್ಕೆ?
Mike Tyson: ವಿದಾಯದ ಸುಳಿವು ನೀಡಿದ ಬಾಕ್ಸಿಂಗ್ ದಿಗ್ಗಜ ಮೈಕ್ ಟೈಸನ್
Patna: ಆಸ್ಪತ್ರೆಯಲ್ಲಿ ಮೃತಪಟ್ಟ ರೋಗಿಯ ಕಣ್ಣೇ ಮಾಯಾ… ಇಲಿ ತಿಂದಿದೆ ಎಂದ ವೈದ್ಯರು
Team India: ವಿರಾಟ್ ಕೊಹ್ಲಿ ದಾಖಲೆ ಮುರಿದ ತಿಲಕ್ ವರ್ಮಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.