ಬಿಲ್ಗಾರಿಕೆ ಸಂಸ್ಥೆ ವಿರುದ್ಧ ಆಕ್ರೋಶ
Team Udayavani, Jan 8, 2020, 11:32 PM IST
ಪುಣೆ: ಅಂತಾರಾಷ್ಟ್ರೀಯ ಬಿಲ್ಗಾರಿಕೆ ಸಂಸ್ಥೆಯಿಂದ ಅಮಾನತಿಗೊಳಗಾಗಿರುವ ಭಾರತ ಬಿಲ್ಗಾರಿಕೆ ಸಂಸ್ಥೆಯ ಗೋಳು ಮುಗಿಯುತ್ತಿಲ್ಲ. ಒಲಿಂಪಿಕ್ಸ್ ಅರ್ಹತಾ ಸುತ್ತಿನ ಆಯ್ಕೆ ವೇಳೆ, ಬಿಲ್ಗಾರಿಕಾ ಸಂಸ್ಥೆಯವರು ಸತತ 12 ಗಂಟೆ ಸ್ಪರ್ಧೆ ನಡೆಸಿದ್ದಾರೆ. ಒಬ್ಬೊಬ್ಬ ಸ್ಪರ್ಧಿ 15 ಪಂದ್ಯಗಳಲ್ಲಿ ಭಾಗವಹಿಸುವಂತಾಗಿದೆ. ನಿಯಮ ಮೀರಿ ಈ ರೀತಿಯ ಸ್ಪರ್ಧೆ ನಡೆಸಲಾಗಿದೆ ಎಂದು ಬಿಲ್ಗಾರರು ಆರೋಪಿಸಿದ್ದಾರೆ.
“ಪುಣೆಯ ಆರ್ಮಿ ನ್ಪೋರ್ಟ್ಸ್ ಇನ್‌ಸ್ಟಿಟ್ಯೂಟ್ ಕ್ಯಾಂಪಸ್‌ನಲ್ಲಿ ಬೆಳಗ್ಗೆ 8ರಿಂದ ರಾತ್ರಿ 8ರ ವರೆಗೆ ಸ್ಪರ್ಧೆಗಳು ನಡೆದವು. ರಾತ್ರಿ ಹೊತ್ತು ವಿದ್ಯುತ್ ಬೆಳಕಿನಲ್ಲಿ ಕೆಲವು ಸ್ಪರ್ಧಿಗಳಿಗೆ ಸರಿಯಾಗಿ ಗುರಿಯನ್ನು ಗುರುತಿಸಲು ಸಾಧ್ಯವೇ ಆಗಲಿಲ್ಲ. ನಮಗೆ ಊಟಕ್ಕೆ ಅವಕಾಶ ನೀಡಿದ್ದು ಕೇವಲ 30 ನಿಮಿಷ. ಅನಂತರ ಸತತವಾಗಿ ಸ್ಪರ್ಧೆ ನಡೆಸುತ್ತಲೇ ಹೋದರು. ಬಿಲ್ಗಾರಿಕೆ ಸಂಸ್ಥೆಯವರು ನಿಯಮ ಮೀರಿ ಹೀಗೆ ಅಂತಿಮ ಹಂತದಲ್ಲಿ ಸ್ಪರ್ಧೆ ನಡೆಸಿದ್ದಾರೆ’ ಎಂದು ಹೆಸರು ಹೇಳಲಿಚ್ಛಿಸದ ಬಿಲ್ಗಾರರೊಬ್ಬರು ಆರೋಪಿಸಿದ್ದಾರೆ.
ತಪ್ಪಾಯಿತು ಎಂದ ಅಧಿಕಾರಿಗಳು
ಬಿಲ್ಗಾರಿಕೆ ಸಂಸ್ಥೆ ನಡೆಸಿದ ಆಯ್ಕೆ ಕ್ರಮವನ್ನು ಸಂಸ್ಥೆಯ ಅಧಿಕಾರಿಯೊಬ್ಬರು ತಪ್ಪೆಂದು ಹೇಳಿದ್ದಾರೆ. ಈ ರೀತಿ ದಿನಕ್ಕೆ 15 ಪಂದ್ಯಗಳಲ್ಲಿ ಸ್ಪರ್ಧಿಸುವಂತೆ ಮಾಡುವುದು ತಪ್ಪು. ಈ ಹಿಂದೆ ದಿನಕ್ಕೆ 12 ಪಂದ್ಯ ನಡೆಸಿದ ಉದಾಹರಣೆಯಿದೆ. ಅದೂ ಬೆಳಗ್ಗೆ, ಸಂಜೆ ವೇಳೆ ಸಮಯ ವಿಂಗಡಿಸಿ ಸ್ಪರ್ಧೆ ನಡೆಸಲಾಗಿತ್ತು ಎಂದಿದ್ದಾರೆ.
ಯಾಕೆ ಈ ಸ್ಪರ್ಧೆ?
ಟೋಕಿಯೊ ಒಲಿಂಪಿಕ್ಸ್ ಅರ್ಹತಾ ಸುತ್ತಿಗೆ 8 ಸ್ಪರ್ಧಿಗಳನ್ನು ಆಯ್ಕೆ ಮಾಡಲು ಈ ಸ್ಪರ್ಧೆಯನ್ನು ನಡೆಸಲಾಗಿತ್ತು. ಇಲ್ಲಿ ಆಯ್ಕೆಯಾದ 8 ಮಂದಿ, ಉಳಿದ 12 ಮಂದಿ ಈ ತಿಂಗಳಲ್ಲಿ ನಡೆಯುವ ಇತರ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಾರೆ. ಅಲ್ಲಿ ಆಯ್ಕೆಯಾದ 12 ಮಂದಿ ಒಲಿಂಪಿಕ್ಸ್ ಅರ್ಹತಾ ಸುತ್ತಿನಲ್ಲಿ ಆಡುತ್ತಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
By Election: ಯೋಗೇಶ್ವರ್ ನಿಂದಿಸಿದ್ದ ಡಿ.ಕೆ.ಸುರೇಶ್ ಆಡಿಯೋ ಎಚ್‌ಡಿಕೆ ಬಿಡುಗಡೆ
By Election: ನಾಗೇಂದ್ರ, ಜಮೀರ್, ಡಿಕೆಶಿ ಮೇಲೆ ಚುನಾವಣಾ ಆಯೋಗ ಕಣ್ಣಿಡಲಿ: ಡಿವಿಎಸ್
Waqf: ಮುಸ್ಲಿಮರ ಗುರಿ ಮಾಡುವುದು ಬಿಟ್ಟರೆ ಬಿಜೆಪಿಗೆ ಬೇರೇನೂ ಇಲ್ಲ: ಸಚಿವ ದಿನೇಶ್
Maharashtra: ಸ್ತ್ರೀಯರಿಗೆ ಮಾಸಿಕ 3000, ರೈತರ ಸಾಲ ಮನ್ನಾ: ಎಂವಿಎ
Jet Airways ಆಸ್ತಿ ಮಾರಾಟಕ್ಕೆ ಸುಪ್ರೀಂ ಕೋರ್ಟ್ ಅನುಮತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.